ಬುಧವಾರ, ಜೂನ್ 16, 2021
22 °C

ಯಡಹಳ್ಳಿ: ಸಡಗರ ಸಿದ್ದೇಶ್ವರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬನ್ನೂರು: ಪಟ್ಟಣದ ಯಡಹಳ್ಳಿ ಗ್ರಾಮದಲ್ಲಿನ ಇತಿಹಾಸ ಪ್ರಸಿದ್ಧ ಸಿದ್ದೇಶ್ವರ ದೇವರ ರಥೋತ್ಸವವು ಗುರುವಾರ ವೈಭವದಿಂದ ನಡೆಯಿತು.ರಥೋತ್ಸವದ ಹಿನ್ನೆಲೆಯಲ್ಲಿ ವಿವಿಧ ಬಗೆಯ ಪತಾಕೆಗಳು, ಬಣ್ಣ ಬಣ್ಣದ ಬಾವುಟಗಳಿಂದ ಕಂಗೊಳಿಸುತ್ತಿದ್ದ ರಥದ ಮುಂಭಾಗ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಜಯಕಾರದೊಂದಿಗೆ ದೇವಾಲಯದಿಂದ ದೇವರಮೂರ್ತಿಯನ್ನು ಹೊರತಂದು     ದೇವಾಲಯದ ಸುತ್ತಲೂ ಪ್ರದಕ್ಷಿಣೆ ಮಾಡಿ ರಥದ ಮೇಲ್ಭಾಗ ಪ್ರತಿಷ್ಠಾಪಿಸಿ, ರಥೋತ್ಸವಕ್ಕೆ ಚಾಲನೆ ನೀಡುವ  ಮೂಲಕ ರಥವನ್ನು ದೇವಾಲಯದ ಸುತ್ತು ಒಂದು ಸುತ್ತು ಎಳೆದು ನಂತರ ಸ್ವಸ್ಥಾನಕ್ಕೆ ತರಲಾಯಿತು.ನವ ವಿವಾಹಿತರು, ವಿವಿಧ ಹರಕೆ ಹೊತ್ತವರು ಹಣ್ಣು ಜವನವನ್ನು ಎಸೆದು ತಮ್ಮ ಹರಕೆಯನ್ನು ತೀರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.