ಸೋಮವಾರ, ಮೇ 10, 2021
26 °C

ಮೋದಿ ನನಗೆ ಮಾದರಿ: ಡಿವಿಎಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್: `ಗುಜರಾತ್‌ನ ಅಭಿವೃದ್ಧಿಗೆ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಅವರು ತೆಗೆದುಕೊಂಡ ಕ್ರಮಗಳನ್ನು ವಿಶ್ವವೇ ಕೊಂಡಾಡುತ್ತಿದೆ. ನನಗೂ ಮೋದಿ ಅವರೇ ಮಾದರಿ~.- `ಶಾಂತಿ ಮತ್ತು ಕೋಮು ಸಾಮರಸ್ಯ~ದ ಸಂದೇಶ ಸಾರುವ ಉದ್ದೇಶದಿಂದ ಮೋದಿ ಆರಂಭಿಸಿರುವ ಸದ್ಭಾವನಾ ಉಪವಾಸದ ಎರಡನೆಯ ದಿನವಾದ ಭಾನುವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕರ್ನಾಟಕದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಹೇಳಿದ್ದು ಹೀಗೆ.`ರಾಜ್ಯದ ಆರು ಕೋಟಿ ಕನ್ನಡಿಗರು ಮೋದಿ ಅವರ ಉಪವಾಸದ ಪರವಾಗಿದ್ದಾರೆ. ಅವರ ಪರವಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಮೋದಿ ಅವರು ಉಪವಾಸ ಕಾರ್ಯಕ್ರಮದ ಮೂಲಕ ನವಭಾರತ ಕಟ್ಟುವ ಪ್ರಯತ್ನ ನಡೆಸಿದ್ದಾರೆ~ ಎಂದು ಪ್ರಶಂಸಿಸಿದರು.ಸಾಮರಸ್ಯ ಮೂಡಿಸುವ ಉದ್ದೇಶದಿಂದ ರಾಜಕೀಯೇತರವಾದ ಇಂಥ ಪ್ರಯತ್ನಗಳು ದೇಶದ ಮೂಲೆ ಮೂಲೆಗಳಲ್ಲಿ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.ಉನ್ನತ ಧ್ಯೇಯವೊಂದಕ್ಕೆ ಬದ್ಧತೆ ವ್ಯಕ್ತಪಡಿಸಲು ಉಪವಾಸ ಉತ್ತಮ ಮಾರ್ಗ. ಮೋದಿ ಅವರು ದೇಶದ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲೂ ಪರಿಗಣಿತವಾಗಿರುವುದು ಸಂತಸದ ವಿಷಯ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.