ಶನಿವಾರ, ಮೇ 21, 2022
23 °C

ಯಾಕೀ ಪರಭಾಷಾ ಮೋಹ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರಿನಲ್ಲಿ ವಿಶ್ವ ವಿಖ್ಯಾತ ದಸರಾ ಹಬ್ಬದ ಸಂಭ್ರಮ, ಇಡಿ ವಿಶ್ವದ ಕಣ್ಣಿಗೆ ನಾಡಿನ ಸಮೃದ್ಧ ಹಾಗು ವೈವಿಧ್ಯ  ಸಂಸ್ಕೃತಿಯ ಅನಾವರಣ. ಆದರೆ ಇದರ ಭರದಲ್ಲಿ ನಮ್ಮ ವ್ಯವಸ್ಥಾಪಕರು ಹಾಗು ಮೈಸೂರಿನ ಹೆಮ್ಮೆಯ ಕನ್ನಡಿಗರು! ಮರೆತಿರುವುದು ತಮ್ಮ ಭಾಷೆಯನ್ನ, ಅದಕ್ಕೆ ಒಂದು ಚಿಕ್ಕ ಉದಾಹರಣೆ ಇಲ್ಲಿದೆ. ದಸರಾ ವಿಶೇಷ ಸಂದರ್ಭದಲ್ಲಿ ಮೈಸೂರಿನ ಹಲವು ಹೋಟೆಲುಗಳಲ್ಲಿ ಕೇವಲ 30 ರೂ. ಗಳಿಗೆ ದೊರೆಯುವ ಮೈಸೂರಿನ ಊಟದ ಹೆಸರು `ದಸರಾ ಥಾಲಿ~.ನಮ್ಮ ಭಾಷೆಯು ಕೂಡ ನಮ್ಮ ಸಂಸ್ಕೃತಿಯ ಒಂದು ಭಾಗವಲ್ಲವೆ? ಜಗತ್ತಿನ ವಿವಿಧ ಕಡೆಯಿಂದ ಬರುವ ಜನರಿಗೆ ನಮ್ಮ ಭಾಷೆಯ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲವೇ? ಈ ಮೂಲಕ ಕನ್ನಡವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯ ಬಹುದಲ್ಲವೇ? `ಥಾಲಿ~ ಎಂಬ ಪದಕ್ಕೆ ಕನ್ನಡದ ಸಮಾನಾರ್ಥಕ ಪದ ಇವರಿಗೆ ಸಿಗಲೇ ಇಲ್ಲವೇ?`ನಮ್ಮ ಮೈಸೂರು ಊಟ~ ಎಂದು ಹೆಸರಿಡಬಹುದಿತ್ತು ಆದರೆ ನಮ್ಮ ಮೈಸೂರಿನ ಹೋಟೆಲುಗಳ ಉದ್ಯಮಿಗಳಿಗೆ ಅದ್ಯಾವ ಪರಭಾಷೆಯ ಮೋಹವೋ ನಾ ಕಾಣೆ? ಅದರ ಜೊತೆ ಜೊತೆಗೆ ಇದನ್ನು ಒಪ್ಪಿ ಕೊಳ್ಳುವ ನಮ್ಮವರ ಅಭಿಮಾನ ಶೂನ್ಯತೆಗೆ ಹಿಡಿದ ಕನ್ನಡಿ. ಇನ್ನಾದರೂ ಪಾಲಿಕೆ ಹಾಗು ಉದ್ಯಮಿಗಳು ಊಟದ ಹೆಸರನ್ನು  `ಮೈಸೂರಿನ ಸಂಸ್ಕೃತಿಯ ಸೊಬಗಿಗೆ ಭಾಷೆಯ ಕಳಸವಿಟ್ಟಂತೆ~. ತಾಯಿ ಚಾಮುಂಡೇಶ್ವರಿ ಇವರಿಗೆ ಈ ಬುದ್ದಿ ಕೊಡಲಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.