ಮೌಲ್ಯಮಾಪನ ಇಂದಿನಿಂದ

7

ಮೌಲ್ಯಮಾಪನ ಇಂದಿನಿಂದ

Published:
Updated:

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ಈಚೆಗೆ ನಡೆಸಿದ ಬಿ.ಕಾಂ, ಬಿ.ಬಿ.ಎಂ, ಬಿ.ಎಚ್.ಎಂ ಹಾಗೂ ಬಿಸಿಎ ಕೋರ್ಸ್‌ನ 1, 3 ಮತ್ತು 5ನೇ ಸೆಮಿಸ್ಟರ್ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಇದೇ 28ರಿಂದ ಆರಂಭವಾಗಲಿದೆ.ಸಂಬಂಧಪಟ್ಟ ವಿಷಯಗಳ ಅರ್ಹ ಉಪನ್ಯಾಸಕರನ್ನು ಮೌಲ್ಯಮಾಪನ ಕಾರ್ಯಕ್ಕೆ ಆಯಾ ಕಾಲೇಜುಗಳ ಪ್ರಾಂಶುಪಾಲರು ಕಳುಹಿಸಿಕೊಡಬೇಕು. ಒಟ್ಟು 2.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲು ಕೂಡಲೇ ಉಪನ್ಯಾಸಕರನ್ನು ತಪ್ಪದೇ ಕಳುಹಿಸಿಕೊಡಬೇಕು. ಮೌಲ್ಯಮಾಪನ ಕರ್ತವ್ಯದ ಕೊನೆಯ ದಿನವೇ ಭತ್ಯೆಗಳನ್ನು ನೀಡಲಾಗುವುದು ಎಂದು ವಿ.ವಿ. ಕುಲಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry