ಹುಬ್ಬಳ್ಳಿ: ನಗರದ ಮೂರುಸಾವಿರಮಠದ ಆವರಣದಲ್ಲಿ ಮಂಗಳವಾರ ಮುಕ್ತಾಯಗೊಂಡ ಮೆಣಸಿನಕಾಯಿ ಮೇಳದಲ್ಲಿ 275 ಕ್ವಿಂಟಲ್ ಮೆಣಸಿನಕಾಯಿ ಮಾರಾಟವಾಗಿ, ದಾಖಲೆಯ ರೂ 37 ಲಕ್ಷ ವಹಿವಾಟು ನಡೆಯಿತು.

ಮೂರು ದಿನಗಳ ಮೇಳದಲ್ಲಿ ಭಾನುವಾರ 70 ಕ್ವಿಂಟಲ್ ಮಾರಾಟವಾಗಿ ರೂ 8 ಲಕ್ಷ, ಸೋಮವಾರ 85 ಕ್ವಿಂಟಲ್ ಮಾರಾಟವಾಗಿ ರೂ 12 ಲಕ್ಷ ಮತ್ತು ಕೊನೆಯ ದಿನವಾದ ಮಂಗಳವಾರ ಭರ್ಜರಿ 120 ಕ್ವಿಂಟಲ್ ಮಾರಾಟವಾಗಿ ರೂ 17 ಲಕ್ಷ ವಹಿವಾಟು ನಡೆಯಿತು.

ಕೆ.ಜಿಗೆ 120 ರೂಪಾಯಿಯಿಂದ 400 ರೂಪಾಯಿವರೆಗೆ ಮೆಣಸಿನಕಾಯಿ ಮಾರಾಟ ಮಂಗಳವಾರ ನಡೆದಿದ್ದು ದಾಖಲೆ.

`ಮೇಳದಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ಮೆಣಸಿನಕಾಯಿ ಬೆಳೆಯುವ ರೈತರು ಹೆಚ್ಚು ಪಾಲ್ಗೊಂಡಿದ್ದರು. ಕಳೆದ ವರ್ಷ ಆರಂಭಿಸಿದ ಮೇಳದಿಂದ ಉತ್ತೇಜನಗೊಂಡ ರೈತರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಕಳೆದ ವರ್ಷ 120 ಕ್ವಿಂಟಲ್ ಮಾರಾಟವಾಗಿ 14.50 ಲಕ್ಷ ರೂಪಾಯಿನಷ್ಟು ವಹಿವಾಟಾಗಿತ್ತು~ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಉಮೇಶ ಮಿರ್ಜಿ ತಿಳಿಸಿದರು.

`ಮೇಳದಲ್ಲಿ 100ಕ್ಕೂ ಅಧಿಕ ಮಳಿಗೆಗಳಿದ್ದವು. ಮೆಣಸಿನಕಾಯಿ ಬೆಳೆ ಸಮಸ್ಯೆಗಳ ಕುರಿತು ಕೃಷಿ ವಿಶ್ವವಿದ್ಯಾಲಯ ವಿಜ್ಞಾನಿಗಳೊಂದಿಗೆ ರೈತರು ಚರ್ಚಿಸಿದ್ದಾರೆ.

ಇದರಿಂದ ಮೆಣಸಿನಕಾಯಿ ಮಾರಾಟದ ಜೊತೆಗೆ ಹೆಚ್ಚು ಬೆಳೆ ಬೆಳೆಯುವ ಕುರಿತು ಸಂವಾದ ನಡೆದಿದೆ.
ಪ್ರತಿ ವರ್ಷ ಮೆಣಸಿನಕಾಯಿ ಮೇಳ ಏರ್ಪಡಿಸುತ್ತೇವೆ~ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.