ಸೋಮವಾರ, ಏಪ್ರಿಲ್ 12, 2021
30 °C

ಮುದಿಗೆರೆ ಕಾವಲ್‌ಗೆ ಕಂಟಕ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ: ಸುವರ್ಣ ಕರ್ನಾಟಕ ಕೈಗಾರಿಕಾಭಿವೃದ್ಧಿ ಕಾರಿಡಾರ್ ಯೋಜನೆಯಡಿ ತಾಲ್ಲೂಕಿನ ಮುದಿಗೆರೆ ಕಾವಲ್‌ನಲ್ಲಿ  ಸ್ವಾಧೀನಪಡಿಸಿಕೊಳ್ಳುತ್ತಿದ್ದ ಜಮೀನುಗಳನ್ನು ಭೂ ಸ್ವಾಧೀನ ಕ್ರಮದಿಂದ ಕೈಬಿಡಲಾಗಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.ಭೂ ಸ್ವಾಧೀನ ಪ್ರಕ್ರಿಯೆಯಿಂದ ತಮ್ಮ ಜಮೀನುಗಳ ಮೇಲೆ ಸಾಲ ಸೌಲಭ್ಯವೂ ಸಿಗುತ್ತಿಲ್ಲ, ಇತ್ತ ಪರಿಹಾರದ ಹಣವೂ ಬಂದಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ತುರ್ತಾಗಿ ಒಂದು ತೀರ್ಮಾನಕ್ಕೆ ಬರುವಂತೆ ಆಗ್ರಹಿಸಿ ಸೋಮವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ಅದಕ್ಕೆ ಸಂಬಂಧಿಸಿದ ಸರ್ಕಾರದ ಕಾಗದ ಪತ್ರಗಳನ್ನು ಪ್ರದರ್ಶಿಸಿದರು.ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ ಮಾಜಿ ಸಚಿವ ಸತ್ಯನಾರಾಯಣ, ಮಾಜಿ ಶಾಸಕ ರಂಗನಾಥಪ್ಪ ಸೇರಿದಂತೆ ರೈತರ ಹೆಸರಿನಲ್ಲಿ ಹಲವರು ಧರಣಿ ನಡೆಸಿದರು. ನನ್ನನ್ನು ದಲ್ಲಾಳಿ ಎಂದು ಜರಿದರು.ಇದರಿಂದಾಗಿಯೇ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಸೋಲಬೇಕಾಯಿತು. ಆದರೆ ಮೊದಲೂರು ಕೆರೆಗೆ ನೀರು ತರುವ ಕೆಲಸಕ್ಕಿಂತ ಮೂರು ಪಟ್ಟು ಒಳ್ಳೆಯ ಕೆಲಸ ಅಲ್ಲಿ ಕೈಗಾರಿಕೆ ಸ್ಥಾಪನೆಯಿಂದ ಆಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.ಮೊದಲನೇ ಹಂತದಲ್ಲಿ ಸ್ವಾಧೀನಪಡಿಸಿಕೊಳ್ಳುತ್ತಿದ್ದ 1801 ಎಕರೆ ಪ್ರದೇಶವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ  ಈಗಾಗಲೇ ಕೈಬಿಡಲಾಗಿದೆ. ಎರಡನೇ ಹಂತದಲ್ಲಿ ಭೂ ಸ್ವಾಧೀನಕ್ಕೆ ಉದ್ದೇಶಿಸಿದ್ದ 2051 ಎಕರೆ ಪ್ರದೇಶದ ಬಗ್ಗೆ ಪ್ರಸ್ತುತ ಬೆಳವಣಿಗೆಗಳನ್ನು ಕಾದು ನೋಡಲಾಗುತ್ತಿದೆ ಎಂದರು.ಭೂ ಸ್ವಾಧೀನಕ್ಕೆ ನಮ್ಮ ಯಾವುದೇ ವಿರೋಧ ಇಲ್ಲ. ಭೂ ಸ್ವಾಧೀನ ಪ್ರಕ್ರಿಯೆ ನಿಲ್ಲಿಸಬೇಡಿ. ಆದರೆ ತಕ್ಷಣ ಪ್ರಕ್ರಿಯೆ ಪೂರ್ಣಗೊಳಿಸಿ ಪರಿಹಾರದ ಹಣ ನೀಡಿ. ನಾವು ಸಾಲ ಮಾಡಿ ಬೇರೆಡೆ ಜಮೀನುಗಳನ್ನು ಖರೀದಿಸಿದ್ದೇವೆ ಎಂದು ಕೆಲ ರೈತರು ಮನವಿ ಮಾಡಿದರು.ಸಭೆಯಲ್ಲಿ ತಹಶೀಲ್ದಾರ್ ಜಿ.ಎಚ್.ನಾಗಹನುಮಯ್ಯ, ಪೌರಾಯುಕ್ತ ಬಿ.ಟಿ.ರಂಗಸ್ವಾಮಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.