ಶುಕ್ರವಾರ, ಮೇ 14, 2021
21 °C

ಮೂತ್ರಪಿಂಡ ಚಿಕಿತ್ಸೆ: ನೆರವಿಗಾಗಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ತಾಲ್ಲೂಕಿನ ತಂಗಡಗಿ ಗ್ರಾಮದ ಆನಂದ ಮರಸಂಗಯ್ಯ ತೆಗ್ಗಿನಮಠ (27) ಕಳೆದ ಐದು ವರ್ಷದಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾರೆ. ಈಗಾಗಲೇ ಚಿಕಿತ್ಸೆಗಾಗಿ ಸಾಕಷ್ಟು ಹಣ ವೆಚ್ಚ ಮಾಡಿದ್ದಾರೆ. ಆರೋಗ್ಯ ಸುಧಾರಿಸಿಲ್ಲ. ಮೂತ್ರಪಿಂಡ ಕಸಿಯಿಂದ ಮಾತ್ರ ಜೀವ ರಕ್ಷಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆಗೆ ಕನಿಷ್ಠ 5 ಲಕ್ಷ ರೂಪಾಯಿ ಅಗತ್ಯವಿದೆ. ಅಲ್ಲಿಯವರೆಗೆ ಡಯಲಿಸಿಸ್ ಮಾಡಿಸಬೇಕಾಗಿದೆ.  ಆನಂದ ತೆಗ್ಗಿನಮಠ ಅವರ ಚಿಕಿತ್ಸೆಗೆ ದಾನಿಗಳು ನೆರವು ನೀಡಬಹುದು.ದಾನಿಗಳು ಬ್ಯಾಂಕ್ ಖಾತೆ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ- 32212997007) ಹಾಗೂ  ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (3138966737)ಗೆ ಹಣ ಜಮಾ ಮಾಡುವಂತೆ ಆನಂದನ ತಾಯಿ ಶಿವಗಂಗಮ್ಮ (ಮೊ. 9972896574 ಹಾಗೂ 9591072882) ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.