ಹಟ್ಟಿ ಚಿನ್ನದ ಗಣಿ: ಆನ್ವರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಂದಲಿ ಹೊಸೂರು ಗ್ರಾಮದ ಬಳಿಯ ಮಲ್ಲಾಪುರ ಕೆರೆಯ ಹೂಳೆತ್ತುವ ಕಾಮಗಾರಿಯಲ್ಲಿ ಯಂತ್ರಗಳನ್ನು ಬಳಸಲಾಗಿದೆ ಹಾಗೂ ಅವ್ಯವಹಾರ ನಡೆದಿದ್ದು ತಕ್ಷಣ ತನಿಖೆ ನಡೆಸಬೇಕೆಂದು ಕರ್ನಾಟಕ ರೈತ ಸಂಘದ ತಾಲ್ಲೂಕು ಸಮಿತಿ ಒತ್ತಾಯಿಸಿದೆ.

ಉದ್ಯೋಗ ಖಾತರಿ, ಬರ ಸಂಬಂಧದಲ್ಲಿ ಗ್ರಾಮ ಸಭೆಗಳನ್ನು ನಡೆಸಿ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆದರೆ ಆನ್ವರಿ ಗ್ರಾಮ ಪಂಚಾಯಿತಿ ಸರ್ಕಾರದ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಹೋಟೆಲ್ಗಳಲ್ಲಿ ಕುಳಿತು ಕ್ರಿಯಾಯೋಜನೆಗಳನ್ನು ರಚಿಸಲಾಗಿದೆ.

ಕ್ರಿಯಾಯೋಜನೆಯ ಪ್ರತಿ ಕೇಳಿದರೆ ಗ್ರಾಮ ಪಂಚಾಯಿತಿಯಲ್ಲಿ ಇಲ್ಲ. ತಾಲ್ಲೂಕು ಪಂಚಾಯಿತಿಯಲ್ಲಿಯೂ ಇಲ್ಲ. ಗ್ರಾಮದ ಬಡ ಜನರಿಗೆ ಕೂಲಿ ನೀಡದೆ ಯಂತ್ರಗಳನ್ನು ಬಳಸಿ ಕಾಮಗಾರಿಗಳನ್ನು ರಾತ್ರೋರಾತ್ರಿ ಪೂರ್ಣ ಗೊಳಿಸಲಾಗುತ್ತಿದೆ. ಬಹಳಷ್ಟು ಕಾಮಗಾರಿಗಳನ್ನು ಗುತ್ತಿಗೆ ನೀಡಲಾಗಿದೆ. ಉದ್ಯೋಗ ಖಾತರಿ ಹೆಸರಿನಲ್ಲಿ ಕೆಲವೇ ಕುಟುಂಬದ ಸದಸ್ಯರ ಹೆಸರಿನಲ್ಲಿ ಲಕ್ಷಾಂತರ ಹಣ ಗುಳುಂ ಮಾಡಲಾಗಿದೆ.

ನಿಜವಾದ ಕೃಷಿ ಕೂಲಿಕಾರರಿಗೆ ಕೆಲಸ ನೀಡದೆ ಮೊಸ ಮಾಡಲಾಗುತ್ತಿದೆ. ಮಾರ್ಚ್ ತಿಂಗಳ ಒಳಗೆ ಅನುದಾನ ಖರ್ಚುಮಾಡಲು ತರಾತುರಿಯಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಣ ಎತ್ತಿಕೊಳ್ಳುವ ಹುನ್ನಾರ ನಡೆಸಲಾಗುತ್ತಿದೆ ಎಂದು ಆಪಾದಿಸಲಾಗಿದೆ.

ಮಲ್ಲಾಪುರ ಕೆರೆಯಲ್ಲಿ ಬರಗಾಲ ಕಾಮಗಾರಿಯಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳಲ್ಲಿ ಕೂಲಿಕಾರರಿಗೆ ಕೆಲಸ ಕೊಡುವುದು ಬಿಟ್ಟು ಗ್ರಾಮ ಪಂಚಾಯಿತಿ ಆಡಳಿತ ಕೆಲವು ಜನರಿಗೆ ಗುತ್ತಿಗೆ ನೀಡಿ ಯಂತ್ರಗಳನ್ನು ಬಳಸಿ 20 ಲಕ್ಷ ರೂಪಾಯಿಗಳ ಕೆಲಸ ಮಾಡಿಸಲಾಗಿದೆ. ಈ ಕಾಮಗಾರಿಗಳ ಪರಿಶೀಲನೆ ಆಗಬೇಕು. ತಪ್ಪು ಮಾಹಿತಿ ನೀಡಿ ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡವರ ವಿರುದ್ಧ ಕ್ರಮ ಜರುಗಿಸಬೇಕೆಂದು ಮುಖಂಡರಾದ ಬಸವರಾಜ, ಕಾರ್ಮಿಕ ಬಾಬು ಭೂಪುರ, ಜಿಲ್ಲಾ ಉಪಾಧ್ಯಕ್ಷ ಶೇಖರಯ್ಯ, ಯಮನಪ್ಪ ಸಾಲಿ, ತಿಪ್ಪರಾಜ ಎ. ಗುಡಸಾಬ್, ಹನುಮಯ್ಯ ಗೆಜ್ಜಲಗಟ್ಟಾ, ಶಾಂತಪ್ಪ ಹರಿಜನ ಹಾಗೂ ಮೌನೇಶ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.