ಶನಿವಾರ, ಮೇ 15, 2021
24 °C
ಭಟ್ಕಳ: ಜನಜೀವನ ಅಸ್ತವ್ಯಸ್ತ; ಎರಡು ಮನೆ ಕುಸಿತ

ಮುಂದುವರಿದ ಕಡಲ್ಕೊರೆತ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂದುವರಿದ ಕಡಲ್ಕೊರೆತ: ಆತಂಕ

ಅಂಕೋಲಾ: ಇಲ್ಲಿಯ ಹಾರವಾಡದ ಕಡಲ ಕಿನಾರೆಯಲ್ಲಿ ಕಳೆದೆರಡು ದಿನಗಳಿಂದ  ಕಡಲ್ಕೊರೆತ ಉಂಟಾಗಿದ್ದು, ಮಂಗಳವಾರ ತೀವೃಗೊಂಡಿತು. ಇದು ಸ್ಥಳೀಯ ಮೀನುಗಾರರ ಮತ್ತು ಅಲ್ಲಿಯ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.ಈ ಭಾಗದಲ್ಲಿಹೆಚ್ಚಿನ ಕಡಲ್ಕೊರೆತ ಉಂಟಾಗುತ್ತಿದ್ದರಿಂದ ಕಳೆದ 15 ವರ್ಷಗಳ ಹಿಂದೆ ಸರ್ಕಾರ ಅಂದು ಈ ಗ್ರಾಮದ ಕಡಲ ಕಿನಾರೆಯುದ್ದಕ್ಕೂ ಶಾಶ್ವತ ತಡೆಗೋಡೆಯನ್ನು ನಿರ್ಮಿಸಿತ್ತು. ನಂತರ ಈ ಭಾಗದಲ್ಲಿ ಕಡಲ್ಕೊರೆತ ಉಂಟಾಗಿರಲಿಲ್ಲ. ಬೃಹತ್ ಕಲ್ಲುಗಳ ಮೂಲಕ ತಡೆಗೋಡೆಯನ್ನು ನಿರ್ಮಿಸಿದ್ದರಿಂದ ಕಡಲ್ಕೊರೆತಕ್ಕೆ ತಡೆಬಿದ್ದಿತ್ತು. ಆದರೆ ಈ ವರ್ಷ ಮತ್ತೆ ಕಡಲು ತನ್ನ ಆರ್ಭಟವನ್ನು ಮುಂದುವರೆಸಿದೆ. 15 ವರ್ಷಗಳ ನಂತರ ಆರಂಭವಾದ ಕಡಲ್ಕೊರೆತದಿಂದ ಬೃಹತ್ ಕಲ್ಲುಗಳು ನೀರುಪಾಲಾಗುತ್ತಿವೆ.ಈಗಾಗಲೇ ಕೆಲವು ಕಡೆಗಳಲ್ಲಿ ಧರೆಗಳು, ಉಸುಕಿನ ದಿಬ್ಬಗಳು ಕುಸಿಯುತ್ತಿದ್ದು, ಸ್ಥಳೀಯ ನಿವಾಸಿಗಳ ನಿದ್ದೆಗಡಿಸಿದೆ. ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ಉಮೇಶ ಕಾಂಚನ್, ಸದಸ್ಯ ಶ್ರೀಕಾಂತ ನಾಯ್ಕ ಇತರರು ಆಗ್ರಹಿಸಿದ್ದಾರೆ.ಮನೆ ಕುಸಿತ

ಭಟ್ಕಳ: ತಾಲ್ಲೂಕಿನ 24 ತಾಸು ಸುರಿದ್ದ ಭಾರಿ ಮಳೆಗೆ ಎರಡು ಮನೆಗಳು ಕುಸಿದು ಹಾನಿಗೀಡಾಗಿದೆ.

ಪಟ್ಟಣದ ಕೋಗ್ತಿನಗರದ ನೂರುನ್ನಿಸ್ ಮೊಯಿದ್ದೀನ್ ಸಾಬ್ ಹಾಗೂ ಬೇಂಗ್ರೆಯಲ್ಲಿ  ಸುಬ್ರಾಯ ಅಣ್ಣಪ್ಪ ನಾಯ್ಕ ಎಂಬವರ ಮನೆಗಳು ಮಳೆಯ ರಭಸಕ್ಕೆ ಕುಸಿದು ಹಾನಿಗೀಡಾಗಿದೆ.ಸ್ಥಳಕ್ಕೆ ಕಂದಾಯ ಇಲಾಖೆ ಹಾಗು ಸ್ಥಳೀಯ ಗ್ರಾ.ಪಂ.ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಹಾನಿಯ ಅಂದಾಜು ಮಾಡಿದ್ದಾರೆ. ತಾಲ್ಲೂಕಿನಲ್ಲಿ ದಾಖಲೆ ಎಂಬಂತೆ ಮಂಗಳವಾರ 180 ಮಿ.ಮೀ ಮಳೆಯಾಗಿದೆ. ಈವರೆಗೆ ಒಟ್ಟು 682 ಮಿ.ಮೀ. ಮಳೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.