ಶುಕ್ರವಾರ, ಮೇ 14, 2021
31 °C

ಮೂರನೇ ಸ್ಥಾನಕ್ಕೇರಿದ ವಿದಿತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ನಾ, ಬಲ್ಗೇರಿಯಾ (ಪಿಟಿಐ): ಭಾರತದ ವಿದಿತ್ ಗುಜರಾತಿ ಇಲ್ಲಿ ನಡೆಯುತ್ತಿರುವ ಗ್ರ್ಯಾಂಡ್ ಯುರೋಪ್ ಗೋಲ್ಡನ್ ಸ್ಯಾಂಡ್ಸ್ ಅಂತರರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ 4.5 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನಕ್ಕೆ ಏರಿದ್ದಾರೆ.ಐದನೇ ಸುತ್ತಿನಲ್ಲಿ ವಿದಿತ್, ಬಲ್ಗೇರಿಯಾದ ಅಂತರರಾಷ್ಟ್ರೀಯ ಮಾಸ್ಟರ್ ಪೀಟರ್ ಅರ್ನೌಡೊವ್ ಅವರನ್ನು ಮಣಿಸಿದರು.ಭಾರತದ ಪರ ಉತ್ತಮ ಪ್ರದರ್ಶನ ತೋರುತ್ತಿರುವ ಮಹಾರಾಷ್ಟ್ರ ಮೂಲದ ವಿದಿತ್, ಐದನೇ ಸುತ್ತಿನ ಅಂತ್ಯಕ್ಕೆ 4.5 ಪಾಯಿಂಟ್ ಗಳಿಸಿದ್ದಾರೆ.ಇನ್ನು ನಾಲ್ಕು ಸುತ್ತುಗಳು ಬಾಕಿ ಇದ್ದು, ಜೆಕ್ ಗಣರಾಜ್ಯದ ಹ್ರಾಸೆಕ್ ಹಾಗೂ ರುಮೇನಿಯದ ವ್ಲಾಡಿಸ್ಲಾವ್ ಅವರು ತಲಾ 5 ಪಾಯಿಂಟ್‌ಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.ಜಾರ್ಜಿಯಾದ ಜಾವಖಡ್ಜೆ ಅವರನ್ನು ಮಣಿಸಿದ ಅಭಿಜಿತ್ ಗುಪ್ತಾ ನಾಲ್ಕು ಪಾಯಿಂಟ್ ಹೊಂದಿದ್ದಾರೆ. ಅಂತರರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ ಅಶ್ವಿನ್ ಜಯರಾಮ್, ಸಹೆಜ್ ಗ್ರೋವರ್, ಎಂ.ಆರ್.ವೆಂಕಟೇಶ್, ಜಿ.ಎನ್.ಗೋಪಾಲ್ ಹಾಗೂ ಎಸ್. ಅರುಣ್ ಪ್ರಸಾದ್ ಸಹ ತಲಾ ನಾಲ್ಕು ಪಾಯಿಂಟ್‌ಗಳನ್ನು ಹೊಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.