ತಿಪಟೂರು: ಕುಟುಂಬದಲ್ಲಿ ತಮ್ಮ ಅಭಿಪ್ರಾಯಕ್ಕೆ ಮನ್ನಣೆ ಪಡೆಯಲು ಮತ್ತು ನಿರ್ಣಯ ಮಂಡಿಸಲು ಮಹಿಳೆಯರು ಬೌದ್ಧಿಕ, ಶೈಕ್ಷಣಿಕ ಮತ್ತು ಆರ್ಥಿಕ ಶಕ್ತಿ ತುಂಬಿಕೊಳ್ಳಬೇಕು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ನಗರದಲ್ಲಿ ಶನಿವಾರ ನಡೆದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮನೆಯ ಒಳಗೆ ಮತ್ತು ಹೊರಗೆ ಪುರುಷರಿಗೆ ಸಮನಾಗಿ ನಿಲ್ಲಲು ಮಹಿಳೆಯರಿಗೆ ಮಾನಸಿಕ ಶಕ್ತಿ ಮುಖ್ಯ ಎಂದ ಸಚಿವರು, ಸ್ತ್ರೀಶಕ್ತಿ ಸಂಘಗಳು ಸಮಾಜದ ಚಿಕಿತ್ಸಕ ಶಕ್ತಿಯಾಗಿ ಬೆಳೆಯಬೇಕು ಎಂದು ಹೇಳಿದರು.

ಶಾಸಕ ಬಿ.ಸಿ.ನಾಗೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಸಂತಾ ಗಂಗಾಧರ್ ಮಾತನಾಡಿದರು.
ನಗರಸಭೆ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ಮಂಜುನಾಥ್, ತಾ.ಪಂ.ಉಪಾಧ್ಯಕ್ಷ ಭಾನುಪ್ರಕಾಶ್, ಉಪ ವಿಭಾಗಾಧಿಕಾರಿ ವೈ.ಎಸ್.ಪಾಟೀಲ್, ಎಎಸ್ಪಿ ಡಾ.ಬೋರಲಿಂಗಯ್ಯ, ಸಿಡಿಪಿಒ ಎಸ್.ನಟರಾಜ್ ಮತ್ತಿತರರು ಇದ್ದರು.

ಅತ್ಯುತ್ತಮ ಸಾಧನೆಗೆ ರಾಜ್ಯ ಮಟ್ಟದ ಪ್ರಥಮ ಬಹುಮಾನ ಪಡೆದ ಇದೇ ತಾಲ್ಲೂಕಿನ ವಾಸುದೇವರಹಳ್ಳಿಯ ಬಸವೇಶ್ವರ ಸ್ತ್ರೀಶಕ್ತಿ ಸಂಘದ ಸದಸ್ಯೆಯರನ್ನು ಪುರಸ್ಕರಿಸಲಾಯಿತು. ವಿವಿಧ ಕ್ಷೇತ್ರದ ಸಾಧಕ ಮಹಿಳೆಯರು, ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆರನ್ನು ಸನ್ಮಾನಿಸಲಾಯಿತು. ತಾಲ್ಲೂಕಿನ ವಿವಿಧ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಪ್ರದರ್ಶಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಹೇಶ್ವರಪ್ಪ ಸ್ವಾಗತಿಸಿದರು. ಲೀಲಾಬಾಯಿ ವಂದಿಸಿದರು.

ವಿದ್ಯುತ್ ಕೊರತೆ ನಿವಾರಣೆ
ಹಿಂದಿನ ಸರ್ಕಾರಗಳು ಮುಂದಾಲೋಚನೆ ಮಾಡದ್ದರಿಂದ ಈಗ ರಾಜ್ಯದಲ್ಲಿ ವಿದ್ಯುತ್ ಕೊರತೆ ಎದುರಾಗಿದೆ. ರಾಜ್ಯಕ್ಕೆ 10.5 ಸಾವಿರ ಮೆ.ವ್ಯಾ. ವಿದ್ಯುತ್ ಬೇಕಾಗಿದ್ದು, ಈಗ ಕೇವಲ 7.5 ಸಾವಿರ ಮೆ.ವ್ಯಾ. ಲಭ್ಯವಿದೆ. ಕೊರತೆ ನೀಗಿಸಲು 1300 ಮೆ.ವ್ಯಾ. ಖರೀದಿಸಲಾಗುತ್ತಿದೆ. ಈ ವರ್ಷ ರಾಜ್ಯದಲ್ಲಿ ವಿವಿಧ ಮೂಲಗಳಿಂದ 1500 ಮೆ.ವ್ಯಾ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ ಎಂದರು.

