ಗುರುವಾರ , ಮೇ 6, 2021
24 °C

ಯಗಚಿ, ಹೇಮಾವತಿಗೆ ಸಚಿವ ಬಾಗಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ:  ಜಿಲ್ಲೆಯ ಎರಡು ಪ್ರಮುಖ ಜಲಾಶಯಗಳಿಗೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಸೋಮವಾರ ಬಾಗಿನ ಅರ್ಪಿಸಿದರು.  ಮೂರು ಜಿಲ್ಲೆಗಳ ಸುಮಾರು 6.55ಲಕ್ಷ ಎಕರೆ ಕೃಷಿ ಭೂಮಿಗೆ ನೀರು ಒದಗಿಸುವ ಗೊರೂರಿನ ಹೇಮಾವತಿ ಜಲಾಶಯ ಕಳೆದ ಶನಿವಾರ ಭರ್ತಿಯಾಗಿದ್ದು, ಒಳಹರಿವು ಉತ್ತಮವಾಗಿರುವುದರಿಂದ ಕೆಲವು ದಿನಗಳಿಂದ ನಾಲ್ಕು ಗೇಟ್‌ಗಳನ್ನು ತೆರೆದು ನೀರು ಹೊರಗೆ ಬಿಡಲಾಗುತ್ತಿದೆ.

 

ಇದಕ್ಕೂ ಕೆಲವು ದಿನಗಳ ಮೊದಲೇ ಬೇಲೂರಿನ ಯಗಚಿ ಜಲಾಶಯವೂ ಭರ್ತಿಯಾಗಿತ್ತು. ಸೋಮವಾರ ಈ ಎರಡೂ ಜಲಾಶಯಗಳಿಗೆ ಬಾಗಿನ ಅರ್ಪಿಸಲಾಯಿತು.ಬೆಳಿಗ್ಗೆ  ಹಾಸನಕ್ಕೆ ಬಂದ ಸೋಮಣ್ಣ, ಕಲಾಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು 12.30ರ ಸುಮಾರಿಗೆ ಗೊರೂರಿಗೆ ಆಗಮಿಸಿದರು.ಇಲ್ಲಿ ಪೂರ್ಣ ಕುಂಭಗಳು, ವೀರಗಾಸೆ ಮತ್ತಿತರ ಜಾನಪದ ಕುಣಿತಗಳ ಮೂಲಕ ಅವರನ್ನು ಸ್ವಾಗತಿಸಲಾಯಿತು. ಬಳಿಕ ಮೆರವಣಿಗೆಯಲ್ಲಿಯೇ ಕ್ರೆಸ್ಟ್ ಗೇಟ್ ವರೆಗೆ ಬಂದ ಸೋಮಣ್ಣ ಅಲ್ಲಿ ಬಾಗಿನ ಅರ್ಪಿಸಿ, ಕ್ರೆಸ್ಟ್ ಗೇಟ್‌ನ ಬಾಗಿಲು ತೆರೆದರು.

 

ಒಂದರ ನಂತರ ಒಂದರಂತೆ ಆರೂ ಗೇಟ್‌ಗಳನ್ನು ತೆರೆಯಲಾಯಿತು. ಜಲಾಶಯದ ಸುತ್ತ ನೆರೆದಿದ್ದ ನೂರಾರು ಜನರು ಈ ದೃಶ್ಯವನ್ನು ವೀಕ್ಷಿಸಿದರು.ಗೊರೂರಿನಿಂದ ನೇರವಾಗಿ ಬೇಲೂರಿಗೆ ತೆರಳಿ ಯಗಚಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.ಬಾಗಿನ ಅರ್ಪಿಸುವುದಕ್ಕೂ ಮೊದಲು ಪತ್ರಕರ್ತರೊಡನೆ ಮಾತನಾಡಿದ ಸೋಮಣ್ಣ, ~ದೇವರ ಕೃಪೆಯಿಂದ ಈ ಬಾರಿ ರಾಜ್ಯದ ಎಲ್ಲ ಜಲಾಶಯಗಳೂ ಭರ್ತಿಯಾಗಿವೆ. ಇದು ಸರ್ಕಾರಕ್ಕೆ ಶುಭ ಸೂಚನೆ. ಮಳೆ-ಬೆಳೆ ಚೆನ್ನಾಗಿ ಆಗಿರುವುದರಿಂದ ರೈತರೂ ಸಂತುಷ್ಟರಾಗಿದ್ದಾರೆ~ ಎಂದರು.ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ,ಡಿ. ಚಂದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.