ಗುರುವಾರ , ಮೇ 19, 2022
24 °C

ಮುನಿಸಿಕೊಂಡ ಮಳೆ: ನೀರಿಗೆ ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ಮಳೆಯ ಮುನಿಸು ಈ ಗ್ರಾಮದ ಮನೆ ಮಂದಿಯ ನಿದ್ದೆಗೆ ಡಿಸಿದೆ. ಗ್ರಾಮದಲ್ಲಿ ಮಹಿಳೆಯರು ಮಕ್ಕಳೆನ್ನದೆ ಎಲ್ಲರೂ ಖಾಲಿ ಬಿಂದಿಗೆ ಹಿಡಿದು ಕುಡಿಯುವ ನೀರಿಗಾಗಿ ಬೀದಿ ಬೀದಿ ಅಲೆಯಬೇಕದ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ.ಗಂಡಸಿ ಹೋಬಳಿಯ ಮಹದೇವರಹಳ್ಳಿ ಗ್ರಾಮದ ಸ್ಥಿತಿ ಇದು. ಇಲ್ಲಿಯ ಜನರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಕುಡಿಯುವ ನೀರು ಹಾಗೂ ಬಸ್ ಸೌಲಭ್ಯ ಇದರಲ್ಲಿ ಪ್ರಮುಖ ಸಮಸ್ಯೆಗಳು.ಲಾಳನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಈ ಗ್ರಾಮದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳಿವೆ. ಒಂದು ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಇದ್ದು, ಕುಡಿಯುವ ನೀರಿನ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.ಕಳೆದ ಆತು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಇಲ್ಲಿನ ಜನರನ್ನು ಕಾಡುತ್ತಿದೆ. ನೀರು ಪೂರೈಕೆಗಾಗಿ ಕೊರೆಯಿಸಿದ್ದ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಕಿರು ನೀರು ಸರಬರಾಜು ಯೋಜನೆಯಡಿ ಮಿನಿ ಟ್ಯಾಂಕ್ ನಿರ್ಮಿಸಿದ್ದರೂ ಅದಕ್ಕೆ ನೀರು ತುಂಬುತ್ತಿಲ್ಲ. ಹಿಂದೆ ಹಾಕಿದ್ದ ನಲ್ಲಿಗಳಲ್ಲಿ ನೀರು ಬಾರದೇ ನೀರು ಇರುವ ಕಡೆ ಬಿಂದಿಗೆಗಳನ್ನು ಇಟ್ಟು ಕಾದು ನೀರು ತರುವಂತಾಗಿದೆ ಎಂದು ಗ್ರಾಮದ ಭಾಗ್ಯಮ್ಮ, ಮಂಜುಳಮ್ಮ ದೂರಿದ್ದಾರೆ.ಇನ್ನು ಬಸ್ಸಿನ ಸಮಸ್ಯೆ ಇಲ್ಲಿನ ಜನತೆ ಹಾಗೂ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಮೊದಲು ಅರಸೀಕೆರೆ ಡಿಪೋದಿಂದ ಮಹದೇವರಹಳ್ಳಿಗೆ ಬೆಳಿಗ್ಗೆ ಹಾಗೂ ಸಂಜೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಒಂದೊಂದು ಬಸ್ ಬರುತ್ತಿತ್ತು. ಕಳೆದ ಆರು ತಿಂಗಳಿನಿಂದ ಬಸ್ ಬರುವುದು ನಿಂತಿದೆ. ಮಹದೇವರಹಳ್ಳಿಯಿಂದ ಬೇರೆ ಕಡೆಗೆ ತೆರಳಬೇಕಾದರೆ, ಗ್ರಾಮಸ್ಥರು 5ಕಿ.ಮೀ. ದೂರದ ಗಂಡಸಿಗೆ ಬರಬೇಕು. ಗ್ರಾಮದಿಂದ 50 ರಿಂದ 60 ಮಕ್ಕಳು ಗಂಡಸಿ, ಅರಸೀಕೆರೆ, ತಿಪಟೂರು, ಚನ್ನರಾಯಪಟ್ಟಣ ಶಾಲಾ ಕಾಲೇಜುಗಳಿಗೆ ಓಡಾಡಬೇಕು. ಇವರೆಲ್ಲರೂ ಕಾಲ್ನಡಿಗೆ, ಸೈಕಲ್ ಅಥವಾ ಬೈಕ್‌ಗಳನ್ನು ಆಶ್ರಯಿಸಬೇಕಿದೆ. ಆಸ್ಪತ್ರೆಗೆ ಹೋಗುವ ರೋಗಿಗಳಿಗೆ ಆಟೋಗಳೇ ಗತಿ.ಆಟೋ ಒಂದು ಸೀಟಿಗೆ 8ರಿಂದ10 ರೂಪಾಯಿ ಕೊಟ್ಟು ಪ್ರಯಾಣಿ ಸುವುದು ಅನಿವಾರ್ಯ.

`ಪೈಪ್‌ಲೈನ್ ಪೂರ್ಣಗೊಳ್ಳದೆ ನೀರಿನ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ್ದು, ಹಿರಿಯ ಅಧಿಕಾರಿಗಳನ್ನು ಕೇಳಿದರೆ ಹಣ ಇಲ್ಲ ಎನ್ನುತ್ತಿದ್ದಾರೆ' ಎಂದು ಲಾಳ ನಕೆರೆ ಗ್ರಾಮ ಪಂಚಾಯಿತಿ ಸದಸ್ಯ ಜಗ ದೀಶ್ (ಪುಟ್ಟರಾಜು) ನುಡಿಯುತ್ತಾರೆ.ಡಿಪೋ ವ್ಯವಸ್ಥಾಪಕರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಹತ್ತು ವರ್ಷಗಳಿಂದ ಓಡುತ್ತಿದ್ದ ಬಸ್‌ಗಳು ಆರು ತಿಂಗಳ ಹಿಂದೆ ರದ್ದಾಗಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಸಮಸ್ಯೆಗಳನ್ನು ಪರಿಹರಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.