ಗೋವಾದ ಕಡಲತಟದ ಪಕ್ಕ ಚಿತ್ರೀಕರಣ. ನಿರ್ದೇಶಕರು `ಕಟ್' ಹೇಳಿದ್ದೇ ತಡ ನಟ ಓಡಿಹೋಗಿ ಅನತಿ ದೂರದಲ್ಲಿ ನಿಂತಿದ್ದ ಮನದನ್ನೆಯನ್ನು ಬಾಚಿ ತಬ್ಬಿಕೊಂಡು ಮುದ್ದು ಮಾಡತೊಡಗಿದಾಗ ಅಲ್ಲಿದ್ದವರು ಚಕಿತರಾಗಲಿಲ್ಲ. ಯಾಕೆಂದರೆ, ಅಂಥ ಕೆಲವು ಸನ್ನಿವೇಶಗಳನ್ನು ಅವರು ಅದಾಗಲೇ ಕಂಡಿದ್ದರು. ಅಪ್ಪುಗೆ, ಮುತ್ತು ಅವರ ನಡುವೆ ಆಗೀಗ ವಿನಿಮಯವಾಗುತ್ತಿತ್ತು. `ಗೋ ಗೋವಾ ಗಾನ್' ಹಿಂದಿ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಘಟನೆ ಅದು. ಅಪ್ಪಿಕೊಂಡ ನಟ ಕುನಾಲ್ ಖೇಮು. ಅವರನ್ನು ಅಷ್ಟೊಂದು ಆಕರ್ಷಿಸಿರುವುದು ಸೋಹಾ ಅಲಿ ಖಾನ್. ಅಣ್ಣ ಸೈಫ್ ಅಲಿ ಖಾನ್ ಎದುರಲ್ಲೇ ಕುನಾಲ್ ಜೊತೆ ಮುತ್ತು ಹಂಚಿಕೊಳ್ಳುವಷ್ಟು ಸ್ವಾತಂತ್ರ್ಯ ಪಡೆದುಕೊಂಡಿರುವ ಆಧುನಿಕ ಯುವತಿ.

ಬಾಲನಟನಾಗಿ ಗುರುತಾಗಿದ್ದ ಕುನಾಲ್ ಖೇಮು ಸಿನಿಮಾ ಗ್ರಾಫ್ ಅಷ್ಟೇನೂ ಹೇಳಿಕೊಳ್ಳುವಂತಿಲ್ಲ. `ಕಲಿಯುಗ್' ಚಿತ್ರದಲ್ಲಿ ಅವರ ಹದವರಿತ ಅಭಿನಯಕ್ಕೆ ವಿಮರ್ಶಕರಿಂದ ಉತ್ತಮ ಅಂಕಗಳೇನೋ ಸಂದವು. ಆದರೆ ವೃತ್ತಿಬದುಕು ತಿಟ್ಹತ್ತಲಿಲ್ಲ. ಮಧುರ್ ಭಂಡಾರ್ಕರ್ `ಟ್ರಾಫಿಕ್ ಸಿಗ್ನಲ್' ಚಿತ್ರದಲ್ಲಿ ಅವಕಾಶ ಕೊಟ್ಟರು. `ಸೂಪರ್ ಸ್ಟಾರ್', `ಢೋಲ್' ಮತ್ತಿತರ ಚಿತ್ರಗಳು ಬಾಕ್ಸಾಫೀಸ್ನಲ್ಲಿ ಸದ್ದು ಮಾಡಲಿಲ್ಲ. 2010ರಲ್ಲಿ ರೋಹಿತ್ ಶೆಟ್ಟಿ ನಿರ್ದೇಶನದ `ಗೋಲ್ಮಾಲ್ 3' ಬಿಡುಗಡೆಯಾದ ಮೇಲೆ ಕುನಾಲ್ ಮತ್ತೆ ಬೆಳಕಿಗೆ ಬಂದರು. ಕಳೆದ ವರ್ಷ `ಬ್ಲಡ್ ಮನಿ' ಚಿತ್ರದ ಏಕೈಕ ನಾಯಕರಾಗಿ ಅವರು ಮತ್ತೆ ಜನಮೆಚ್ಚುಗೆ ಗಳಿಸಿದರು. ಈಗ `ಗೋ ಗೋವಾ ಗಾನ್' ಸರದಿ.

