ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವರ್ಷಕ್ಕೆ ಕಾಲಿರಿಸಿದ ಹಿನ್ನೆಲೆಯಲ್ಲಿ ಆಚರಿಸಬೇಕಿದ್ದ ನಂದಿ ಉತ್ಸವಕ್ಕೆ ಅಂತೂ ಇಂತೂ ಮಹೂರ್ತ ನಿಗದಿಯಾಗಿದೆ. ಜಿಲ್ಲೆಯ ಸಂಸ್ಥಾಪನಾ ದಿನವಾದ ಆಗಸ್ಟ್ 23ರಂದು ಆಚರಿಸಬೇಕಿದ್ದ ನಂದಿ ಉತ್ಸವವನ್ನು ಮೇ ತಿಂಗಳ ಕೊನೆಯ ವಾರದಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಜಿಲ್ಲಾ ಸಂಸ್ಥಾಪನಾ ದಿನಾಚರಣೆ ನಡೆದು 8 ತಿಂಗಳ ನಂತರ ಆಸಕ್ತಿ ತೋರಿರುವ ರಾಜ್ಯ ಸರ್ಕಾರ ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯದಲ್ಲಿ ಉತ್ಸವ ಆಚರಿಸಲು ಮುಂದಾಗಿದೆ.

ನಂದಿ ಉತ್ಸವಕ್ಕೆಸಂಬಂಧಿಸಿದಂತೆ ವಿಧಾನಸೌಧದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ದೀರ್ಘ ಕಾಲದವರೆಗೆ ಚರ್ಚೆ ನಡೆಸಲಾಯಿತು. ದಿನಾಂಕ ಮತ್ತು ಸ್ಥಳ ನಿಗದಿ, ಉತ್ಸವ ಆಚರಣೆ ರೀತಿ, ಅತಿಥಿಗಳ ಆಹ್ವಾನ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಭೋಗನಂದೀಶ್ವರ ದೇವಾಲಯದ ಆವರಣದಲ್ಲಿ ಮೂರು ದಿನಗಳ ಕಾಲ ಉತ್ಸವ ಆಚರಿಸಲು ನಿರ್ಧರಿಸಿದ ಸಭೆಯು ಮುಂದಿನ ದಿನಗಳಲ್ಲಿ ಇನ್ನೊಮ್ಮೆ ಚರ್ಚಿಸಿ ಅಂತಿಮ ನಿರ್ಣಯಗಳನ್ನು ತೆಗೆದುಕೊಳ್ಳಲಿದೆ.

ಅಂದು ನಂದಿ ಉತ್ಸವ ರದ್ದು: ಕಳೆದ ವರ್ಷ ಆಗಸ್ಟ್ 23, ಜಿಲ್ಲೆಯ ಪಾಲಿಗೆ ಒಂದರ್ಥದಲ್ಲಿ ಐತಿಹಾಸಿಕ ದಿನವಾಗಬೇಕಿತ್ತು. ಭಾರಿ ಸಂಭ್ರಮ ಮತ್ತು ಅದ್ಧೂರಿಯಿಂದ ಕಾರ್ಯಕ್ರಮಗಳು ನಡೆಯಬೇಕಿತ್ತು. ಆದರೆ ನಂದಿ ಉತ್ಸವವನ್ನು ಜಿಲ್ಲಾಡಳಿತ ರದ್ದು ಮಾಡಿದ ಏಕೈಕ ಕಾರಣದಿಂದ ಇಡೀ ದಿನ ನೀರಸವಾಗಿತ್ತು. ಸಂಭ್ರಮ ಮತ್ತು ಸಂತಸದ ಕ್ಷಣಗಳು ನಿರಾಸೆ ಮತ್ತು ನಿರ್ಲಕ್ಷ್ಯದ ಕ್ಷಣಗಳಾಗಿ ಮಾರ್ಪಟ್ಟಿದ್ದವು. ನಂದಿ ಉತ್ಸವ ಆಚರಣೆ ರದ್ದುಗೊಂಡಿದ್ದಕ್ಕೆ ಅಸಮಾಧಾನ ಮತ್ತು ಬೇಸರ ವ್ಯಕ್ತಪಡಿಸಿದ ಕೆಲ ಸಂಘಸಂಸ್ಥೆಗಳು ಅಂದು ಸಂಸ್ಥಾಪನಾ ದಿನದ ಅಂಗವಾಗಿ ಯಾವುದೇ ಕಾರ್ಯಕ್ರಮಗಳನ್ನು ಆಚರಿಸಲಿಲ್ಲ.

