ಗುರುವಾರ , ಜೂಲೈ 9, 2020
28 °C

ಮ್ಯಾರಥಾನ್ ಓಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮ್ಯಾರಥಾನ್ ಓಟ

ಮೈಸೂರು: ಬೆಳಗಿನ ಜಾವ ಶಿಸ್ತಿನ ಸಿಪಾಯಿಗಳಂತೆ ಆಗಮಿಸಿದ್ದ ವಿದ್ಯಾರ್ಥಿಗಳು, ಹಿರಿಯ ನಾಗರಿಕರು.. ಎಲ್ಲರಲ್ಲೂ ಗುರಿ ಮುಟ್ಟುವ ತವಕ.. ನಾ ಮೊದಲು, ನೀ ಮೊದಲು ಎಂದು ಮಹಿಳೆಯರೂ ಹೆಜ್ಜೆ ಹಾಕಿದರು.. ಅಂತಿಮವಾಗಿ ಗೆಲುವಿನ ಸಂಭ್ರಮದಲ್ಲಿ ಎಲ್ಲರೂ ಭಾಗಿಯಾದರು..ಇವು ಎನ್‌ಐಇ ಎಂಜಿನಿಯರಿಂಗ್ ಕಾಲೇಜು                ಆವರಣದಲ್ಲಿ ಕಂಡು ಬಂದ ದೃಶ್ಯ. ‘ಟೆಕ್ನಿಕ್ಸ್-2011’ ಅಂತರ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮದ  ಅಂಗವಾಗಿ ಶನಿವಾರ ಏರ್ಪಡಿಸಿದ್ದ ಮ್ಯಾರಥಾನ್   ಓಟದಲ್ಲಿ ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು   ಸೇರಿದಂತೆ ಸುಮಾರು  300ಕ್ಕೂ ಹೆಚ್ಚು  ಜನ    ಭಾಗವಹಿಸಿದ್ದರು.‘ಭ್ರಷ್ಟಾಚಾರ ತಡೆಗೆ ಮ್ಯಾರಥಾನ್’ ಎಂಬ ಪರಿಕಲ್ಪನೆ ಅಡಿ ಎನ್‌ಐಇ ವಿದ್ಯಾರ್ಥಿಗಳು ಮ್ಯಾರಥಾನ್ ಓಟವನ್ನು ಆಯೋಜಿಸಿದ್ದರು. ಮಾನಂದವಾಡಿ ರಸ್ತೆಯ ಕಾಲೇಜು ಕ್ಯಾಂಪಸ್‌ನಿಂದ ಆರಂಭವಾದ ಮ್ಯಾರಥಾನ್ ಓಟ ಇಸ್ಕಾನ್ ರಸ್ತೆ, ವಿಜಯ ಬ್ಯಾಂಕ್ ವೃತ್ತ, ವಿಶ್ವಮಾನವ ಜೋಡಿ ರಸ್ತೆ, ಕುಕ್ಕರಹಳ್ಳಿ ಕೆರೆ, ಸರಸ್ವತಿಪುರಂ, ಏಕಲವ್ಯ ವೃತ್ತ, ಎಂ.ಜಿ ರಸ್ತೆ ಮಾರ್ಗವಾಗಿ ಕಾಲೇಜು ಆವರಣವನ್ನು ತಲುಪಿತು.ಪ್ರಥಮ ಬಹುಮಾನ ಮೂರು ಸಾವಿರ, ದ್ವಿತೀಯ ಬಹುಮಾನ ಎರಡು ಸಾವಿರ ಹಾಗೂ ತೃತೀಯ ಬಹುಮಾನ ಒಂದು ಸಾವಿರ ರೂಪಾಯಿಗಳನ್ನು ವಿಜೇತರಿಗೆ ನೀಡಲಾಯಿತು.ಮ್ಯಾರಥಾನ್ ವಿಜೇತರು

ಪುರುಷರ ವಿಭಾಗ:
ಎಂ.ಪುನೀತ್ (ಪ್ರಥಮ), ಎ.ಎಸ್.ಹರೀಶ್ (ದ್ವಿತೀಯ), ಸತೀಶ್‌ಕುಮಾರ್ (ತೃತೀಯ), ಪೊನ್ನಪ್ಪ (4ನೇ ಸ್ಥಾನ), ಶ್ರೀಕಂಠ (5ನೇ ಸ್ಥಾನ).

ಮಹಿಳೆಯರ ವಿಭಾಗ: ಸಿ.ಸ್ಮಿತಾ (ಪ್ರಥಮ), ಕೆ.ಆರ್.ಮೇಘನಾ (ದ್ವಿತೀಯ), ಪ್ರತಿಭಾ.ಬಿ.ನಾಯ್ಕಿ  (ತೃತೀಯ).