ವೃತ್ತಿಬದುಕು ಯಾಕಿಷ್ಟು ಮಂಕಾಗಿದೆ ಎಂದರೆ ಒಪ್ಪಲು ಅವರು ತಯಾರಿಲ್ಲ. ವರ್ಷಕ್ಕೆ ಒಂದು ಸಿನಿಮಾ ಎಂದೇನಾದರೂ ನಿಯಮ ಹಾಕಿಕೊಂಡಿದ್ದೀರಾ ಎಂಬ ಪ್ರಶ್ನೆಗೂ ಅವರು ಉತ್ತರಿಸಲು ಹೋಗುವುದಿಲ್ಲ. `ಬದುಕಿನಲ್ಲಿ ನಾನು ಎಂದೂ ಯಾವುದನ್ನೂ ಯೋಜಿಸಿ ನಡೆದಿಲ್ಲ. ತುಂಬಾ ಪ್ಲಾನ್ ಮಾಡಿದರೆ ಮಜವೇ ಇರುವುದಿಲ್ಲ. ಸಿನಿಮಾ ಬದುಕನ್ನೂ ನಾನು ಪ್ಲಾನ್ ಮಾಡಲು ಹೋಗಿಲ್ಲ. ಹೆಚ್ಚು ವೃತ್ತಿಪರನಾಗಿ ಕೆಲಸ ಮಾಡಬೇಕು ಎಂಬುದನ್ನಷ್ಟೇ ಯೋಚಿಸುತ್ತೇನೆ. ಸಿನಿಮಾ ಗೆಲುವು ಅಥವಾ ಸೋಲು ನಮ್ಮ ಕೈಲಿ ಇರುವುದಿಲ್ಲ. ಆತ್ಮತೃಪ್ತಿ ನೀಡುವ ಕೆಲಸ ಮಾಡಬೇಕಷ್ಟೆ' ಎಂಬುದು ಕುನಾಲ್ ಬದುಕಿನ ಪಾಲಿಸಿ.

ತಮ್ಮ ಹೊಸ ಚಿತ್ರದ ಕುರಿತು ಅವರು ಹೇಳುವುದಿಷ್ಟು: `ಗೋ ಗೋವಾ ಗಾನ್ ಚಿತ್ರದಲ್ಲಿ ಇರುವುದು ಜಾಂಬಿ ಹಾಸ್ಯ. ಜಾಂಬಿಗಳು ಭೂತಗಳು ಎಂಬ ತಪ್ಪು ಭಾವನೆ ಜನರಲ್ಲಿದೆ. ಅದನ್ನು ಹೋಗಲಾಡಿಸಿ, ವಾಸ್ತವದ ಮೇಲೆ ಬೆಳಕು ಚೆಲ್ಲುವ ಅಪರೂಪದ ಚಿತ್ರ ಅದು. ಕೆಲವು ವೈರಸ್ಗಳಿಂದ ಸೋಂಕು ಉಂಟಾಗಿ ಜಾಂಬಿ ಜೀವಿಗಳ ಮೆದುಳು ಕ್ರಮೇಣ ಸಾಯುತ್ತದೆ. ಅವರ ನಡುವೆ ಸಿಕ್ಕಿಹಾಕಿಕೊಂಡ ಯುವಕರ ಕಥೆಯನ್ನು ಗೋ ಗೋವಾ ಗಾನ್ ಹೇಳುತ್ತದೆ. ಬಾಲಿವುಡ್ಗೆ ಈ ಪರಿಕಲ್ಪನೆ ಹೊಸತು. ಸೈಫ್ ಅಲಿ ಖಾನ್ ತರಹದ ಅನುಭವಿ ನಟರು ನನ್ನ ಜೊತೆ ಅಭಿನಯಿಸಿದ್ದು ಖುಷಿ ನೀಡಿದೆ. ಮುಂದೆ ಸಿನಿಮಾ ಬದುಕಿನಲ್ಲಿ ನನಗೆ ಇನ್ನಷ್ಟು ಉತ್ತಮ ಚಿತ್ರಗಳು ಸಿಗುವುದರಲ್ಲಿ ಅನುಮಾನವೇ ಇಲ್ಲ. ಅದಕ್ಕಾಗಿ ತಾಳ್ಮೆಯಿಂದ ಕಾಯುತ್ತೇನೆ'.

