ಮಂಗಳವಾರ, ಮಾರ್ಚ್ 9, 2021
30 °C

ಮುನ್ನಡೆ ಕಾಯ್ದುಕೊಂಡ ರಾಣಾ--–ಪರಮಿಂದರ್‌ ಜೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುನ್ನಡೆ ಕಾಯ್ದುಕೊಂಡ ರಾಣಾ--–ಪರಮಿಂದರ್‌ ಜೋಡಿ

ಬೆಂಗಳೂರು: ಸುರೇಶ್ ರಾಣಾ ಮತ್ತು ಸಹಚಾಲಕ ಪರಮಿಂದರ್ ಠಾಕೂರ್ ಅವರು ಇಲ್ಲಿ ನಡೆಯು ತ್ತಿರುವ ಮಾರುತಿ ಸುಜುಕಿ ದಕ್ಷಿಣ ಡೇರ್ ರ್‌್ಯಾಲಿಯ ನಾಲ್ಕನೇ ದಿನವೂ ಮುನ್ನಡೆ ಕಾಯ್ದುಕೊಂಡಿದ್ದಾರೆ.ಪವನ ವಿದ್ಯುತ್ ಘಟಕಗಳು ಇರುವ ಗುಡ್ಡಗಾಡು ಪ್ರದೇಶದ ಮೂಲಕ ಸಾಗಿದ   ರ್‌್ಯಾಲಿಯಲ್ಲಿ ರಾಣಾ ಜೋಡಿಯು ಮುನ್ನಡೆ ಕಾಯ್ದುಕೊಂಡಿತು.

ರಾಣಾ ಜೋಡಿಯು ಗ್ರ್ಯಾಂಡ್ ವಿಟಾರದಲ್ಲಿ ಮೂರನೇ ಸುತ್ತನ್ನು 6 ಗಂಟೆ, 13 ನಿಮಿಷಗಳಲ್ಲಿ ಕ್ರಮಿಸಿತು. ನಾಳೆ ಸ್ಪರ್ಧೆಯ ಕೊನೆಯ ದಿನವಾಗಿದೆ. ಗೋವಾ ತಲುಪಿದ ನಂತರ ರ್‌್ಯಾಲಿಯು ಮುಕ್ತಾಯಗೊಳ್ಳಲಿದೆ.ಅರಣ್ಯ ಪ್ರದೇಶದಲ್ಲಿ ರ್‍ಯಾಲಿಗೆ ತಡೆ  (ಚಿಕ್ಕಮಗಳೂರು): ದಕ್ಷಿಣ್ ಡೇರ್ ರ್‍ಯಾಲಿಯನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಗುರುವಾರ ಚಿಕ್ಕಮಗಳೂರು ಬಳಿ ತಡೆಯಲಾಯಿತು. ಜಿಲ್ಲೆಯ ಪಶ್ಚಿಮಘಟ್ಟಗಳ ಸಾಲಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಅರಣ್ಯ ಪ್ರದೇಶದಲ್ಲಿ ಹಾಗೂ ಭದ್ರಾ ಅಭಯಾರಣ್ಯದ ತಣಿಗೆಬೈಲು ವಲಯ ವ್ಯಾಪ್ತಿಯ ಕೆಮ್ಮಣ್ಣುಗುಂಡಿ, ಶಂಕರ ಶೋಲಾ ಮಾರ್ಗವಾಗಿ ರ್‍್ಯಾಲಿ ಸಾಗುತಿತ್ತು. ಶಿವಮೊಗ್ಗ ಮಾರ್ಗವಾಗಿ ಚಿಕ್ಕಮಗಳೂರು ಗಿರಿಶ್ರೇಣಿಗಳ ಕಡಿದಾದ ದಾರಿಯಲ್ಲಿ ಹಾಗೂ ಭದ್ರಾ ಅಭಯಾರಣ್ಯದ ಪ್ರದೇಶದ ವ್ಯಾಪ್ತಿಯಲ್ಲಿ ರ್‍ಯಾಲಿ ಸಾಗಲು  ಆಯೋಜಕರು ‘ರೂಟ್‌ ಮ್ಯಾಪ್‌’ ಸಿದ್ಧಪಡಿಸಿದ್ದರು. ಆದರೆ, ಇದಕ್ಕೆ ಅರಣ್ಯ ಇಲಾಖೆಯ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ.ಗುರುವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಕೈಮರ ಚೆಕ್‌ಪೋಸ್ಟ್‌ನಲ್ಲಿ ಚಿಕ್ಕಮಗಳೂರು ಪ್ರಾದೇಶಿಕ ವಲಯದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ರ್‍ಯಾಲಿ ಕಾರುಗಳನ್ನು ತಡೆದು, ಅರಣ್ಯ ಪ್ರದೇಶದಲ್ಲಿ ರ್‍ಯಾಲಿ ನಡೆಸದಂತೆ ಕ್ರಮಕೈಗೊಂಡರು.   ಪರಿಣಾಮ  ಅಷ್ಟೂ ಕಾರುಗಳು ಶಿವಮೊಗ್ಗಕ್ಕೆ ಹಿಂದಿರುಗಿದವು.  ಶಿವಮೊಗ್ಗದಲ್ಲಿ ರಾತ್ರಿ ತಂಗಿದ್ದ ರ್‍ಯಾಲಿ ಕಾರುಗಳು, ತರೀಕೆರೆ–ಸಂತವೇರಿ ಮಾರ್ಗವಾಗಿ ಬಾಬಾ ಬುಡನ್‌ಗಿರಿಶ್ರೇಣಿಯ ಮೀಸಲು ಅರಣ್ಯದ ರಸ್ತೆಯಲ್ಲಿ ಸಾಗಲು ಬೆಳಿಗ್ಗೆ ಜಿಲ್ಲೆ ಪ್ರವೇಶಿಸಿದ್ದವು. ಚಿಕ್ಕಮಗಳೂರು ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸಿಬ್ಬಂದಿ ವರ್ಗ ಕಾರು ರ್‍ಯಾಲಿ ಅರಣ್ಯ ಪ್ರದೇಶದಲ್ಲಿ ಸಾಗದಂತೆ ಕ್ರಮ ಕೈಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.