ಗುರುವಾರ , ಮೇ 13, 2021
22 °C

ಯಾದಗಿರಿ: ಗುಳೆ ಹೊರಟ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯಲ್ಲಿ ಬರಗಾಲ ಭೀಕರವಾಗಿರುವುದರಿಂದ ತ್ಲ್ಲಾಲೂಕಿನ ಗಡಿಭಾಗದ ಕೆರೆಗಳಲ್ಲಿ ನೀರು ಸಂಪೂರ್ಣ ಖಾಲಿಯಾಗಿ ರೈತರು ಹಾಗೂ ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಶನಿವಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ತಾಲ್ಲೂಕಿನ ಗಡಿ ಗ್ರಾಮಗಳಾದ ಕಡೇಚೂರ ಮತ್ತು ಬದ್ದೆಪಲ್ಲಿ ಗ್ರಾಮಗಳಿಗೆ ಭೇಟಿ ನೀಡುವರೆ ಎಂಬ ಚರ್ಚೆಗಳು ನಡೆದಿವೆ.ಮೊದಲೆ ಯಾದಗಿರಿ ತಾಲ್ಲೂಕಿನ ಗುರುಮಠಕಲ್ ವಿಧಾನ ಸಭಾ ಮತಕ್ಷೇತ್ರ ಸಂಪೂರ್ಣ ಒಣಭೂಮಿಯಿಂದ ಕೂಡಿದ ಪ್ರದೇಶ. ಇಲ್ಲಿನ ರೈತರು ಕೃಷಿಗಾಗಿ ಮಳೆ ಇಲ್ಲವೆ ಕರೆಗಳನ್ನೆ ಅವಲಂಬಿಸಿದ್ದಾರೆ. ಈ ಭಾಗದಲ್ಲಿ  ಅತೀ ಹೆಚ್ಚು ಕೆರೆಗಳಿವೆ  ರೈತರು ಕೃಷಿಯನ್ನೆ ಅವಲಂಬಿಸಿ ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಇಲ್ಲಿ ಮಳೆಯಾದರೆ ಮಾತ್ರ ಕೆರೆಗಳು ತುಂಬಿ ರೈತರು ಸಂತೃಪ್ತರಾಗಿ ಕೃಷಿ ಚಟುವಟಿಕೆ ನಡೆಸಲು ಸಾಧ್ಯ ಇಲ್ಲದಿದ್ದರೆ ಕೆಲಸ ಅರಸಿ ಬಹತ್ ನಗರಗಳಿಗೆ ಗುಳೆ ಹೋಗುವುದು ತಪ್ಪಿದ್ದಲ್ಲ.ಗಡಿ ಭಾಗದ ಬದ್ದೆಪಲ್ಲಿ ಹಾಗೂ ಅಜಲಾಪೂರ ಗ್ರಾಮಗಳ ಕೆರೆ ಸೇರಿದಂತೆ ಬಹುತೇಕ ಎಲ್ಲಾ ಕೆರೆಗಳು ನೀರು ಇಲ್ಲದೆ ಬತ್ತಿ ಹೋಗಿವೆ. ಬದ್ದೆಪಲ್ಲಿ ತೂರು ಕೆರೆಯಲ್ಲಿ ಸಣ್ಣ ನೀರಾವರಿ ಇಲಾಖೆ ಲಕ್ಷಾಂತರ ಹಣ ಖರ್ಚು ಮಾಡಿ  ಹೂಳು ತೆಗೆಸಿದೆ. ಆದರೆ  ಮಳೆಯಾಗದ  ಪರಿಣಾಮ ಈ ಕೆರಗಳಲ್ಲಿ ಹನಿ ನೀರಿಲ್ಲದಾಗಿದೆ. ಇದರಿಂದಾಗಿ ಗುರುಮಠಕಲ್ ಮತಕ್ಷೇತ್ರದ ಜನತೆ ಜೀವನಕ್ಕಾಗಿ ದೊಡ್ಡ ಶಹರಗಳತ್ತ ಮುಖ ಮಾಡುತ್ತಿದ್ದಾರೆ.ತಾಲ್ಲೂಕಿನ ಅಜಲಾಪೂರ ಗ್ರಾಮದ ಕೆರೆ ವಿಶಾಲವಾಗಿದೆ.  ಆದರೆ ಇಲ್ಲಿಯೂ ಒಂದು ಹನಿ ನೀರಿಲ್ಲ. ಇದರಿಂದಾಗಿ ಗ್ರಾಮಸ್ಥರು  ರೈತರು ಸಂಕಷ್ಟದಲ್ಲಿದ್ದಾರೆ. ಈ ಕೆರೆಯಲ್ಲಿ ಮೀನುಗಾರಿಕೆಯಿಂದ ಸರ್ಕಾರಕ್ಕೆ ಲಕ್ಷಾಂತರ ಆದಾಯ ಕೂಡ ಬರುತ್ತಿತ್ತು ಆದರೆ ಕಳೆದ ಹಲವಾರು ವರ್ಷಗಳಿಂದ ಕೆರೆ ತುಂಬಿಲ್ಲ.ಈ ಹಿಂದೆ ಗುರುಮಠಕಲ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪ್ರಸ್ತುತ ಕೇಂದ್ರ ಸಚಿವರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಗುರಮಠಕಲ್ ಶಾಸಕರಾಗಿದ್ದಾಗ ಕೆರೆ ನೀರನ್ನು ಪೋಲು ಮಾಡದಂತೆ ವಿವಿಧ ಯೋಜನೆಗಳನ್ನು ರೂಪಿಸಿ ಆ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದರು.  ಈ ಭಾಗದಲ್ಲಿರುವ ಎಲ್ಲಾ ಕೆರೆಗಳನ್ನು ಅಭಿವದ್ಧಿ ಪಡೆಸಿ ಅಗತ್ಯ ಕಾಲುವೆಗಳು ಹಾಗೂ ನೀರು ಪೋಲಾಗದಂತೆ ಹಳ್ಳಗಳಿಗೆ ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡಿ ನೀರು ಸಂಗ್ರಹಣೆಯಾಗುವಂತೆ ಮಾಡಿದ್ದರು. ರೈತರಿಗೆ ನೀರಾವರಿ ಮಾಡಿಕೊಳ್ಳಲು ಅನುಕೂಲತೆ ಮಾಡಿಕೊಟ್ಟಿದ್ದರು.