ಸೋಹಾ ಕುರಿತು ಹೆಚ್ಚೇ ಕಕ್ಕುಲತೆ ಹೊಂದಿರುವ ಕುನಾಲ್ಗೆ ತೆರೆಮೇಲೆ ಅವರು ಬಿಕಿನಿ ತೊಟ್ಟರೆ ನೋಡುವುದು ಕಷ್ಟವಾಗುತ್ತದಂತೆ. `ಸಾಹಿಬ್ ಬೀವಿ ಔರ್ ಗ್ಯಾಂಗ್ಸ್ಟರ್ ರಿಟರ್ನ್ಸ್' ಹಿಂದಿ ಚಿತ್ರದಲ್ಲಿ ಸೋಹಾ ಅಭಿನಯಕ್ಕೆ ಮೆಚ್ಚುಗೆಯೇನೋ ವ್ಯಕ್ತವಾಯಿತು. ಅವರು ಕೆಲವು ಬಿಸಿಬಿಸಿ ದೃಶ್ಯಗಳ ಭಾಗವಾಗಿದ್ದನ್ನು ಕಂಡು ಕುನಾಲ್ ಮುಖ ಕಿವುಚಿಕೊಂಡರಂತೆ.

`ನಾವು ಮಾಡುವುದು ಅಭಿನಯ. ಸೋಹಾ ಕೂಡ ಅಭಿನೇತ್ರಿ. ಅವಳು ಯಾರಿಗೋ ಮುತ್ತು ಕೊಡುವುದು ನಟನೆ. ಆದರೆ ನನಗೆ ಆ ಕ್ಷಣ ನಾವು ಹಂಚಿಕೊಂಡ ಮುತ್ತಿನ ಕ್ಷಣಗಳು ನೆನಪಾಗುತ್ತವೆ. ಒಂದು ಕ್ಷಣ ಕಸಿವಿಸಿಯಾದರೂ ಆಮೇಲೆ ಸರಿಹೋಗುತ್ತೇನೆ. ಮತ್ತೆ ಮತ್ತೆ ಅವಳನ್ನು ಮುದ್ದು ಮಾಡುತ್ತೇನೆ'- ತಮ್ಮ ಸರಸ ಸಲ್ಲಾಪವನ್ನೂ ಹೀಗೆ ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳುತ್ತಾರೆ ಕುನಾಲ್.

ಬಿಡುವು ಸಿಕ್ಕಾಗ ಸೋಹಾ ಜೊತೆ ಊರೂರು ಸುತ್ತುವುದು, ಇಷ್ಟದ ಹೋಟೆಲ್ನಲ್ಲಿ ತಿನ್ನುತ್ತಾ ಹರಟೆ ಕೊಚ್ಚುವುದು ಕುನಾಲ್ಗೆ ಇಷ್ಟವಾದ ಕೆಲಸ. ಮದುವೆ ಯಾವಾಗ ಎಂದು ಕೇಳಿದರೆ, `ಸದ್ಯಕ್ಕಂತೂ ಇಲ್ಲ ಬಿಡಿ' ಎಂದವರು ಕಣ್ಣು ಮಿಟುಕಿಸುತ್ತಾರೆ. ಸೋಹಾಗೂ ಈಗಲೇ ವಿವಾಹ ಬಂಧನಕ್ಕೆ ಒಳಪಡುವುದು ಇಷ್ಟವಿಲ್ಲವಂತೆ. ಸೋಹಾ ಅಣ್ಣ ಸೈಫ್ ಎದುರಲ್ಲೇ ನಿಸ್ಸಂಕೋಚವಾಗಿ ಇರುತ್ತೀರಲ್ಲ ಎಂಬ ಇನ್ನೊಂದು ಪ್ರಶ್ನೆಗೂ ಕುನಾಲ್ ನಗುವಿನ ಉತ್ತರ ನೀಡಿ, ಕಣ್ಣು ಹೊಡೆಯುತ್ತಾರೆ. ಸೋಹಾ ಅವರ ಕೆನ್ನೆ ಹಿಂಡುತ್ತಾರೆ. ಇಬ್ಬರ ನಡುವೆ ಮುತ್ತಿಗೆ ಇನ್ನೊಂದು ಆಮಂತ್ರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.