ಗುರುವಾರ , ಜೂನ್ 24, 2021
25 °C

ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮೂವರು ಗಂಡುಮಕ್ಕಳನ್ನು ಬಾವಿಗೆ ನೂಕಿ, ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಯರ್ಮಾಳ ಗ್ರಾಮದಲ್ಲಿ ಭಾನುವಾರ ಬೆಳಕಿಗೆ ಬಂದಿದೆ.ಮೃತರನ್ನು ಯರ್ಮಾಳ ಗ್ರಾಮದ ಬಂಗಾರವ್ವ ರಾಮನಗೌಡ ಪಾಟೀಲ (37) ಎಂಬ ಮಹಿಳೆ ತನ್ನ ಮಕ್ಕಳಾದ ಪರಶುರಾಮ (7), ಮಧು (5) ಹಾಗೂ ನವೀನ (3) ಎಂದು ಗುರುತಿಸಲಾಗಿದೆ.ಹೋಳಿ ಹಬ್ಬದ ದಿನ ಮಗನೊಬ್ಬನ ಕಾಲಿಗೆ ಒಡೆದ ಬಾಟಲಿ ತಗುಲಿ ಗಾಯವಾಗಿದೆ. ಗಾಯಗೊಂಡ ಮಗನ ಕಾಲಿಗೆ ರಾತ್ರಿ ಆರೈಕೆ ಮಾಡುತ್ತಿದ್ದಾಗ, ರಾತ್ರಿ ದೀಪ ಉರಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಬಂಗಾರವ್ವಳ ಮೇಲೆ ಮನೆಯವರೆಲ್ಲ ಸಿಡುಕಿದ್ದಾರೆ ಎನ್ನಲಾಗಿದೆ.ಇದರಿಂದ ಬೇಸರಗೊಂಡ ಬಂಗಾರವ್ವ ತನ್ನ ಮೂವರು ಮಕ್ಕಳೊಂದಿಗೆ ಶುಕ್ರವಾರ ರಾತ್ರಿಯೇ ನಾಪತ್ತೆಯಾಗಿದ್ದಳು. ಗ್ರಾಮಸ್ಥರು ಇವರಿಗಾಗಿ ಹುಡುಕಾಡಿದಾಗ ಬಂಗಾರವ್ವ ಹಾಗೂ ಮೂವರು ಮಕ್ಕಳ ಶವ ಭಾನುವಾರದಂದು ಗ್ರಾಮದ ಬಾವಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.