ಮಂಗಳವಾರ, ಮೇ 18, 2021
24 °C

ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದೆ.ಕೊಪ್ಪಳ, ಸಿಂಧನೂರು, ಬೇಲೂರು, ಬೆಂಗಳೂರು ನಗರದಲ್ಲಿ 10 ಸೆಂ.ಮೀ ಮಳೆಯಾಗಿದೆ. ಗಂಗಾವತಿ, ಮೂಡಿಗೆರೆ 9, ಪಣಂಬೂರು, ಉಡುಪಿ, ಕುಂದಾಪುರ, ಕಾರವಾರ, ಕೊಪ್ಪಳ, ತಾವರಗೆರೆ, ಬೆಂಗಳೂರು ವಿಮಾನ ನಿಲ್ದಾಣ, ಚಳ್ಳಕೆರೆ 8, ಕುಷ್ಟಗಿ, ಲಿಂಗಸುಗೂರು, ಕಂಪ್ಲಿ, ಚಿತ್ರದುರ್ಗ ರಾಮನಗರ 7, ಮಂಗಳೂರು, ಸುಬ್ರಹ್ಮಣ್ಯ, ಶಿಗ್ಗಾವಿ, ಮುಂಡರಗಿ, ಕರಟಗಿ, ಬೇವೂರು, ಮಾನ್ವಿ, ಮಸ್ಕಿ, ಹಾಸನ, ಮದ್ದೂರು, ಹೊಸಪೇಟೆ, ದಾವಣಗೆರೆ, ಚಿಂತಾಮಣಿ, ಬರಗೂರು 6, ಬೆಳ್ತಂಗಡಿ, ಉಪ್ಪಿನಂಗಡಿ, ಕೋಟ, ಸಿದ್ದಾಪುರ, ಸವಣೂರು, ಹಾವೇರಿ, ಮುನಿರಾಬಾದ್, ಹನುಮಸಾಗರ, ಸಿಂಧಗಿ, ಕಿಕ್ಕೇರಿ, ಸಕಲೇಶಪುರ, ಶ್ರವಣಬೆಳಗೊಳ, ಪಿರಿಯಾಪಟ್ಟಣ, ಹುಣಸೂರು, ಬಂಗಾರಪೇಟೆ, ಹೊಸಹಳ್ಳಿ, ಚನ್ನಗಿರಿ, ಹಿರಿಯೂರು, ನಾಯಕನಹಟ್ಟಿ, ಕುಣಿಗಲ್, ಶಿರಾ, ಮಾಗಡಿ, ಕನಕಪುರ 5, ಮೂಡಿಬಿದಿರೆ, ಅಂಕೋಲ, ಖಾನಾಪುರ, ಬ್ಯಾಡಗಿ, ರಾಣೆಬೆನ್ನೂರು, ಹಾವೇರಿ, ಮೂರ್ನಾಡು, ಲಿಂಗದಹಳ್ಳಿ, ಹಳ್ಳಿ ಮೈಸೂರು, ಶ್ರೀರಂಗಪಟ್ಟಣ, ಬಸರಲು, ರಾಯಲ್ಪಾಡು, ಆನೇಕಲ್, ಹಡಗಲಿ, ತೆಲಗಿ, ಹರಿಹರ, ಹರಪನಹಳ್ಳಿ, ಜಗಳೂರು, ಪರಶುರಾಮಪುರ, ಮೊಳಕಾಲ್ಮೂರು, ಚನ್ನಪಟ್ಟಣ 4, ಬಂಟ್ವಾಳ, ಪುತ್ತೂರು, ಬನವಾಸಿ, ಶಿರಸಿ, ಮಂಚಿಕೇರಿ, ಯಲ್ಲಾಪುರ, ಹೊನ್ನಾವರ, ಧಾರವಾಡ, ಕಲಘಟಗಿ, ಹಾನಗಲ್, ಗದಗ, ಶಿರಹಟ್ಟಿ, ಯಲಬುರ್ಗ, ಹುನಗುಂದ, ಬಬಲೇಶ್ವರ, ವಿಜಾಪುರ, ಆಗುಂಬೆ, ಸೊರಬ, ಶಿಕಾರಿಪುರ, ಚಿಕ್ಕಮಗಳೂರು, ಮೈಸೂರು, ನಂಜನಗೂಡು, ಮಹದೇಶ್ವರ ಬೆಟ್ಟ, ಹೊಸಕೋಟೆ, ನೆಲಮಂಗಲ, ಬಳ್ಳಾರಿ, ಕೂಡ್ಲಿಗಿ, ಸಂತೆಬೆನ್ನೂರು, ಉಚ್ಚಂಗಿದುರ್ಗ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ತುಮಕೂರು 3, ಮಂಗಳೂರು ವಿಮಾನ ನಿಲ್ದಾಣ, ಮಾಣಿ, ಧರ್ಮಸ್ಥಳ, ಸುಳ್ಯ, ಕುಮಟಾ, ಕೂಡಲಸಂಗಮ, ನರಗುಂದ, ಲೋಕಾಪುರ, ಆಲಮಟ್ಟಿ, ಸೇಡಂ, ಮಡಿಕೇರಿ, ಜೇವರ್ಗಿ, ನಾರಾಯಣಪುರ, ಭಾಗಮಂಡಲ, ಸಾಗರ, ತೀರ್ಥಹಳ್ಳಿ, ಭದ್ರಾವತಿ, ಶೃಂಗೇರಿ, ಕಳಸ, ದುದ್ದ, ಬೇಗೂರು, ಗುಂಡ್ಲುಪೇಟೆ, ನಾಗಮಂಗಲ, ಮಂಡ್ಯ, ಮುಳಬಾಗಿಲು, ಶ್ರೀನಿವಾಸಪುರ, ಯಲಹಂಕ, ದೇವನಹಳ್ಳಿ, ಬಳ್ಳಾರಿ, ಗುಡಿಬಂಡೆ, ಗುಬ್ಬಿ, ಹುಲಿಯೂರುದುರ್ಗ 2, ಕಾರ್ಕಳ, ಗೋಕಾಕ, ಬೆಳಗಾವಿ, ಬೈಲಹೊಂಗಲ, ಹುಬ್ಬಳ್ಳಿ, ಲಕ್ಷ್ಮೇಶ್ವರ, ಅಫಜಲಪುರ, ರಾಯಚೂರು, ನಾಪೋಕ್ಲು, ಹಾರಂಗಿ, ಕುಶಾಲನಗರ, ಹಳೇಬೀಡು, ಎಚ್.ಡಿ. ಕೋಟೆ, ಮಳವಳ್ಳಿ, ಕೋಲಾರ, ಮಾಲೂರು, ದೊಡ್ಡಬಳ್ಳಾಪುರ, ಬಾಗೇಪಲ್ಲಿ, ಕಿಬ್ಬನಹಳ್ಳಿ, ಕೊರಟಗೆರೆ, ಚಿಕ್ಕನಹಳ್ಳಿ, ಪಾವಗಡದಲ್ಲಿ ತಲಾ 1 ಸೆಂ.ಮೀ.ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.