ಬುಧವಾರ, ಜೂನ್ 16, 2021
27 °C

ಮೀನುಗಾರರ ಮೇಲೆ ಹಲ್ಲೆ ಕ್ರಮಕ್ಕೆ ಭಾರತದ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ರಾಮೇಶ್ವರ (ಪಿಟಿಐ):  ಶ್ರೀಲಂಕಾ ನೌಕಾದಳದವರು ಭಾರತದ 16 ಮಂದಿ ಮೀನುಗಾರರ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ವಿಚಾರವನ್ನು ಸಂಬಂಧಪಟ್ಟ ಶ್ರೀಲಂಕಾ ಅಧಿಕಾರಿಗಳ ಜತೆ ಚರ್ಚಿಸುವಂತೆ ಕೊಲಂಬೊ ದಲ್ಲಿಯ ಭಾರತದ ರಾಯಭಾರ ಕಚೇರಿಗೆ ಸೂಚಿಸಲಾಗಿದೆ.ಸಮುದ್ರದಲ್ಲಿ ಅಂತರರಾಷ್ಟ್ರೀಯ ಜಲಗಡಿಯ ಬಳಿ ಮೀನುಗಾರಿಕೆ ನಡೆಸುತ್ತಿದ್ದ 16 ಮಂದಿ ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾದ ನೌಕಾಪಡೆಯ ಸಿಬ್ಬಂದಿ ಹಲ್ಲೆ ಮಾಡಿದ್ದರಿಂದ ಎಲ್ಲಾ ಮೀನುಗಾರರೂ ಗಾಯಗೊಂಡಿದ್ದಾರೆ.ನೌಕಾಪಡೆಯ ಸಿಬ್ಬಂದಿ ದೊಣ್ಣೆ, ಕಲ್ಲು ಮತ್ತು ಬಾಟಲಿಗಳಿಂದ ಮೀನುಗಾರರ ಮೇಲೆ ಹಲ್ಲೆ ನಡೆಸಿದ್ದರಿಂದ 25 ವರ್ಷದ ಮೀನುಗಾರನ ಮೂಳೆ ಮುರಿದಿದೆ ಮತ್ತು ಇತರರಿಗೆ ತೀವ್ರವಾದ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಮೀನುಗಾರಿಕೆ ನಡೆಸುತ್ತಿದ್ದ 25 ದೋಣಿಗಳನ್ನು ಸುತ್ತುವರಿದ ನೌಕಾಪಡೆಯ ಸಿಬ್ಬಂದಿ ತಮ್ಮ ಮೇಲೆ ಕಲ್ಲು ಮತ್ತು ಬಾಟಲಿಗಳನ್ನು ತೂರಿದರು ಮತ್ತು ದೋಣಿ ಹಾಗೂ ಬಲೆಗೆ ಹಾನಿ ಉಂಟು ಮಾಡಿದರು ಎಂದು ಮೂಳೆ ಮುರಿದಿರುವ ಯುವಕ ತಿಳಿಸಿದ್ದಾನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.