ತಾಲ್ಲೂಕಿನ ಕೆರಗೋಡಿಯಲ್ಲಿ ರಾಜ್ಯ ವಿದ್ಯುತ್ ಪ್ರಸರಣ ನಿಗಮದಿಂದ ನಿರ್ಮಿಸುವ ಸುಮಾರು 4 ಕೋಟಿ ರೂಪಾಯಿ ವೆಚ್ಚದ 110 ಕೆವಿ ವಿದ್ಯುತ್ ಉಪಸ್ಥಾವರಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಸ್ವಾವಲಂಬನೆ ಸಾಧಿಸಲು ಸರ್ಕಾರ ಗುರಿ ಹಾಕಿಕೊಂಡಿದ್ದು, ಈ ಸಂಬಂಧ ವಿವಿಧೆಡೆ ಉತ್ಪನ್ನ ಘಟಕ ಸ್ಥಾಪಿಸಲಾಗುವುದು. ಈಗಿನ ಕೆಲ ಘಟಕಗಳ ಸಾಮರ್ಥ್ಯ ವಿಸ್ತರಿಸಲಾಗುವುದು. ಕಲ್ಲಿದ್ದಲು ಪೂರೈಕೆ, ಪರವಾನಗಿ ಸಂಬಂಧ ಕೇಂದ್ರ ಸರ್ಕಾರ ಸಹಕರಿಸುತ್ತಿಲ್ಲ. ಹಾಗಾಗಿ ಕಲ್ಲಿದ್ದಲು ಪೂರೈಕೆ, ಜಲ ಸಂಪನ್ಮೂಲ ಬಳಕೆ ಸಂಬಂಧ ಕೇಂದ್ರ ಸಚಿವರನ್ನು ಕೋರಲು ಮುಖ್ಯಮಂತ್ರಿ ನೇತೃತ್ವದಲ್ಲಿ ಸದ್ಯದಲ್ಲೇ ನಿಯೋಗ ತೆರಳಲಿದೆ ಎಂದರು.

ಉತ್ಪಾದನೆಯಷ್ಟೇ ಅಲ್ಲದೆ ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ಹೊಸ ವಿತರಣೆ ಕೇಂದ್ರ ಸ್ಥಾಪನೆ, ಪರಿವರ್ತಕ ಮತ್ತು ಮಾರ್ಗ ಸುಧಾರಣೆಗಾಗಿ 3.5 ಸಾವಿರ ಕೋಟಿ ರೂ. ಯೋಜನೆ ಹಾಕಿಕೊಳ್ಳಲಾಗಿದೆ. ಈ ವರ್ಷದಲ್ಲಿ 700 ಕೋಟಿ ರೂ. ಬಳಸಲಾಗುತ್ತಿದೆ. ತಿಪಟೂರು ತಾಲ್ಲೂಕು ಕೆರೆಗೋಡಿಯ ಉಪ ಸ್ಥಾವರಕ್ಕೆ 4 ಕೋಟಿ ರೂ. ಬಿಡುಗಡೆಯಾಗಿದ್ದು, ಮುಂದಿನ ಡಿಸೆಂಬರ್ ವೇಳೆಗೆ ಕಾರ್ಯಾರಂಭ ಮಾಡಲಿದೆ. ಇದೇ ತಾಲ್ಲೂಕಿನ ಗುಂಗುರಮಳೆಯಲ್ಲಿ 110 ಕೆವಿ ಸ್ಥಾವರ ಸ್ಥಾಪಿಸಲು 5 ಕೋಟಿ ರೂ. ಮಂಜೂರಾಗಿದೆ ಎಂದು ತಿಳಿಸಿದರು. ಶಾಸಕ ಬಿ.ಸಿ.ನಾಗೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಸಂತಾ ಜತೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.