ದಕ್ಷಿಣ ಭಾರತದ ಸಿನಿಮಾಗಳನ್ನು ಗೌರವಿಸುವ ಉದ್ದೇಶದ ಎರಡು ದಿನಗಳ ‘ಐಐಎಫ್ಎ’ ಉತ್ಸವ ಕಳೆದ ಜ. 20–21ರಂದು ಹೈದರಾಬಾದ್ನಲ್ಲಿ ನಡೆಯಿತು. ದಕ್ಷಿಣದ ಭಾಷೆಗಳ ಖ್ಯಾತನಾಮರು ಭಾಗವಹಿಸಿದ್ದು ಈ ಉತ್ಸವದ ವಿಶೇಷ.

ಸಂಜೆ ಮುಳುಗಿತ್ತು. ಆಗಸದಲ್ಲಿ ಕಪ್ಪು ಅಡರಿತ್ತು. ಬಾನಿನ ಅಂಗಳದಲ್ಲಿ ಆಗ ತಾನೇ ಉಂಡು ತೇಗಿ ಬಿಳಿ ಹಾಸಿಗೆ ಹಾಸಿಕೊಂಡು ಚುಕ್ಕಿ–ಚಂದ್ರಮ ಹರಟೆಗೆ ಕುಂತಿದ್ದರು. ಮುತ್ತಿನ ನಗರಿ ಹೈದರಾಬಾದ್ನ ಗಚ್ಚಿಬೋಲಿ ಕ್ರೀಡಾಂಗಣದತ್ತ ಆಗಾಗ್ಗೆ ಇಣುಕಿದ್ದರು. ಹಿತವಾದ ಚಳಿಯ ವಾತಾವರಣ. ಹೀಗೆ ಹಿತ–ಮುದ–ಆಹ್ಲಾದಕ್ಕೆ ಒಂದೇ ವೇದಿಕೆಯಾಗಿದ್ದು ಅಂತರರಾಷ್ಟ್ರೀಯ ಭಾರತೀಯ ಸಿನಿಮಾ ಅಕಾಡೆಮಿ (ಐಐಎಫ್ಎ) ಸಂಘಟಿಸಿದ್ದ ‘ಫಾರ್ಚೂನ್ ಸನ್ ಫ್ಲವರ್ ಆಯಿಲ್ ಐಐಎಫ್ಎ ಉತ್ಸವ’.

ಕಾರ್ಪೊರೇಟ್ ಕಾರ್ಪೆಟ್ನ ಈ ಉತ್ಸವವನ್ನು ಮೊದಲ ಬಾರಿಗೆ ಮುತ್ತಿನ ನಗರಿಯಲ್ಲಿ ಸಂಘಟಿಸಲಾಗಿತ್ತು. ಇದು ಕನ್ನಡ–ತಮಿಳು–ತೆಲುಗು ಮತ್ತು ಮಲಯಾಳಂ ಚಿತ್ರರಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮ. ಎರಡು ದಿನಗಳ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟ–ನಟಿಯರು ತುಂಬಿ ತುಳುಕಿದ್ದರು. ಕನ್ನಡದ ಶಿವರಾಜಕುಮಾರ್ – ಗೀತಾ ದಂಪತಿ, ಸಂಚಾರಿ ವಿಜಯ್, ಯಶ್, ರಾಧಿಕಾ ಪಂಡಿತ್, ಸಂಜನಾ, ನಿಖಿತಾ, ಅಜಯ್ ರಾವ್, ಅರವಿಂದ್ ರಾವ್, ಅನು ಪ್ರಭಾಕರ್, ಸಾಧುಕೋಕಿಲಾ, ನಿರ್ದೇಶಕ ಲಿಂಗದೇವರು, ರವಿ ಆರ್. ಗರಣಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಕಮಲಹಾಸನ್, ಚಿರಂಜೀವಿ, ಪ್ರಕಾಶ್ ರೈ, ಶ್ರುತಿ ಹಾಸನ್, ಮಹೇಶ್ ಬಾಬು, ಅಲ್ಲು ಅರ್ಜುನ್, ರಾಮ್ ಚರಣ್ ತೇಜ, ಜಗಪತಿ ಬಾಬು, ನಾಗಾರ್ಜುನ, ವೆಂಕಟೇಶ್, ತಮನ್ನಾ ಭಾಟಿಯಾ, ತಾಪ್ಸಿ ಪೊನ್ನು, ಇಲಿಯಾನಾ, ಶ್ರೇಯಾ, ಸಿದ್ಧಾರ್ಥ, ನಮಿತಾ, ಪರೂಲ್ ಯಾದವ್, ಮೀನಾ, ರವಿತೇಜ, ರಮ್ಯಾ ಕೃಷ್ಣ, ನಾಸಿರ್, ಮಾಧವನ್, ಪಾರ್ಥಿಬನ್, ಪದ್ಮಪ್ರಿಯಾ– ಹೀಗೆ ದಕ್ಷಿಣದ ಖ್ಯಾತ ನಟನಟಿಯರು ಭಾಗವಹಿಸಿದ್ದ ತಾರಾಮೇಳ ಅದು.

