ಬುಧವಾರ, ಜೂನ್ 23, 2021
21 °C
ಟೆನಿಸ್‌: ಜೊಕೊವಿಕ್‌, ಮರ್ರೆ, ಫೆಡರರ್‌ಗೆ ಜಯ

ಮೂರನೇ ಸುತ್ತಿಗೆ ರಾಡ್ವಾಂಸ್ಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಯಾಮಿ (ರಾಯಿಟರ್ಸ್‌): ಪೋಲೆಂಡ್‌ನ ಅಗ್ನಿಸ್ಕಾ ರಾಡ್ವಾಂಸ್ಕಾ ಇಲ್ಲಿ ನಡೆಯುತ್ತಿರುವ ಸೋನಿ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.ಶುಕ್ರವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ರಾಡ್ವಾಂಸ್ಕಾ 6–0, 6–4ರಲ್ಲಿ ಸ್ವಿಟ್ಜರ್‌ಲೆಂಡ್‌ನ ರೊಮೀನಾ ಒಪ್ರಾಂಡಿ ಅವರನ್ನು ಮಣಿಸಿದರು. ಮೂರನೇ ಶ್ರೇಯಾಂಕ ಪಡೆದಿರುವ ರಾಡ್ವಾಂಸ್ಕಾ ಈ ಗೆಲುವಿಗಾಗಿ 74 ನಿಮಿಷ ತೆಗೆದುಕೊಂಡರು. ಆದರೆ ಪಂದ್ಯ ಮಧ್ಯದಲ್ಲಿ ಅವರು ಮಂಡಿ ನೋವಿಗೆ ಒಳಗಾದರು. ಪೋಲೆಂಡ್‌ನ ಈ ಆಟಗಾರ್ತಿ 2012ರಲ್ಲಿ ಇಲ್ಲಿ ಚಾಂಪಿ ಯನ್‌ ಆಗಿದ್ದರು.ಮಹಿಳೆಯರ ವಿಭಾಗದ ಎರಡನೇ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಅಮೆರಿಕದ ವೀನಸ್ ವಿಲಿಯಮ್ಸ್‌ 6–3, 6–3ರಲ್ಲಿ ಸ್ಲೊವಾಕಿಯಾದ ಅನಾ ಶ್ಮಿಡ್ಲೊವಾ ಎದುರೂ, ಫ್ರಾನ್ಸ್‌ನ ಅಲಿಜ್‌ ಕಾರ್ನೆಟ್‌ 6–2, 6–7, 6–4ರಲ್ಲಿ ಜರ್ಮನಿಯ ಆ್ಯಂಡ್ರಿಯಾ ಪೆಟ್ಕೊವಿಕ್‌ ವಿರುದ್ಧವೂ, ಸ್ಲೊವಾಕಿ ಯಾದ ಡೊಮಿನಿಕಾ ಸಿಬುಲ್ಕೋವಾ 6–1, 6–2ರಲ್ಲಿ ಆಸ್ಟ್ರೇಲಿಯಾದ ಯೋನ್‌ ಮೆಸ್ಬರ್ಗರ್‌ ಮೇಲೂ, ಅಮೆ ರಿಕದ ವಾರ್ವಾರಾ ಲೆಪ್ಚೆಂಕೊ 6–2, 2–6, 7–6ರಲ್ಲಿ ಸರ್ಬಿಯಾದ ಎಲೆನಾ ಜಾಂಕೋವಿಕ್‌ ಎದುರೂ ಗೆದ್ದರು.ಅಮೆರಿಕದ ಮೇಡಿಸನ್‌ ಕೀಸ್‌ 6–4, 6–2ರಲ್ಲಿ ಸ್ಲೊವಾಕಿಯಾದ ಡೇನಿಯೆಲಾ ಹಂಟು ಚೋವಾ ಎದುರು ಜಯ ಗಳಿಸಿದರು.

ಪುರುಷರ ವಿಭಾಗದಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್, ಬ್ರಿಟನ್‌ನ ಆ್ಯಂಡಿ ಮರ್ರೆ ಹಾಗೂ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಮೂರನೇ ಸುತ್ತು ಪ್ರವೇಶಿಸಿದರು.

ಎರಡನೇ ಸುತ್ತಿನ ಪಂದ್ಯಗಳಲ್ಲಿ ಜೊಕೊವಿಚ್‌ 6–4, 6–3ರಲ್ಲಿ ಫ್ರಾನ್ಸ್‌ನ ಜೆರೆಮಿ ಚಾರ್ಡಿ ಎದುರೂ, ಮರ್ರೆ 3–6, 6–0, 6–1ರಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯುಸ್‌ ಎಬ್ಡೆನ್‌ ಮೇಲೂ, ಫೆಡರರ್‌ 6–4, 7–6ರಲ್ಲಿ ಕ್ರೊಯೇಷ್ಯಾದ ಇವೊ ಕಾರ್ಲೊವಿಕ್‌ ವಿರುದ್ಧೂ ಜಯ ಸಾಧಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.