ಬೆಂಗಳೂರು: `ಮಲ್ಲೇಶ್ವರ ಮಾರುಕಟ್ಟೆ, ಶೇಷಾದ್ರಿಪುರ ಮಾರುಕಟ್ಟೆ, ಕೆ.ಆರ್.ಪುರ ಸಂತೆ ಮೈದಾನವನ್ನು ನಾಶಪಡಿಸಿ ಮಾಲ್ಗಳನ್ನು ಕಟ್ಟುವ ಸುಮಾರು ರೂ 500 ಕೋಟಿ ಯೋಜನೆಯನ್ನು ಬಿಡಿಎ ಕೂಡಲೇ ಕೈಬಿಡಬೇಕು~ ಎಂದು ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ಆಗ್ರಹಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಬಿ.ಎಂ. ಶಿವಕುಮಾರ್, `ಬಲಿಷ್ಠ ವ್ಯಾಪಾರಿಗಳು, ಅಗರ್ಭ ಶ್ರೀಮಂತರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲವು ರಾಜಕಾರಣಿಗಳು, ಬಿಡಿಎ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜೇಬು ತುಂಬಿಸುವ ಸಲುವಾಗಿಯೇ ಈ ಯೋಜನೆ ರೂಪಿಸಲಾಗಿದೆ~ ಎಂದರು.

ಯೋಜನೆ ಮೊತ್ತ: `ಜಯನಗರ 4ನೇ ಬ್ಲಾಕ್ನಲ್ಲಿ ಪುಟ್ಟಣ್ಣ ಕಣಗಾಲ್ ಚಿತ್ರಮಂದಿರ ಹಾಗೂ ವಾಹನ ನಿಲ್ದಾಣ ನಿರ್ಮಾಣಕ್ಕೆ ರೂ 99.70 ಕೋಟಿ, ಕೆ.ಆರ್.ಪುರ ಸಂತೆ ಮೈದಾನದಲ್ಲಿ ವಾಣಿಜ್ಯ ಹಾಗೂ ವಾಹನ ನಿಲ್ದಾಣ ಸಂಕೀರ್ಣ ನಿರ್ಮಾಣಕ್ಕೆ ರೂ 21.51 ಕೋಟಿ, ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಹಾಲಿ ಇರುವ ಮಾರುಕಟ್ಟೆ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ರೂ 76.30 ಕೋಟಿ, ಶೇಷಾದ್ರಿಪುರ ಮಾರುಕಟ್ಟೆಯ ಪುನರ್ ನಿರ್ಮಾಣಕ್ಕೆ ರೂ 17.85 ಕೋಟಿಯ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸರ್ಕಾರದಿಂದ ಅನುಮೋದನೆ ಸಹ ದೊರಕಿದೆ. ಈಗ ಯೋಜನೆಯ ಮೊತ್ತ ರೂ 500 ಕೋಟಿ ದಾಟುತ್ತದೆ~ ಎಂದು ಅವರು ಮಾಹಿತಿ ನೀಡಿದರು.

`ನಗರದಲ್ಲಿ ಗರುಡಾಮಾಲ್, ಗೋಪಾಲನ್ಮಾಲ್, ಮಂತ್ರಿಮಾಲ್, ಫೋರಂ ಮಾಲ್ ಸೇರಿದಂತೆ 60ಕ್ಕೂ ಅಧಿಕ ದೊಡ್ಡ ಮಾಲ್ಗಳಿವೆ. ಇಲ್ಲಿನ ಗ್ರಾಹಕರು ಶ್ರೀಮಂತರು. ಪುನಃ ಶ್ರೀಮಂತರ ಲಾಭಕ್ಕೆ ಮಾಲ್ಗಳನ್ನು ನಿರ್ಮಿಸುವ ಅಗತ್ಯ ಇಲ್ಲ. ಜನತಾ ಬಜಾರ್ಗಳನ್ನು ಹೆಚ್ಚೆಚ್ಚು ಸ್ಥಾಪಿಸಿ ಜನರಿಗೆ ಸುಲಭದಲ್ಲಿ ಅಗತ್ಯ ವಸ್ತುಗಳು ದೊರಕುವಂತೆ ನೋಡಿಕೊಳ್ಳಬೇಕಾದುದು ಸರ್ಕಾರದ ಕರ್ತವ್ಯ. ಬಿಡಿಎ ಮಾಡಿರುವ ಯೋಜನೆಗೆ ಸರ್ಕಾರದ ಅನುಮೋದನೆ ದೊರಕುವ ಮೂಲಕ ಮುಖ್ಯಮಂತ್ರಿ ಸದಾನಂದ ಗೌಡ ಅವರ ಜನಪರ ಕಾಳಜಿಯ ಬಗ್ಗೆ ಸಂಶಯ ಪಡುವಂತಾಗಿದೆ~ ಎಂದು ದೂರಿದರು.

`ಮಾಲ್ಗಳಿಂದಾಗಿ ನಗರದಲ್ಲಿ ಸಂಚಾರ ಒತ್ತಡ ಜಾಸ್ತಿಯಾಗಿದೆ ಹಾಗೂ ನಗರದಿಂದ 25-30 ಕಿ.ಮೀ. ದೂರದಲ್ಲಿ ಮಾಲ್ಗಳ ನಿರ್ಮಿಸಲು ಅನುಮತಿ ನೀಡಬೇಕು ಎಂದು ನಗರದ ಬಿಜೆಪಿ ಶಾಸಕರು ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದರು. ಈಗ ನಗರದೊಳಗೆ ಮಾಲ್ಗಳು ನಿರ್ಮಾಣವಾಗುತ್ತಿದ್ದರೂ ಅವರು ಚಕಾರ ಎತ್ತಿಲ್ಲ~ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

`ಬಿಡಿಎ ನಗರದ ಪ್ರತಿಷ್ಠಿತ ಬಡಾವಣೆಗಳ ಮೂಲೆ ನಿವೇಶನಗಳಲ್ಲಿ, ಸಿ.ಎ. ನಿವೇಶನಗಳಲ್ಲಿ ಮಾಲ್ಗಳನ್ನು ನಿರ್ಮಿಸುವ ಯೋಜನೆಗಳನ್ನು ರೂಪಿಸಿ ಕಾರ್ಯಾದೇಶ ನೀಡಿತ್ತು. ಮೂಲ ಸೌಕರ್ಯ ಇಲಾಖೆಯಿಂದ ಒಪ್ಪಿಗೆ ಸಿಗದ ಕಾರಣ ಈ ಯೋಜನೆ ರದ್ದಾಯಿತು. ಈ ಯೋಜನೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ~ ಎಂದು ಅವರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.