2014ರ ಅಕ್ಟೋಬರ್ನಿಂದ 2015ರ ಅಕ್ಟೋಬರ್ವರೆಗೆ ತೆರೆ ಕಂಡ ಆಯಾ ಪ್ರಾದೇಶಿಕ ಚಿತ್ರಗಳನ್ನು ಗುರ್ತಿಸಿ ವಿವಿಧ ವಿಭಾಗಗಳಲ್ಲಿ ‘ಐಐಎಫ್ಎ ಪ್ರಶಸ್ತಿ’ ನೀಡಲಾಯಿತು. ಚೆನ್ನೈನಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಸ್ಪಂದಿಸುವುದು ಕಾರ್ಯಕ್ರಮದ ಉದ್ದೇಶಗಳಲ್ಲಿ ಒಂದು. ದೇಶದ ಉದ್ಯಮ ವಲಯದ ಮುಂಚೂಣಿಯಲ್ಲಿ ಇರುವ ಅದಾನಿ ಗ್ರೂಫ್ ‘ಐಐಎಫ್ಎ’ ಸಂಘಟನೆಯ ಹಿಂದಿನ ಶಕ್ತಿ.

ರಂಗು ರಂಗಿನ ರಂಗಿತರಂಗ
ಕನ್ನಡದ ನಟ–ನಟಿಯರು ರಾತ್ರಿ ಎರಡು ಗಂಟೆ ದಾಟಿದರೂ ವೇದಿಕೆಯ ಮುಂಭಾಗದಿಂದ ಕದಲಲಿಲ್ಲ. ತೆಲುಗು ಪ್ರಶಸ್ತಿಗಳನ್ನೆಲ್ಲ ಘೋಷಿಸಿದಾಗ ನಡುರಾತ್ರಿ ದಾಟಿತ್ತು. ತರುವಾಯ ವೇದಿಕೆಯಲ್ಲಿ ಕನ್ನಡದ ನಿರೂಪಕರು ಅಂತಿಮ ಪ್ರಶಸ್ತಿಗಳನ್ನು ಪ್ರಕಟಿಸಲು ಕಾಣಿಸಿಕೊಳ್ಳಬೇಕಿತ್ತು. ಅದಾಗಲೇ ಸಮಯ ಒಂದು ಗಂಟೆ ದಾಟಿದ್ದರಿಂದ ಖುರ್ಚಿಗಳು ಖಾಲಿ ಖಾಲಿ. ಕ್ರೀಡಾಂಗಣದಲ್ಲಿ ಹೆಚ್ಚು ಕಂಡಿದ್ದು ಭದ್ರತಾ ಸಿಬ್ಬಂದಿ. ಅಂತಿಮವಾಗಿ ಕನ್ನಡದ ಉತ್ತಮ ನಟ–ನಟಿ–ನಿರ್ದೇಶಕರ ಪ್ರಶಸ್ತಿಗಳು ಪ್ರಕಟವಾದಾಗ ರಾತ್ರಿ ಎರಡು ಗಂಟೆ.

ಕನ್ನಡದಲ್ಲಿ ‘ರಂಗಿತರಂಗ’ ‘ಐಐಎಫ್ಎ’ ಪ್ರಶಸ್ತಿಗಳ ಗೊಂಚಲನ್ನೇ ತನ್ನದಾಗಿಸಿಕೊಂಡಿತು. ಉತ್ತಮ ಚಿತ್ರ (ನಿರ್ಮಾಪಕ ಎಚ್.ಕೆ. ಪ್ರಕಾಶ್), ಉತ್ತಮ ನಿರ್ದೇಶಕ, ಸಂಗೀತ ನಿರ್ದೇಶಕ, ಸಾಹಿತ್ಯ (ಅನೂಪ್ ಭಂಡಾರಿ), ಪೋಷಕ ನಟ (ಸಾಯಿ ಕುಮಾರ್), ಖಳ ನಟ (ಅರವಿಂದ್ ರಾವ್)– ಹೀಗೆ ‘ರಂಗಿತರಂಗ’ಕ್ಕೆ ಒಂದರ ಹಿಂದೆ ಒಂದು ಪ್ರಶಸ್ತಿ ಘೋಷಣೆಯಾಗುತ್ತಿದ್ದರೆ ಭಂಡಾರಿ ಕುಟುಂಬದ ಸಂತಸದ ಮೇರೆ ಮೀರಿತ್ತು.

