ಬುಧವಾರ, ಜನವರಿ 22, 2020
17 °C

ಮೂಕ ಬಾಲಕಿ ಮೇಲೆ ಅತ್ಯಾಚಾರ – ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರಗೂರು: ಪಟ್ಟಣದ ಮೂಕ ಬಾಲಕಿ (10) ಮೇಲೆ ಅತ್ಯಾಚಾರ ನಡೆದ ಘಟನೆ ಗುರುವಾರ ರಾತ್ರಿ ನಡೆದಿದೆ.ಬಾಲಕಿ ಓಬಿಸಿ ಹಾಸ್ಟೆಲ್ ಹತ್ತಿರ ರಾತ್ರಿ 7-.30ರ ಸಮಯದಲ್ಲಿ ನಿಂತಿದ್ದಳು. ಅಲ್ಲಿಗೆ ಬಂದ ಬೆಟ್ಟ ಎಂಬ ವ್ಯಕ್ತಿ ತಿಂಡಿ ಕೊಡಿಸುತ್ತೇನೆ ಎಂದು ಹೇಳಿ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ.ಬಾಲಕಿ ಕೂಗುವ ಸದ್ದು ಕೇಳಿದ ಅಕ್ಕಪಕ್ಕದ ಜನರು ಬೆಟ್ಟನನ್ನು ಹಿಡಿದು ಚೆನ್ನಾಗಿ ಥಳಿಸಿದರು. ಬಾಲಕಿಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬೆಟ್ಟನನ್ನು ಬಂಧಿಸಲಾಗಿದೆ.

ಪ್ರತಿಕ್ರಿಯಿಸಿ (+)