ಬೆಂಗಳೂರು: ‘ನಮ್ಮಿಬ್ಬರದು ಐದು ವರ್ಷಗಳ ಪ್ರೀತಿ. ನಾನೇ ಮೊದಲು ಮೊಬೈಲ್ನಲ್ಲಿ ಪ್ರಪೋಸ್ ಮಾಡಿದ್ದೆ. ಏನಿದು ಇಷ್ಟು ನೀರಸವಾಗಿ ಪ್ರಪೋಸ್ ಮಾಡುತ್ತಿದ್ದೀಯ ಎಂದು ರಾಧಿಕಾ ಪ್ರತಿಕ್ರಿಯಿಸಿದ್ದಳು’ ಎಂದು ನಟ ಯಶ್ ತಮ್ಮ ಪ್ರೀತಿಯ ಮೊದಲ ದಿನಗಳನ್ನು ತೆರೆದಿಟ್ಟರು.

ವರಮಹಾಲಕ್ಷ್ಮೀ ಹಬ್ಬದಂದು ಗೋವಾದಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡ ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ನಿಶ್ಚಿತಾರ್ಥ ಮತ್ತು ಮದುವೆಯ ಕುರಿತು ಮಾಹಿತಿ ಹಂಚಿಕೊಂಡರು. ‘ಪ್ರಪೋಸ್ ಮಾಡಿದ್ದು ನೀರಸವಾಗಿತ್ತು ಎಂಬ ಆರೋಪವನ್ನು ನಿವಾರಿಸಲೆಂದೇ ಮಿಸ್ಟರ್ ಅಂಡ್ ಮಿಸೆಸ್ ರಾಮಚಾರಿ ಚಿತ್ರದಲ್ಲಿ ಪ್ರೇಮ ನಿವೇದನೆಯ ದೃಶ್ಯವನ್ನೇ ಸೃಷ್ಟಿಸಲಾಗಿತ್ತು. ಅದು ನಮ್ಮ ಪ್ರೀತಿಯ ಚಿಕ್ಕ ಸುಳಿವಾಗಿತ್ತು’ ಎಂದು ಯಶ್ ಹೇಳಿದರು.

‘ಯಶ್ ನನ್ನನ್ನು ಪ್ರೀತಿಸುತ್ತಿರುವುದಾಗಿ ಹೇಳಿದಾಗ ತಕ್ಷಣಕ್ಕೆ ಒಪ್ಪಿಕೊಂಡಿಲ್ಲ. ಸಿನಿಮಾ ಮಾಡುವಾಗಲೂ ಸಾಕಷ್ಟು ಯೋಚಿಸಿ ಒಪ್ಪಿಕೊಳ್ಳಯತ್ತೇನೆ. ಅಂಥದ್ದರಲ್ಲಿ ಇದು ಜೀವನದ ಪ್ರಶ್ನೆ’ ಎಂದು ರಾಧಿಕಾ ಹೇಳಿದರು.

‘ನಿಶ್ಚಿತಾರ್ಥ ಚಿಕ್ಕ ಸಮಾರಂಭ ಆಗಬೇಕು ಎಂದುಕೊಂಡು ಎಲ್ಲರನ್ನೂ ಕರೆದಿರಲಿಲ್ಲ. ಆದರೆ ಮದುವೆ ಮಾತ್ರ ಎಲ್ಲರ ಸಮ್ಮುಖದಲ್ಲೇ ಆಗುತ್ತೇವೆ. ದಿನಾಂಕ ಇನ್ನೂ ನಿಗದಿ ಆಗಿಲ್ಲ. ಡಿಸೆಂಬರ್ ಅಥವಾ ಜನವರಿಯಲ್ಲಿ ಬೆಂಗಳೂರಿನಲ್ಲೇ ಸಾಂಪ್ರದಾಯಿಕವಾಗಿ ಮದುವೆ ನಡೆಯಲಿದೆ’ ಎಂದರು ರಾಧಿಕಾ.

