ಬುಧವಾರ, ಮೇ 12, 2021
19 °C

ಮೇ 12ರಿಂದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಆಳ್ವಾಸ್ ಎಜುಕೇಶನ್ ಫೌಂಡೇಶನ್ ವತಿಯಿಂದ `ಆಳ್ವಾಸ್ ಪ್ರಗತಿ-2012~ ಉದ್ಯೋಗ ಮೇಳ ಮೂಡಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ಮೇ 12, 13ರಂದು ನಡೆಯಲಿದೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಎಜುಕೇಶನ್ ಫೌಂಡೇಶನ್‌ದ ಮಾಧ್ಯಮ ಸಂಪರ್ಕಾ ಧಿಕಾರಿ ಹರೀಶ್ ಆದೂರು ಮಾಹಿತಿ ನೀಡಿದರು.ಇನ್‌ಫೋಸಿಸ್, ಕೋಕ ಕೋಲಾ, ವೋಲ್ವೋ, ಎಚ್.ಪಿ., ಪೆಪ್ಸಿಕೋ, ವಿಪ್ರೋ ಸೇರಿದಂತೆ 150ಕ್ಕೂ ಹೆಚ್ಚಿನ  ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಲ್ದ್ದಿದು ಸಾವಿರಾರು ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಿವೆ. ಈ ಬಾರಿ ಭಾರತೀಯ ಸೇನೆಯೂ ಭಾಗವಹಿಸಲಿದೆ. ವಿಪ್ರೋ ಹಾಗೂ ವಿಂಧ್ಯ ಇನ್‌ಫೋಟೆಕ್ ಸಂಸ್ಥೆಗಳು ಅಂಗವಿಕಲ ಅಭ್ಯರ್ಥಿಗಳಿಗೂ ಉದ್ಯೋಗ ನೀಡಲಿವೆ ಎಂದು ಅವರು ತಿಳಿಸಿದರು.ಬ್ಯಾಂಕಿಂಗ್, ಉತ್ಪಾದನಾ ಕ್ಷೇತ್ರ, ಸೇನೆ, ಅತಿಥಿ ಸತ್ಕಾರ, ಮಾಹಿತಿ ತಂತ್ರಜ್ಞಾನ, ಸೇವಾ ಕ್ಷೇತ್ರ, ವೈದ್ಯಕೀಯ, ಬಿಪಿಒ, ಕೆಪಿಒ, ಐಟಿ, ಇನ್ಶುರೆನ್ಸ್, ಅಟೊಮೊಬೈಲ್, ಸೇಲ್ಸ್ ಮೊದಲಾದ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳಿವೆ. ಪಿಯುಸಿಯಿಂದ ಆರಂಭಿಸಿ ಎಲ್ಲ ರೀತಿಯ ಉನ್ನತ ಅರ್ಹತೆಯುಳ್ಳವರೂ ಪಾಲ್ಗೊಳ್ಳಬಹುದು. ಪಿಯುಸಿ ಅನುತ್ತೀರ್ಣರಾದವರಿಗೂ ಉದ್ಯೋಗಗಳಿವೆ. ಮೇಳ ಸಂಪೂರ್ಣ ಉಚಿತ ಎಂದು ಅವರು ತಿಳಿಸಿದರು.ಸತತ ಮೂರನೇ ವರ್ಷದ ಈ ಉದ್ಯೋಗ ಮೇಳಕ್ಕೆ ಈ ಬಾರಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅಧ್ಯಕ್ಷತೆ ವಹಿಸಲ್ದ್ದಿದಾರೆ. ನೋಂದಣಿಗಾಗಿ ವ್ಯವಸ್ಥಿತವಾದ ನೋಂದಣಿ ಸಮಿತಿ ರಚಿಸಲಾಗಿದ್ದು ಪ್ರತಿ ಹಂತದಲ್ಲೂ ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಲು ಅಲ್ಲಲ್ಲಿ ಹೆಲ್ಪ್ ಡೆಸ್ಕ್ ರೂಪಿಸಲಾಗಿದೆ. ಉದ್ಯೋಗಮೇಳದಲ್ಲಿ ಭಾಗವಹಿಸುವವರಿಗಾಗಿ ಮೇ.5, 6ರಂದು ಮೂಡಬಿದಿರೆಯ ಆವರಣದಲ್ಲಿ ವಿಶೇಷ ತರಬೇತಿಯನ್ನೂ ಆಯೋಜಿಸಲಾಗಿದೆ.ಆನ್‌ಲೈನ್ ಮೂಲಕ placement.alvas@gmail.com ಅರ್ಜಿ ಸಲ್ಲಿಸಬಹುದು. ನೇರವಾಗಿ ಸ್ಥಳದಲ್ಲೇ ನೋಂದಣಿಯನ್ನೂ ಮಾಡಿಸಬಹುದು. ಮಾಹಿತಿಗಾಗಿ 08258- 237104 ಸಂಪರ್ಕಿಸಬಹುದು. ಉದ್ಯೋಗಮೇಳಕ್ಕೆ ಬರುವವರು ಸ್ವ ಪರಿಚಯ, ಅಂಕಪಟ್ಟಿಗಳ ಝೆರಾಕ್ಸ್ ಪ್ರತಿ, ಭಾವಚಿತ್ರ ಹಾಗೂ ಇತರ ದಾಖಲೆಗಳ ಐದು ಪ್ರತಿಗಳನ್ನು ತರಬೇಕಾಗುತ್ತದೆ. ಪ್ಲೇಸ್‌ಮೆಂಟ್ ಅಧಿಕಾರಿ ಅಮಿತ್ ಶೆಟ್ಟಿ, ಉಪನ್ಯಾಸಕಿ ಸೌಮ್ಯ ಹರೀಶ್ ಪತ್ರಿಕಾ ಗೋಷ್ಠಿಯಲ್ಲಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.