ಯಶ್ ಮತ್ತು ರಾಧಿಕಾ ಪಂಡಿತ್ ಐಐಎಫ್ಎನಲ್ಲಿ ನೋಡುಗರ ಗಮನ ಸೆಳೆಯುತ್ತಿದ್ದರು. ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ರಾಧಿಕಾ ಪಂಡಿತ್ ಪಡೆದರೆ, ಇದೇ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಯಶ್ ಹೆಗಲಿಗೆ.

‘ವಜ್ರಕಾಯ’ದ ಹಿನ್ನೆಲೆ ಗಾಯನಕ್ಕೆ ಧನುಶ್ ಉತ್ತಮ ಹಿನ್ನೆಲೆ ಗಾಯಕ, ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಗಾಯನಕ್ಕಾಗಿ ಮುಂಬೈನ ಶ್ರೇಯಾ ಘೋಷಾಲ್ ಉತ್ತಮ ಗಾಯಕಿ ಪ್ರಶಸ್ತಿ ಪಡೆದರು. ಇದೇ ಚಿತ್ರದಲ್ಲಿ ನಕ್ಕು ನಗಿಸಿದ್ದ ಸಾಧುಕೋಕಿಲಾಗೆ ಉತ್ತಮ ಹಾಸ್ಯ ನಟ ಮನ್ನಣೆ. ಶಶಾಂಕ್ ನಿರ್ದೇಶನದ ‘ಕೃಷ್ಣಲೀಲಾ’ ಸಿನಿಮಾದಲ್ಲಿನ ಅಭಿನಯಕ್ಕೆ ಲಕ್ಷ್ಮೀ ರಾಜ್ ಉತ್ತಮ ಪೋಷಕ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ವೇದಿಕೆಯಲ್ಲಿ ಅಕುಲ್ ಬಾಲಾಜಿ ಮತ್ತು ವಿಜಯ್ ರಾಘವೇಂದ್ರ ನಿರೂಪಕರು.

ಕನ್ನಡದ ಕಾರ್ಯಕ್ರಮಕ್ಕೆ ಶ್ರೀಕಾರ ಹಾಕಿದ್ದು ಶಿವರಾಜಕುಮಾರ್. ‘ಭಜರಂಗಿ’ ಚಿತ್ರದ ‘ಶ್ರೀ ಆಂಜನೇಯ...’ ಗೀತೆಗೆ ಅವರು ಕುಣಿದು ರಂಜಿಸಿದರು. ತಮಿಳು ನಟರೂ ಕನ್ನಡದ ಹಾಡಿಗೆ ಹೆಜ್ಜೆಯಾಕಿದರು. ಹೆಚ್ಚು ಚಪ್ಪಾಳೆ ಗಿಟ್ಟಿಸಿದ್ದು ಪ್ರಭುದೇವ ನೃತ್ಯದಲ್ಲಿ ಮೂಡಿದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು...’ ಗೀತೆಯ ಪ್ರದರ್ಶನ. ‘ನಾನು ಹುಟ್ಟಿದ್ದು ಚೆನ್ನೈನಲ್ಲಿ. ಬೆಳೆದಿದ್ದು ಅಲ್ಲೇ. ಆ ಸಮಯದಲ್ಲಿ ಚೆನ್ನೈ ದಕ್ಷಿಣ ಭಾರತದ ಚಿತ್ರಗಳ ತವರು’ ಎಂದು ತಾವು ಕಂಡಂತೆ ಚೆನ್ನೈ ಸಿನಿಮಾ ಲೋಕದ ಬಗ್ಗೆ ಹೇಳಿದರು ಶಿವರಾಜಕುಮಾರ್.

ಉತ್ತಮ ನಟ ಪ್ರಶಸ್ತಿ ಪಡೆದ ಯಶ್ ತಮ್ಮ ಮಾತಿನಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅವರನ್ನು ನೆನಪಿಸಿಕೊಂಡರು. ‘ನಾನು ಅವನಲ್ಲ ಅವಳು ಸಿನಿಮಾ ನೋಡಿದ್ದೇನೆ. ವಿಜಯ್ ನಟನೆಯ ಮುಂದೆ ನನ್ನದೇನೂ ಇಲ್ಲ. ಅವರೊಬ್ಬ ಅದ್ಭುತ ಭಾರತೀಯ ನಟ’ ಎಂದು ಯಶ್ ಮನಸಾರೆ ಪ್ರಶಂಸಿಸಿದರು. ಕನ್ನಡ ಚಿತ್ರರಂಗದ ಅಪೂರ್ವ ನಿರ್ದೇಶಕ ಸಿದ್ಧಲಿಂಗಯ್ಯ ಅವರ ಜೀವನ–ಸಾಧನೆಯನ್ನು ಬಿಂಬಿಸುವ ದೃಶ್ಯದ ತುಣುಕನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಸಿದ್ಧಲಿಂಗಯ್ಯನವರ ಒಡನಾಡದ ಬಗ್ಗೆ ಶಿವರಾಜಕುಮಾರ್ ಕ್ಷಣ ಹೊತ್ತು ಮಾತನಾಡಿದರು.

