ಭಾನುವಾರ, ಏಪ್ರಿಲ್ 18, 2021
31 °C

ಮಿಸರತ ತ್ಯಜಿಸಿದ ಗಡಾಫಿ ಪಡೆ, ಬುಡಕಟ್ಟು ಮುಖಂಡರ ಸಂಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟ್ರಿಪೋಲಿ (ಎಪಿ): ಮಿಸರತ ನಗರದಲ್ಲಿರುವ ಬಂಡುಕೋರ ಜತೆಗೆ ಸ್ಥಳೀಯ ಬುಡಕಟ್ಟು ಮುಖಂಡರು ಸಂಧಾನ ಪ್ರಯತ್ನ ಆರಂಭಿಸಿದ್ದು, ಶಸ್ತ್ರಾಸ್ತ್ರ ಒಪ್ಪಿಸಿ ಶರಣಾಗಲು 48 ಗಂಟೆಗಳ ಬಂಡುಕೋರರಿಗೆ ಗಡುವು  ನೀಡಲಾಗಿದೆ.ಒಂದು ದಿನದ ಭಾರಿ ಕಾಳಗದ ಬಳಿಕ ಮಾತುಕತೆಯ ಈ ಹೊಸ ಅಂಕ ಆರಂಭವಾಗಿದೆ. ಇದುವರೆಗಿನ ಹೋರಾಟದಲ್ಲಿ ನಗರದಲ್ಲಿ 25 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.ಒಂದು ವೇಳೆ ಮಾತುಕತೆ ವಿಫಲವಾದಲ್ಲಿ ಬುಡಕಟ್ಟು ನಾಯಕರು, ಶಸ್ತ್ರಸಜ್ಜಿತ ಬೆಂಬಲಿಗರನ್ನು ನಗರಕ್ಕೆ ನುಗ್ಗಿಸಿ ಬಂಡುಕೋರರನ್ನೇ ಬಗ್ಗುಬಡಿಯುವರು ಎಂದು ಲಿಬಿಯಾದ ವಿದೇಶಾಂಗ ಉಪ ಸಚಿವ ಖಾಲಿದ್ ಕಯೀಂ  ತಿಳಿಸಿದರು. ನಗರದಲ್ಲಿ ಜನಸಂಖ್ಯೆ ಮೂರು ಲಕ್ಷದಷ್ಟಿದೆ ಎನ್ನಲಾಗಿದೆ.ತನ್ಮಧ್ಯೆ ಗಡಾಫಿ  ಬೆಂಬಲದ ಸರ್ಕಾರಿ ಸೇನೆ ಮಿಸರತ ನಗರಕ್ಕಾಗಿ ಸಶಸ್ತ್ರ ಹೋರಾಟ ಸ್ಥಗಿತಗೊಳಿಸಿದೆ. ನಗರದಿಂದ ಸೇನೆ ವಾಪಸಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಆದರೆ ಪೂರ್ಣ ವಾಪಸಾತಿ ದೃಢ ಪಟ್ಟಿಲ್ಲ.

ಮಾತುಕತೆಗೆ ಆದ್ಯತೆ: ಲಿಬಿಯಾ ಸೇನೆಯು ದೇಶದ ಮೂರನೇ ಅತಿದೊಡ್ಡ ನಗರವಾದ ಮಿಸರತವನ್ನು ತ್ಯಜಿಸುವುದಿಲ್ಲ. ಆದರೆ ಬಂಡುಕೋರರ ವಿರುದ್ಧದ ಕಾರ್ಯಾಚರಣೆಯನ್ನು ಕೊನೆಗೊಳಿಸಿ ಅವರೊಂದಿಗೆ ಮಾತುಕತೆಗೆ ಆದ್ಯತೆ ನೀಡಲಿದೆ   ಎಂದು ಕಯೀಂ ಭಾನುವಾರ ತಿಳಿಸಿದ್ದಾರೆ.‘ಅಲ್ಲಿನ ಸಮಸ್ಯೆಗಳಿಗೆ ಸ್ಥಳೀಯ ಬುಡಕಟ್ಟು ಜನರಿಂದಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆದಿದೆ. ಆದರೂ ಸೇನೆ ಅಲ್ಲಿಯೇ ಇರುತ್ತದೆ. ಆದರೆ ಕಾರ್ಯಾಚರಣೆಯನ್ನು ಕೊನೆಗೊಳಿಸಿದೆ’ ಎಂದು ಅವರು ಹೇಳಿದ್ದಾರೆ.ಬುಡಕಟ್ಟು ಜನರು 48 ಗಂಟೆಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸುವರು. ಸೇನಾ ಕಾರ್ಯಾಚರಣೆಗಿಂತ ಶಾಂತಿ ಸಂಧಾನದ ಮೂಲಕ ಯುದ್ಧಕೊನೆಗೊಳ್ಳಬಹುದು ಎಂಬ ನಂಬಿಕೆ ಇದೆ ಎಂದು ಅವರು ತಿಳಿಸಿದ್ದಾರೆ.ಖಾಲಿದ್ ಅವರು ಶುಕ್ರವಾರ ನೀಡಿದ ಹೇಳಿಕೆಯಲ್ಲಿ, ಲಿಬಿಯಾ ಸೇನೆ ಮಿಸರತ ಪಟ್ಟಣವನ್ನು ತ್ಯಜಿಸಲಿದೆ. ಬುಡಕಟ್ಟು ಜನರೇ ಅಲ್ಲಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವರು ಎಂದು ಹೇಳಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.