ಸೋಮವಾರ, ಮಾರ್ಚ್ 8, 2021
24 °C
ನಿವೇಶನ ಬೇಡಿಕೆ ಸಮೀಕ್ಷಾ ಕಾರ್ಯಕ್ಕೆ ಅರ್ಜಿ ಸಲ್ಲಿಕೆ

ಮುಗಿಬಿದ್ದ ಸಾರ್ವಜನಿಕರು: ನೂಕು ನುಗ್ಗಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಗಿಬಿದ್ದ ಸಾರ್ವಜನಿಕರು: ನೂಕು ನುಗ್ಗಲು

ಹೊಸಪೇಟೆ: ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ನಡೆಸುತ್ತಿರುವ ನಿವೇಶನದ ಬೇಡಿಕೆ ಸಮೀಕ್ಷಾ ಕಾರ್ಯಕ್ಕೆ ಅರ್ಜಿ ಸಲ್ಲಿಸಲು ಅವಧಿ ಮುಗಿಯುತ್ತಾ ಬಂದಿದ್ದು, ಬುಧವಾರ ಅರ್ಜಿ ಸಲ್ಲಿಸಲು ಸಾರ್ವಜನಿಕರು ಮುಗಿಬಿದಿದ್ದರು.

ನಗರದ ಪ್ರಗತಿ ಕೃಷ್ಣಾ ಗ್ರಾಮೀಣನಲ್ಲಿ ಅರ್ಜಿ ಶುಲ್ಕ ತುಂಬಿ ಚಲನ್‌ ಪಡೆಯಲು ಸಾರ್ವಜನಿಕರು ಕಿಕ್ಕಿರಿದು ತುಂಬಿದ್ದು, ದಿನವಿಡಿ ಕಾದು ಅರ್ಜಿ ಸಲ್ಲಿಸಿದರು. ಇನ್ನು ಕೆಲವರು ದಿನವಿಡಿ ಸರದಿಯಲ್ಲಿ ನಿಂತರೂ ಸಮಯ ಮೀರಿದ್ದರಿಂದ ಅರ್ಜಿ ಸಲ್ಲಿಸಲಾಗದೆ ಮರಳಿದರು.ಕಳೆದ ಫೆಬ್ರುವರಿ 12ರಂದು ಅರ್ಜಿ ಸಲ್ಲಿಸುವ ಕಾರ್ಯ ಆರಂಭವಾಗಿದ್ದು, ಇದೇ 28ರಂದು ಕೊನೆಗೊಳ್ಳಲಿದೆ. 27ರಂದು ಮಹಾ ಶಿವರಾತ್ರಿ ಪ್ರಯುಕ್ತ ಸರ್ಕಾರಿ ರಜೆ ಇರುವುದರಿಂದ ಅರ್ಜಿ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿದೆ. ಈ ಕಾರಣದಿಂದ ಅರ್ಜಿ ಸಲ್ಲಿಸಲು ಜನರು ಬುಧವಾರ ಬೆಳಿಗ್ಗೆಯಿಂದಲೇ ಜಮಾಯಿಸಿದ್ದರು.ಬ್ಯಾಂಕ್‌ ಮೊದಲ ಮಹಡಿಯಲ್ಲಿ ಇರುವುದರಿಂದ ದೂರದ ವರೆಗೂ ಸಾಲುಗಟ್ಟಿ ನಿಂತುಕೊಂಡಿದ್ದರು. ಅಲ್ಲದೆ ಬೇರೆ ಮಾರ್ಗ ಉಪಯೋಗಿಸಿ ಬ್ಯಾಂಕ್‌ ಒಳಗೆ ನುಗ್ಗಲು ಕೆಲ ಯುವಕರು ಯತ್ನಿಸಿದ್ದೂ ಕಂಡು ಬಂದಿತು.ನೀರು ಆಹಾರವಿಲ್ಲದೆ ಸರದಿಯಲ್ಲಿ ನಿಂತಿದ್ದ ಜನರು ಮಧ್ಯಾಹ್ನ ವಾಗುತ್ತಿದ್ದಂತೆ ಬಿರು ಬಿಸಿಲಿನ ತಾಪಕ್ಕೆ ಬಳಲಿದರು. ಕೇವಲ ಸಮೀಕ್ಷಾ ಕಾರ್ಯಕ್ಕೆ ಅರ್ಜಿ ಪಡೆಯಲಾಗುತ್ತಿದೆ. ಆದರೆ ಜನರು ನಿವೇಶನಕ್ಕಾಗಿಯೇ ಅರ್ಜಿ ಪಡೆಯುತ್ತಿದ್ದಾರೆ ಎಂದುಕೊಂಡು ಬೆಳಗಿನಿಂದ ಸಂಜೆವರೆಗೂ ಸರದಿಯಲ್ಲಿ ನಿಂತುಕೊಂಡಿದ್ದ ಬಹುತೇಕರು ತಿಳಿದುಕೊಂಡಿದ್ದರು.ಬುಧವಾರ ಸಂಜೆಗೆ 1600 ಅರ್ಜಿಗಳು ಸಲ್ಲಿಕೆಯಾಗಿವೆ. 20x30 ಅಡಿ ನಿವೇಶನಕ್ಕೆ ₨ 350, 30x40 ಅಡಿ ನಿವೇಶನಕ್ಕೆ ₨ 750 ಹಾಗೂ 60x40 ಅಡಿ ನಿವೇಶನಕ್ಕೆ ₨ 1000 ಅರ್ಜಿ ಶುಲ್ಕ ಪಡೆಯಲಾಗುತ್ತಿದೆ.ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್‌.ಡಿ.ಜೋಶಿ ಅವರು, ‘ನಗರದಲ್ಲಿ ಎಷ್ಟು ನಿವೇಶನಗಳ ಅಗತ್ಯವಿದೆ ಎಂಬುದನ್ನು ತಿಳಿದುಕೊಳ್ಳಲು ಸಮೀಕ್ಷೆಗಾಗಿ ಅರ್ಜಿ ಪಡೆಯಲಾಗುತ್ತಿದೆ. ಅರ್ಜಿ ಸಲ್ಲಿಸಲು ಇದೆ 28 ಕೊನೆಯ ದಿನವಾಗಿರುವ ಕಾರಣ ಸಾರ್ವಜನಿಕರು ಮುಗಿ ಬೀಳುತ್ತಿದ್ದಾರೆ. ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸುವ ಯೋಚನೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.