ಸೋಮವಾರ, ಮೇ 23, 2022
28 °C

ಮ್ಯಾನ್ಮಾರ್ ಭೂಕಂಪ: 60 ಕ್ಕೂ ಅಧಿಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಂಗೂನ್/ ಬಾಂಕಾಕ್, ( ಎಎಫ್ ಪಿ/ಡಿಪಿಎ): ಯಂಗೂನ್ ನಿಂದ ಸುಮಾರು 600 ಕಿ.ಮೀ ದೂರದಲ್ಲಿ ಮ್ಯಾನ್ಮಾರ್ ನ ನೈರುತ್ಯ ಪ್ರದೇಶದಲ್ಲಿ ಗುರುವಾರ ರಾತ್ರಿ 8.25ರ ಸುಮಾರು ಭೂಕಂಪ ಸಂಭವಿಸಿದ್ದು 60ಕ್ಕೂ ಅಧಿಕ ಮಂದಿ ಸತ್ತಿದ್ದಾರೆ. ಜೊತೆಗೆ ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಭೂಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 6.8 ರಷ್ಟಿತ್ತು. ಮ್ಯಾನ್ಮಾರ್ ನಿಂದ 800 ಕಿ.ಮೀ ದೂರದ ಬಾಂಕಾಕ್ ನಲ್ಲೂ ಭೂಕಂಪನದ ಅನುಭವವಾಗಿದೆ.

ಮ್ಯಾನ್ಮಾರ್ ಮತ್ತು ಥೈಲೆಂಡ್ ಗಡಿಯಲ್ಲಿನ ಶಾನ್ ರಾಜ್ಯದ ತಟಿಲೇಕ್ ಪಟ್ಟಣದ ಸನಿಹದ ತಾರ್ಲೆ ಗ್ರಾಮದಲ್ಲಿ ನೂರು ಮನೆಗಳು ಜಖಂಗೊಂಡಿದ್ದು 50ಕ್ಕೂ ಅಧಿಕ ಜನ ಸತ್ತಿದ್ದಾರೆ ಎಂದು ಸರ್ಕಾರಿ ಮೂಲಗಳು ಶುಕ್ರವಾರ ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.