ಗುರುವಾರ , ಮೇ 13, 2021
17 °C

ಮೊಬೈಲ್ ಮಾತು: 3ಜಿ ಮತ್ತು 4ಜಿಯ ನಡುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂರನೇ ತಲೆಮಾರಿನ ತರಂಗಾಂತರ ಸೇವೆಯ(3ಜಿ) ಉತ್ತರಾಧಿಕಾರಿಯಾದ `4ಜಿ~ ಕಳೆದ ವಾರ ಕೋಲ್ಕತ್ತದಲ್ಲಿ ಚಾಲನೆ ಪಡೆದಿದೆ. `4ಜಿ~ (ಬ್ರಾಡ್‌ಬ್ಯಾಂಡ್ ವೈರ್‌ಲೆಸ್ ಅಕ್ಸೆಸ್- ಬಿಡಬ್ಲ್ಯುಎ) ಸೇವೆಯನ್ನು ಏರ್‌ಟೆಲ್ ದೇಶದಲ್ಲಿ ಮೊದಲಿಗನಾಗಿ ಆರಂಭಿಸಿದೆ.ಸಂಚಾರದಲ್ಲಿದ್ದಾಗ ಪ್ರತಿ ಸೆಕೆಂಡ್‌ಗೆ 100 ಮೆಗಾಬೈಟ್‌ಗಳಷ್ಟು (ಎಂಬಿ) ಮತ್ತು ಒಂದೆಡೆ ಸ್ಥಿರವಾಗಿದ್ದಾಗ ಪ್ರತಿ ಸೆಕೆಂಡ್‌ಗೆ 1 ಗಿಗಾಬೈಟ್‌ನಷ್ಟು (ಜಿಬಿ) ದತ್ತಾಂಶದ ಡೌನ್‌ಲೋಡ್ ವೇಗವನ್ನು `4ಜಿ~ ಹೊಂದಿದೆ. ಈ ಗರಿಷ್ಠ ವೇಗವನ್ನು ತಂತಿ ಸಹಿತ ಎಲ್‌ಎಎನ್( wired LAN) ಸಂಪರ್ಕದಲ್ಲಿ ಮಾತ್ರ ಪಡೆಯಬಹುದು. ಆದರೆ `4ಜಿ~ ಮೂಲಕ ಅಲ್ಟ್ರಾ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಅಕ್ಸೆಸ್ (ultra-broadband Internet access) ಸಾಧ್ಯವಾಗಲಿದೆ. ಅಂದರೆ ಲ್ಯಾಪ್‌ಟಾಪ್, ಗೇಮಿಂಗ್, ಮೊಬೈಲ್, ಸ್ಮಾರ್ಟ್‌ಫೋನ್, 3ಡಿ ಟೆಲಿವಿಷನ್... ಹೀಗೆ ವಿವಿಧ ಡಿವೈಸ್‌ಗಳಿಗೆ ಬೇರೆ ಬೇರೆ ಬಗೆಯಲ್ಲಿ ಇಂಟರ್‌ನೆಟ್ ಸಂಪರ್ಕ ಪಡೆಯಬಹುದು. ಜತೆಗೆ, ಹೈಡೆಫನಿಷನ್ ಮೊಬೈಲ್ ಟಿವಿ ವೀಕ್ಷಣೆ ಮತ್ತು ವಿಡಿಯೊ ಕಾನ್ಫರೆನ್ಸ್ ಕೂಡ 4ಜಿ ಮೂಲಕ ಸಾಧ್ಯವಾಗಲಿದೆ.ಸದ್ಯ `3ಜಿ~ ಪ್ರಪಂಚದ ಅತ್ಯುತ್ತಮ ದೂರಸಂವಹನ ಸೇವೆ ಎನಿಸಿಕೊಂಡಿದೆ. ಪ್ರತಿ ಸೆಕೆಂಡ್‌ಗೆ 14 ಎಂಬಿ ಡೌನ್‌ಲಿಂಕ್ ವೇಗವನ್ನೂ, 5.8 ಎಂಬಿ ಅಪ್‌ಲಿಂಕ್ ವೇಗವನ್ನೂ `3ಜಿ~ ಹೊಂದಿದೆ. ಹಾಗೆ ನೋಡಿದರೆ, ಪ್ರಪಂಚದಲ್ಲಿ ಮೊದಲ ಬಾರಿಗೆ 2001ರಲ್ಲಿ ವಾಣಿಜ್ಯ ಬಳಕೆಗಾಗಿ 3ಜಿ ಸೌಲಭ್ಯ ಜಾರಿಗೊಳಿಸಿದ್ದು, ಎನ್‌ಟಿಟಿ ಡೊಕೊಮೊ ಜಪಾನ್‌ನಲ್ಲಿ.ಭಾರತದಲ್ಲಿ ಸರ್ಕಾರಿ ಸ್ವಾಮ್ಯದ `ಎಂಟಿಎನ್‌ಎಲ್~ ಕಂಪನಿ ದೆಹಲಿಯಲ್ಲಿ 2008ರಲ್ಲಿ ಮೊದಲ ಬಾರಿಗೆ 3ಜಿ ಸೇವೆ  ಜಾರಿಗೊಳಿಸಿತು.ನಂತರ 2009ರಲ್ಲಿ ಬಿಎಸ್‌ಎನ್‌ಎಲ್, 2010ರಲ್ಲಿ ಟಾಟಾ ಡೊಕೊಮೊ ಮತ್ತು ರಿಲಯನ್ಸ್, 2011ರಲ್ಲಿ ವೊಡಾಫೋನ್ ಮತ್ತು ಭಾರ್ತಿ ಏರ್‌ಟೆಲ್ ಸೇವೆಯನ್ನು ಬಿಡುಗಡೆ ಮಾಡಿದವು.`3ಜಿ~ ಮತ್ತು `4ಜಿ~ ಸೇವೆಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ವೇಗ ಮತ್ತು ತಂತ್ರಜ್ಞಾನದ್ದು. `3ಜಿ~ ಸೇವೆಯು ಡಬ್ಲ್ಯು-ಸಿಡಿಎಂಎ, ಇವಿ-ಡಿಒ ಮತ್ತು ಎಚ್‌ಎಸ್‌ಪಿಎ (High Speed Packet Access)  ತಂತ್ರಜ್ಞಾನಗಳನ್ನು ಒಳಗೊಂಡಿದ್ದರೆ, `4ಜಿ~ಯು `ಎಲ್‌ಟಿಇ (Long Term Evolution)  ವಿಮ್ಯಾಕ್ಸ್, (Worldwide Interoperability for Microwave Access- WiMax)  ಮತ್ತು ಯುಎಂಬಿ (Ultra Mobile Broad­band ) ಸೇವೆಗಳನ್ನು ಒಳಗೊಂಡಿವೆ. ಸ್ವತಂತ್ರವಾದ ಸರ್ಕೀಟ್ ಸ್ವಿಚ್ಚಿಂಗ್ ನೆಟ್‌ವರ್ಕ್ ಸೌಲಭ್ಯ ಹೊಂದಿರುವುದು 4ಜಿಯ ಮತ್ತೊಂದು ವಿಶೇಷ.

