ಶುಕ್ರವಾರ, ಮಾರ್ಚ್ 5, 2021
29 °C
ಉದ್ದಿಮೆ ಸ್ಥಾಪನೆಗೆ ಅವಕಾಶ: ಸಿ.ಎಂ

ಮೆಕ್ಕೆಜೋಳ ಉಪ ಉತ್ಪನ್ನ ಘಟಕ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಕ್ಕೆಜೋಳ ಉಪ ಉತ್ಪನ್ನ ಘಟಕ ಶುರು

ದಾವಣಗೆರೆ: ಜಿಲ್ಲೆಯ ಹರಿಹರ ಸಮೀಪದ ಬೆಳ್ಳೂಡಿ ಗ್ರಾಮದ 44 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿರುವ ಅಮೆರಿಕದ ಕಾರ್ಗಿಲ್‌ ಕಂಪೆನಿಯ ಮೆಕ್ಕೆಜೋಳ ಉಪ ಉತ್ಪನ್ನ ಉದ್ದಿಮೆ ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಉದ್ಘಾಟಿಸಿದರು.ಉದ್ದಿಮೆ ಪ್ರತಿ ದಿನ 800 ಟನ್‌ ಮೆಕ್ಕೆ ಜೋಳ ಉಪ ಉತ್ಪಾದನೆ ತಯಾರಿಕೆ ಸಾಮರ್ಥ್ಯ ಹೊಂದಿದೆ. ಪ್ರತಿ ವರ್ಷ 1,68,00 ಮೆಟ್ರಿಕ್‌ ಟನ್‌ ಲಿಕ್ವಿಡ್‌ ಗುಕ್ಲೋಸ್, ಡೆಕ್ಟ್ರೋಸ್‌ ಸಿರಪ್‌, ಹೈ ಮಾಲ್ಟೋಸ್‌ ಸಿರಪ್ ಅಲ್ಲದೇ, ಪ್ರತಿ ವರ್ಷ 32 ಸಾವಿರ ಮೆಟ್ರಿಕ್‌ ಟನ್‌ ಮಾಲ್ಟೋ ಡೆಕ್ಟ್ರೀನ್‌ ಉತ್ಪಾದಿಸುವ ಗುರಿ ಇದೆ.ಇದರ ಜೊತೆಗೆ ಘಟಕವು  ಕಾರ್ನ್‌ ಜೆರ್ಮ್‌, ಕಾರ್ನ್‌ ಗುಲ್ಟೇನ್‌ ಮೀಲ್, ಕಾರ್ನ್‌ ಜೆರ್ಮ್‌ ಫೀಡ್, ಬ್ರೋಕನ್‌ ಕಾರ್ನ್‌ ಹಾಗೂ ಎಂಇಇ ಸಾಲ್ಟ್ಸ್ ಉತ್ಪಾದಿಸಲಿದೆ.ಈ ಸಂದರ್ಭ ಮಾತನಾಡಿದ ಸಿದ್ದರಾಮಯ್ಯ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಉದ್ದಿಮೆ ಸ್ಥಾಪನೆಗೆ ರಾಜ್ಯದಲ್ಲಿ ಉತ್ತಮ ವಾತಾವರಣವಿದೆ. ಹೂಡಿಕೆದಾರರು ಫೆಬ್ರುವರಿ 3ರಿಂದ 5ರವರೆಗೆ ಬೆಂಗಳೂರಿನಲ್ಲಿ ನಡೆಯಲಿ ರುವ ಜಾಗತಿಕ ಹೂಡಿಕೆದಾರರ ಸಮಾ ವೇಶದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಆಹ್ವಾನ ನೀಡಿದರು.ಸಮಾವೇಶದಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಕುರಿತಂತೆ ವಿಶೇಷ ಚರ್ಚೆ–ಸಂವಾದಗಳು ನಡೆಯಲಿವೆ. ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಾರ್ಗಿಲ್‌ ಮತ್ತಿತರ ಕಂಪೆನಿಗಳು ಇದರಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.ದಾವಣಗೆರೆ ಈಗ ದೇಶದಲ್ಲಿ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯುವ ಪ್ರದೇಶವಾಗಿ ಗುರುತಿಸಿಕೊಂಡಿದೆ. ಇಲ್ಲಿ ಕಾರ್ಗಿಲ್‌ ಕಂಪೆನಿ ಉದ್ದಿಮೆ ಸ್ಥಾಪಿಸಿರುವುದು ಉತ್ತಮ ನಿರ್ಧಾರ. ಈ ಪ್ರದೇಶದಲ್ಲಿ ಇನ್ನೂ 3–4 ಮೆಕ್ಕೆಜೋಳ ಉಪ ಉತ್ಪನ್ನ ಉದ್ದಿಮೆ ಸ್ಥಾಪನೆಗೆ ಅವಕಾಶ ಇದೆ ಎಂದರು.ಕಾರ್ಗಿಲ್‌ ಕಂಪೆನಿ ಸಿಇಒ ಡೇವಿಡ್‌ ಮ್ಯಾಕ್ಲೆನನ್‌ ಮಾತನಾಡಿ, ಪ್ರಸ್ತುತ ಕಂಪೆನಿಯಲ್ಲಿ ಮೆಕ್ಕೆಜೋಳದ 9 ಉಪ ಉತ್ಪನ್ನಗಳನ್ನು ತಯಾರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಕಾರ್ಗಿಲ್‌ ಇಂಡಿಯಾ ಅಧ್ಯಕ್ಷ ಸಿರಾಜ್‌ ಚೌಧರಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.