ಹಿರಿಯ ನಾಗರಿಕ ವಿಭಾಗ:ಪುರುಷರ ವಿಭಾಗ: ಎಂ.ಯೋಗೇಂದ್ರ (ಪ್ರಥಮ), ಎಚ್.ಆರ್.ರಾಮಸ್ವಾಮಿ (ದ್ವಿತೀಯ), ಕೆ.ಮಹಾದೇವಸ್ವಾಮಿ (ತೃತೀಯ).ಮಹಿಳೆಯರ ವಿಭಾಗ: ಪಿ.ಸಿ.ಪಾರ್ವತಿ (ಪ್ರಥಮ), ವಿ.ಕೆ.ಅನ್ನಪೂರ್ಣ (ದ್ವಿತೀಯ).ಶೈಕ್ಷಣಿಕ ಜಾಗೃತಿಗೆ ಮ್ಯಾರಥಾನ್

ಮೈಸೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ (ದಕ್ಷಿಣ ವಲಯ) ವತಿಯಿಂದ ಲಕ್ಷ್ಮೀಪುರಂನಲ್ಲಿರುವ ಸರ್ಕಾರಿ ಹಿರಿಯಪ್ರಾಥಮಿಕ ಶಾಲಾ ಆವರಣದಿಂದ ಶನಿವಾರ            ‘ಮ್ಯಾರಥಾನ್ ಓಟ’ ಹಮ್ಮಿಕೊಳ್ಳಲಾಗಿತ್ತು.ಸರ್ವ ಶಿಕ್ಷಣ ಅಭಿಯಾನ ಯೋಜನೆಯ ವಿವಿಧ ಕಾರ್ಯಕ್ರಮಗಳ ಕುರಿತು ವಿದ್ಯಾರ್ಥಿಗಳು ‘ಮ್ಯಾರಥಾನ್ ಓಟ’ದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ

ಮೂಡಿಸಿದರು. ಮ್ಯಾರಥಾನ್ ಓಟವು ಲಕ್ಷ್ಮೀಪುರಂ ಶಾಲಾ ಆವರಣದಿಂದ ಆರಂಭವಾದ ಮ್ಯಾರಥಾನ್ ನಂಜುಮಳಿಗೆ ವೃತ್ತ, 101 ಗಣಪತಿ ವೃತ್ತ, ಅಗ್ರಹಾರ ವೃತ್ತ, ಎಂ.ಜಿ.ರಸ್ತೆ ಹಾಗೂ ಆರ್.ಟಿ.ಒ.ವೃತ್ತದ ಮೂಲಕ ಸಾಗಿತು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ (ದಕ್ಷಿಣ ವಲಯ) ವ್ಯಾಪ್ತಿಯ ವಿವಿಧ ಪ್ರೌಢಶಾಲೆಗಳ ಸುಮಾರು 200ಕ್ಕೂ ಹೆಚ್ಚು ಮಕ್ಕಳು ಓಟದಲ್ಲಿ ಪಾಲ್ಗೊಂಡಿದ್ದರು.ಮ್ಯಾರಥಾನ್ ಓಟಕ್ಕೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ.ಶಿವರಾಂ ಚಾಲನೆ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗೇಂದ್ರಕುಮಾರ್, ಬಿಇಓ ಆರ್.ರಘುನಂದನ್, ಬಿಆರ್‌ಸಿ ರಾಮಾರಾಧ್ಯ, ಐಆರ್‌ಟಿಸಿ ಪ್ರಭುಸ್ವಾಮಿ ಹಾಜರಿದ್ದರು.ವಿದ್ಯಾರ್ಥಿಗಳ ವಿಭಾಗ: ಸುಮನ್ ವೈದ್ಯನಾಥನ್  (ಪ್ರಥಮ), ಕೆ.ಪವನ್ (ದ್ವಿತೀಯ), ಎಸ್.ಎಸ್.ಕುಮಾರ್ (ತೃತೀಯ), ಅನುಬು (4ನೇ ಸ್ಥಾನ), ನಿತೀಶ್‌ಕುಮಾರ್ (5ನೇ ಸ್ಥಾನ).ವಿದ್ಯಾರ್ಥಿನಿಯರ ವಿಭಾಗ: ಎಂ.ಎಂ.ಅಪೂರ್ವ (ಪ್ರಥಮ), ಎಂ.ಎಲ್.ಮೋನಿಷ್ (ದ್ವಿತೀಯ), ಎಸ್.ಮೀನಾಕ್ಷಿ (ತೃತೀಯ), ಜೆ.ಬಿಂದುಶ್ರೀ (4ನೇ ಸ್ಥಾನ), ಆರ್.ಸಂಗೀತಾ (5ನೇ ಸ್ಥಾನ).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.