 

ಪದೇ ಪದೇ ಬರಗಾಲ ಆವರಿಸುತ್ತಿದ್ದರಿಂದ ರೈತರು ತೀವ್ರ ತೊಂದರೆ ಹಾಗೂ ನಷ್ಟ ಅನುಭವಿಸುವಂತಾಗಿದೆ.

ಮಳೆಯಿಲ್ಲ, ಬೆಳೆಯಿಲ್ಲ ಎಂದು ರೈತರು ರೈತರು. ಗಂಟು ಮೂಟೆ ಕಟ್ಟಕೊಂಡು ಕೆಲಸ ಅರೆಸಿ ದೊಡ್ಡ ಪಟ್ಟಣಗಳಿಗೆ ಗುಳೆ ಹೋಗುವುದು ತಪ್ಪಿಲ್ಲ.

 

ಗುರಮಠಕಲ್ ಕ್ಷೇತ್ರದ ಮಧ್ಯೆ ಭೀಮಾನದಿ ಹರಿಯುತ್ತಿದ್ದರೂ ರೈತರಿಗೆ ಹೆಚ್ಚಿನ ಉಪಯೋಗವಾಗುತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಶೇಷ ಯೋಜನೆ ರೂಪಿಸಿ ನದಿ ನೀರನ್ನು ಎಲ್ಲಾ ಕೆರೆಗಳಿಗೆ ತುಂಬಿಸಬೇಕು ಆಗ ಮಾತ್ರ ಈ ಭಾಗದಲ್ಲಿ ಹಸಿರು ಕ್ರಾಂತಿಯಾಗಿ ಆಹಾರ ಉತ್ಪನ್ನ ಹೆಚ್ಚಾಗಿ ರೈತರು ಕೆಲಸಕ್ಕಾಗಿ ನಗರಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಸಾಧ್ಯ. ಅದಕ್ಕಾಗಿ  ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಮುಖಂಡ ವೆಂಕಟರೆಡ್ಡಿ ಮುದ್ನಾಳ ಹಾಗೂ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಘಟಕದ ಅಧ್ಯಕ್ಷ ಭೀಮಣ್ಣಗೌಡ ಕ್ಯಾತನಾಳ ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.