ಭಾರತಕ್ಕೆ ಬರ್ಗ್ ಕೈಗಡಿಯಾರದ ಮೊಬೈಲ್!


ನೆದರ್‌ಲೆಂಡ್ ಮೂಲದ ಕೈಗಡಿಯಾರದ ಮೊಬೈಲ್ ಫೋನ್ ತಯಾರಿಕೆ ಕಂಪನಿ `ಬರ್ಗ್~ ಇತ್ತೀಚೆಗೆ ದೇಶದಲ್ಲಿ ಮೂರು ಹೊಸ ಮಳಿಗೆಗಳನ್ನು ಆರಂಭಿಸಿದೆ. ಎರಡು ಮಳಿಗೆ ದೆಹಲಿಯಲ್ಲಿ, ಮತ್ತೊಂದು ಗುಡಗಾಂವ್‌ನಲ್ಲಿ  ಆರಂಭಗೊಂಡಿವೆ.

 

ಈ ವರ್ಷಾಂತ್ಯಕ್ಕೆ ದೇಶದಾದ್ಯಂತ ಒಟ್ಟು 20 ಮಳಿಗೆಗಳನ್ನು ತೆರೆಯುವ ಯೋಜನೆಯನ್ನೂ ಕಂಪನಿ ಹೊಂದಿದೆ. ಕೈಗಡಿಯಾರ ಮೊಬೈಲ್‌ಗಳ 4 ಹೊಸ ಮಾದರಿಗಳನ್ನೂ ಬರ್ಗ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬರ್ಗ್ 9, 10, 11, 12 ಮತ್ತು 13 ಮಾದರಿಗಳು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ದರ 9 ಸಾವಿರದಿಂದ 24 ಸಾವಿರ ರೂಪಾಯಿವರೆಗೂ ಇದೆ.ಇತರೆ ಮೊಬೈಲ್‌ಗಳಲ್ಲಿರುವ ಎಲ್ಲ ಸೌಲಭ್ಯಗಳೂ ಕೈಗಡಿಯಾರ ಮೊಬೈಲ್‌ನಲ್ಲಿಯೂ ಇರಲಿವೆ. ಕರೆ ಮಾಡುವ ಸೌಲಭ್ಯ, ಇಂಟರ್‌ನೆಟ್, ಕ್ಯಾಮೆರಾ, ಫೈಲ್ ಮ್ಯಾನೇಜರ್, ಇಮೇಜ್ ವ್ಯೆವರ್, ಬ್ಲೂಟೂಥ್ ಸೇರಿದಂತೆ ಹಲವು ತಂತ್ರಜ್ಞಾನ ವಿಶೇಷತೆಗಳು ಬರ್ಗ್ ಕೈಗಡಿಯಾರದ ಮೊಬೈಲ್‌ನಲ್ಲಿವೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.