ವೃತ್ತಿ ಬದುಕಿಗೆ ತೊಂದರೆಯಿಲ್ಲ: ‘ಮದುವೆಯ ನಂತರವೂ ಸಿನಿಮಾಗಳಲ್ಲಿ ನಟಿಸುತ್ತೇನೆ. ಮದುವೆ ಆದ ಹೆಣ್ಣು ಮನೆಯಲ್ಲೇ ಇರಬೇಕು ಎಂಬ ಕಾಲದಲ್ಲಿ ನಾವಿಲ್ಲ’ ಎಂದು ರಾಧಿಕಾ ತಿಳಿಸಿದರು. ಅದಕ್ಕೆ ಬೆಂಬಲವಾಗಿ ಮಾತನಾಡಿದ ಯಶ್, ‘ರಾಧಿಕಾ ತನ್ನ ಪ್ರತಿಭೆಯಿಂದಲೇ ಗುರ್ತಿಸಿಕೊಂಡವರು. ನಮ್ಮಿಬ್ಬರಿಗೂ ಈ ವೃತ್ತಿ ಇಷ್ಟ. ಹಾಗಾಗಿ ಮದುವೆ ನಂತರವೂ ಅವಳಿಗೆ ಮನಸಿದ್ದಷ್ಟು ಕಾಲವೂ ಈ ವೃತ್ತಿಯಲ್ಲಿ ಮುಂದುವರಿಯುತ್ತಾಳೆ’ ಎಂದರು.

* ‘ನಾವಿಬ್ಬರೂ ಸಾರ್ವಜನಿಕ ಬದುಕಿನಲ್ಲಿದ್ದೇವೆ. ನಮ್ಮನ್ನು ಸಾವಿರಾರು ಜನ ನೋಡುತ್ತಿರುತ್ತಾರೆ, ಅನುಕರಿಸುತ್ತಾರೆ. ಹಾಗಾಗಿ ನಾವು ಜವಾಬ್ದಾರಿಯಿಂದ ನಡೆದುಕೊಳ್ಳುವ ಹೊಣೆ ನಮ್ಮ ಮೇಲಿತ್ತು. ಅದೇ ಕಾರಣಕ್ಕೆ ಈವರೆಗೆ ಎಲ್ಲಿಯೂ ಪ್ರೀತಿಯ ವಿಚಾರವಾಗಿ ಮಾತನಾಡಿರಲಿಲ್ಲ, ಸಾರ್ವಜನಿಕವಾಗಿ ಪ್ರೇಮಿಗಳಂತೆ ಕಾಣಿಸಿಕೊಂಡಿರಲಿಲ್ಲ’ ಎಂದರು ಯಶ್.

ಟೀಕೆಗೆ ತಲೆ ಕೆಡಿಸಿಕೊಂಡಿಲ್ಲ
ಮಹಾದಾಯಿ ನೀರು ಹಂಚಿಕೆ ವಿಚಾರದಲ್ಲಿ ಉತ್ತರ ಕರ್ನಾಟಕದ ಜನತೆಯನ್ನು ಬೆಂಬಲಿಸುವ ಯಶ್ ಗೋವಾಕ್ಕೆ ಹೋಗಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದ ಟೀಕೆಗೆ ಪ್ರತಿಕ್ರಿಯಿಸಿದ ಯಶ್, ‘ನಮ್ಮ ನಾಡಿನ ಭಾವನೆಯ ವಿಚಾರ ಬಂದಾಗ ನಾನು ಮುಂದೆ ನಿಂತು ನಮ್ಮ ಜನರನ್ನು ಬೆಂಬಲಿಸುತ್ತೇನೆ. ನಿಶ್ಚಿತಾರ್ಥ ಗೋವಾದಲ್ಲಿ ಆಗಬೇಕು ಎಂಬುದು ರಾಧಿಕಾ ಮನೆಯವರ ಆಸೆಯಾಗಿತ್ತು. ಆದ್ದರಿಂದ ಇದಕ್ಕೆ ಬೇರೆ ಅರ್ಥ ಕಲ್ಪಿಸುವದು ಬೇಡ. ನಾವು ಭಾರತೀಯರು. ನಾವೇನು ಪಾಕಿಸ್ತಾನಕ್ಕೆ ಹೋಗಿ ನಿಶ್ಚಿತಾರ್ಥ ಮಾಡಿಕೊಂಡಿಲ್ಲ. ಹಾಗಾಗಿ ನಾನು ಟೀಕೆಗೆ ತಲೆ ಕೆಡಿಸಿಕೊಂಡಿಲ್ಲ’ ಎಂದರು.

‘ನನ್ನ ತಾಯಿಯ ತವರು ಗೋವಾ. ನನ್ನ ಬಂಧು ಬಳಗ ಇರುವುದೂ ಅಲ್ಲಿಯೇ. ಅವರೆಲ್ಲ ಪಾಲ್ಗೊಳ್ಳಬೇಕು ಎಂದು ನಾವು ಅಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದು’ ಎಂದು ರಾಧಿಕಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.