ಕಮಲ್ ಕಮಾಲ್:
ಐಐಎಫ್ಎ ಉತ್ಸವಕ್ಕೆ ಚಾಲನೆ ನೀಡುವ ಕ್ಷಣದಲ್ಲಿ ಎಲ್ಲರ ಗಮನಸೆಳೆದವರು ನಟ ಕಮಲಹಾಸನ್. ಭಾಷಾ ಭಾವೈಕ್ಯತೆ ಕುರಿತು ಮಾತನಾಡಿದ ಅವರು– ತಮ್ಮ ಗುರು ನಿರ್ದೇಶಕ ಕೆ. ಬಾಲಚಂದರ್ ಅವರ ಜತೆಗಿನ ಒಡನಾಟವನ್ನು ನೆನಪಿಸಿಕೊಂಡರು. ‘ಇಂದು ನಾನೊಬ್ಬ ರಾಷ್ಟ್ರಮಟ್ಟದ ನಟನಾಗಿದ್ದರೆ, ನನಗೆ ಈಗ ಚಪ್ಪಾಳೆಗಳು ಬೀಳುತ್ತಿದ್ದರೆ ಅದಕ್ಕೆಲ್ಲ ಅವರೇ (ಕೆ.ಬಿ.) ಕಾರಣ. ಅವರ ಮತ್ತು ನನ್ನ ನಡುವಿನ ಸಂಬಂಧ ಅಪ್ಪ–ಮಗನ ರೀತಿಯದು’ ಎಂದು ಕಮಲ್ ಹೇಳಿದರು.

ತೆಲುಗಿನಲ್ಲಿ ಪ್ರಿನ್ಸ್ ಮಹೇಶ್ ಬಾಬು ‘ಶ್ರೀಮಂತುಡು’ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಮತ್ತು ಅದೇ ಚಿತ್ರದ ನಟನೆಗಾಗಿ ಶ್ರುತಿ ಹಾಸನ್ ಅತ್ಯುತ್ತಮ ನಟಿ ಎನಿಸಿಕೊಂಡರು. ಮಲಯಾಳಂನಲ್ಲಿ ‘ಪ್ರೇಮಂ’ ಚಿತ್ರ ಪ್ರಶಸ್ತಿಗಳ ಸುಗ್ಗಿ ಮಾಡಿದರೆ, ತಮಿಳಿನಲ್ಲಿ ‘ಕತ್ತಿ’, ‘ತನಿ ಒರುವನ್’ಗೆ ಮನ್ನಣೆ. ‘ತನಿ ಒರುವನ್’ ಚಿತ್ರದ ನಟನೆಗಾಗಿ ಜಯಂ ರವಿ ಉತ್ತಮ ನಟ ಪ್ರಶಸ್ತಿ ಪಡೆದರೆ, ‘ಮಯಾ’ ಚಿತ್ರದಲ್ಲಿನ ಅಭಿನಯಕ್ಕಾಗಿ ನಯನತಾರಾ ಉತ್ತಮ ನಟಿ. ಮಲಯಾಳಂನ ‘ಏನು ನಿಂತೆ ಮೂಡನ್’ ಚಿತ್ರದ ನಟನೆಗಾಗಿ ಪೃಥ್ವಿರಾಜ್ ಸುಕುಮಾರನ್ ಉತ್ತಮ ನಟ, ಅದೇ ಚಿತ್ರದ ನಟನೆಗಾಗಿ ಪೃಥ್ವಿ ಮೆನನ್ ಉತ್ತಮ ನಟಿ ಪ್ರಶಸ್ತಿ ಪಡೆದರು. ತೆಲುಗಿನ ‘ಬಾಹುಬಲಿ’ಯ ತಮಿಳು ಡಬ್ಬಿಂಗ್ ಚಿತ್ರಕ್ಕೂ ಆರು ಪ್ರಶಸ್ತಿಗಳು ಸಂದವು.

(ಲೇಖಕರು ‘ಐಐಎಫ್ಎ’ ಆಹ್ವಾನದ ಮೇರೆಗೆ ಹೈದರಾಬಾದ್ಗೆ ಭೇಟಿ ನೀಡಿದ್ದರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.