ಇದಕ್ಕೆ ಪೂರಕ ಎಂಬಂತೆ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರೊ. ಮುಮ್ತಾಜ್ ಅಲಿ ಖಾನ್ ಅವರು ಅಂದು ಜಿಲ್ಲೆಗೆ ಭೇಟಿ ನೀಡಲಿಲ್ಲ. ಶಾಸಕ ಕೆ.ಪಿ.ಬಚ್ಚೇಗೌಡ ಅವರು ಕಾರ್ಯನಿಮಿತ್ತ ಗುಜರಾತ್ಗೆ ತೆರಳಿದ್ದರೆ, ಪೊಲೀಸ್ ವರಿಷ್ಠಾಧಿಕಾರಿ ಡಾ. ಡಿ.ಟಿ.ಪವಾರ್ ಅವರು ತರಬೇತಿಗಾಗಿ ಮಸ್ಸೂರಿಗೆ ಹೋಗಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಅಧಿಕಾರಿ ವಹಿಸಿಕೊಂಡಿದ್ದ ನೂತನ ಜಿಲ್ಲಾಧಿಕಾರಿ ಡಾ. ಮಂಜುಳಾ ಅವರೂ ಸಹ ಅಂದು ಇತರ ಕಾರ್ಯಗಳಲ್ಲಿ ಮಗ್ನರಾಗಿದ್ದ ಕಾರಣ ಉತ್ಸವ ನಡೆಯಲಿಲ್ಲ. ಕಾರ್ಯಕ್ರಮಗಳು ಆಗಲಿಲ್ಲ.

ಆದರೆ ಈ ರೀತಿಯ ನಿರಾಶೆ ತಲೆದೋರಲಿ ಮತ್ತು ಸಾರ್ವಜನಿಕರಿಗೆ ಬೇಸರ ಮೂಡದಿರಲಿ ಎಂಬ ಉದ್ದೇಶದಿಂದ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರೊ. ಮುಮ್ತಾಜ್ ಅಲಿ ಖಾನ್ ಅವರು ನಂದಿ ಉತ್ಸವಕ್ಕೆ ಸಂಬಂಧಿಸಿದಂತೆ ಮೂರು ಸುತ್ತಿನ ಸಭೆಗಳನ್ನು ನಡೆಸಿದ್ದರು. ಕನ್ನಡಪರ ಸಂಘಟನೆಗಳು, ಸಾಂಸ್ಕೃತಿಕ ಸಂಘಟನೆಗಳು, ಕಲಾವಿದರು ಸೇರಿದಂತೆ ವಿವಿಧ ತಜ್ಞರು ಮತ್ತು ಪರಿಣಿತರಿಂದ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ಪಡೆದಿದ್ದರು. ನಂದಿ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಸಮಿತಿಗಳನ್ನು ರಚಿಸಿ, ಅಂತಿಮ ಹಂತದ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರು ಬಾರದಿದ್ದರೆ, ಉತ್ಸವ ಆಚರಣೆಗೆ ಅರ್ಥವಿಲ್ಲ ಎಂಬ ಅಪಸ್ವರ ಕೇಳಿ ಬಂದ ಹಿನ್ನೆಲೆಯಲ್ಲಿ ಸಮಿತಿಗಳ ರಚನೆ, ಅಂತಿಮ ಹಂತದ ಸಿದ್ಧತೆ ಎಲ್ಲವೂ ನಿಷ್ಪ್ರಯೋಜಕವಾಯಿತು.

ಮುಖ್ಯಮಂತ್ರಿ ಬರುವರೇ?: ‘ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಉತ್ಸವಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯದ ಆವರಣದಲ್ಲಿ ಮೇ ತಿಂಗಳ ಕೊನೆಯ ವಾರದಲ್ಲಿ ಮೂರು ದಿನಗಳ ಕಾಲ ನಂದಿ ಉತ್ಸವ ಆಚರಿಸಲು ನಿರ್ಣಯಿಸಲಾಗಿದೆ. ಉತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ಕೊಡುವ ನಿರೀಕ್ಷೆಯಿದೆ’ ಎಂದು ಶಾಸಕ ಕೆ.ಪಿ.ಬಚ್ಚೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ಸವಕ್ಕೆ ಸಂಬಂಧಿಸಿದಂತೆ ಅಂತಿಮ ಹಂತದ ಸಿದ್ಧತೆಗಾಗಿ ಮತ್ತೊಮ್ಮೆ ಸಭೆ ನಡೆಸಲಾಗುವುದು. ಆಗ ಕಾರ್ಯಕ್ರಮದ ರೂಪುರೇಷೆ, ಅತಿಥಿಗಳ ಆಹ್ವಾನ, ಅಗತ್ಯತೆ-ಅನಗತ್ಯತೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು’ ಎಂದು ಅವರು ತಿಳಿಸಿದರು. ಚಿಂತಾಮಣಿ ಶಾಸಕ ಡಾ. ಎಂ.ಸಿ.ಸುಧಾಕರ, ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿನ್ನಪ್ಪಯ್ಯ, ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.