ಮುಂಬೈ (ಪಿಟಿಐ): ಸಂಸ್ಥೆಯನ್ನು ಮುಚ್ಚುವ ವದಂತಿಗೆ ತೆರೆ ಎಳೆಯಲು ಪ್ರಯತ್ನಿಸಿರುವ ಕಿಂಗ್ಫಿಷರ್, ಬ್ಯಾಂಕ್ ಖಾತೆಗಳ ಮುಟ್ಟುಗೋಲು ತೆರವುಗೊಳಿಸಲು ಆದಾಯ ತೆರಿಗೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸುತ್ತಿರುವುದಾಗಿ ಭಾನುವಾರ ಹೇಳಿದೆ. ಅಲ್ಲದೆ, ಪ್ರತಿಭಟನಾ ನಿರತ ಪೈಲಟ್ಗಳಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ.

ಕರ್ತವ್ಯಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜಯ್ ಅಗರವಾಲ್, ಗುರುವಾರ ನಡೆದ ಸಭೆಯಲ್ಲಿ ಎಚ್ಚರಿಕೆ ನೀಡುವ ಮೂಲಕ ಸಂಸ್ಥೆಯನ್ನು ಮುಚ್ಚುವ ಸೂಚನೆ ನೀಡಿದ್ದರು ಎಂದು ಪೈಲಟ್ಗಳು ಹೇಳಿದ್ದಾರೆ.

`ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಲು ಅಗರವಾಲ್ ಪೈಲಟ್ಗಳನ್ನು ಭೇಟಿಯಾಗಿದ್ದರು. ಸಂಸ್ಥೆಯನ್ನು ಮುಚ್ಚುವ ಸೂಚನೆ ನೀಡಿಲ್ಲ~ ಎಂದು ಕಿಂಗ್ಫಿಷರ್ ಏರ್ಲೈನ್ಸ್ನ ಕಾರ್ಪೊರೇಟ್ ಸಂಪರ್ಕದ ಉಪಾಧ್ಯಕ್ಷ ಪ್ರಕಾಶ್ ಮಿರ್ಪುರಿ ಹೇಳಿದ್ದಾರೆ.

`ಆದಾಯ ತೆರಿಗೆ ಅಧಿಕಾರಿಗಳ ಜತೆ ನಮ್ಮ ಕೈಲಾದ ರೀತಿಯಲ್ಲಿ ಸಹಕರಿಸುತ್ತಿದ್ದೇವೆ ಮತ್ತು ಶೀಘ್ರವೇ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲಿನಿಂದ ತೆರವುಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇದರಿಂದ ವೇತನ ಪಾವತಿಗೆ ಅನುಕೂಲವಾಗುತ್ತದೆ~ ಎಂದು ತಿಳಿಸಿದ್ದಾರೆ.

ಆದರೆ, ಗುರುವಾರದ ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ಪೈಲಟ್ಗಳು ವ್ಯತಿರಿಕ್ತವಾದ ಹೇಳಿಕೆ ನೀಡಿದ್ದಾರೆ.
`ನಿಮಗೆ ಇಷ್ಟವಿದ್ದರೆ ಕೆಲಸಕ್ಕೆ ಬನ್ನಿ, ಇಲ್ಲದಿದ್ದರೆ ನಾವು ಕಠಿಣ ನಿರ್ಧಾರ (ಸಂಸ್ಥೆಯನ್ನು ಸಂಪೂರ್ಣವಾಗಿ ಮುಚ್ಚುವುದು) ತೆಗೆದುಕೊಳ್ಳಬೇಕಾಗುತ್ತದೆ. ಮಾರ್ಚ್ 10ರೊಳಗೆ ಏನನ್ನೂ ಹೇಳಲಾಗದು~ ಎಂದು ಅಗರವಾಲ್ ತಿಳಿಸಿದ್ದಾಗಿ ಪೈಲಟ್ಗಳು ಹೇಳಿದ್ದಾರೆ.

`ಡಿಸೆಂಬರ್ನಿಂದ ಬಾಕಿ ಇರುವ ವೇತನ ಪಾವತಿಸುವಂತೆ ನಾವು ಮುಂದಿಟ್ಟಿರುವ ಬೇಡಿಕೆ ಈಡೇರಿಸಲು ಅಗರವಾಲ್ ಬದ್ಧರಾಗಿಲ್ಲ~ ಎಂದು ಹಿರಿಯ ಪೈಲಟ್ ಒಬ್ಬರು ಹೇಳಿದ್ದಾರೆ.

40 ಕೋಟಿ ರೂಪಾಯಿ ತೆರಿಗೆ ಬಾಕಿ ಪಾವತಿಸದ ಕಾರಣ ಆದಾಯ ತೆರಿಗೆ ಅಧಿಕಾರಿಗಳು ಸಂಸ್ಥೆಯ ಸುಮಾರು 40 ಬ್ಯಾಂಕ್ ಖಾತೆಗಳನ್ನು ಶನಿವಾರ ಮುಟ್ಟುಗೋಲು ಹಾಕಿಕೊಂಡಿದ್ದರು.

`ಸಂಸ್ಥೆಯು ಸಮಸ್ಯೆಗಳಿಂದ ಹೊರಬಂದು ಮತ್ತೆ ಕಾರ್ಯಾರಂಭ ಮಾಡಲು ಒಂದು ಅವಕಾಶ ನೀಡಲಾಗುತ್ತದೆ. ಅದಕ್ಕಾಗಿ ವಿಮಾನ ಹಾರಾಟ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗುತ್ತದೆ~ ಎಂದು ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.