ಶನಿವಾರ, ಜೂನ್ 19, 2021
23 °C
ಜರ್ಮನ್‌ ಬೇಕರಿ ಸ್ಫೋಟ ಪ್ರಕರಣ

ಯಾಸೀನ್‌ ಭಟ್ಕಳ ಪೊಲೀಸರ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ (ಐಎಎನ್‌ಎಸ್‌): 2010ರಲ್ಲಿ ನಡೆದ ಜರ್ಮನ್‌ ಬೇಕರಿ ಸ್ಫೋಟ ಪ್ರಕ­ರ­­ಣದ ಪ್ರಮುಖ ಆರೋಪಿ  ಮತ್ತು ಇಂಡಿ­ಯನ್‌ ಮುಜಾಹಿದೀನ್‌ (ಐಎಂ) ಸ್ಥಾ­ಪಕ ಯಾಸೀನ್‌ ಭಟ್ಕಳ­ನನ್ನು ಶುಕ್ರವಾರ ಇಲ್ಲಿನ ಕೋರ್ಟ್‌ 14 ದಿನಗಳ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.‘ಯಾಸೀನ್‌ನನ್ನು ಮುಂಬೈಯಿಂದ ಕರೆತಂದು ಇಲ್ಲಿನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಎಸ್‌.ಡಿ. ದರ್ಣೆ ಅವರ ಮುಂದೆ ಹಾಜರುಪಡಿಸಲಾಯಿತು. ಅವರು ಯಾಸೀನ್‌ನನ್ನು ಮಾರ್ಚ್‌ 28ರವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಿದ್ದಾರೆ’ ಎಂದು ಆರೋಪಿ ಪರ ವಕೀಲ ಐ.ಪಿ.ಎಸ್‌ ಗಿಲ್‌ ಅವರು ಹೇಳಿದ್ದಾರೆ.ಯಾಸೀನ್‌ನನ್ನು ಪೊಲೀಸ್‌ ವಶಕ್ಕೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಭಯೋತ್ಪಾದನ ನಿಗ್ರಹ ದಳದ ಸಹಾಯಕ ಪೊಲೀಸ್‌ ಆಯುಕ್ತ ಶಾಂತಾರಾಮ ಟಾಯ್ದೆ, ‘ಈ ಪ್ರಕರ­ಣಕ್ಕೆ ಸಂಬಂಧಿಸಿದಂತೆ ಕೆಲವು ವಿಷಯ­ಗಳನ್ನು ಸ್ಪಷ್ಟಪಡಿಸಿ­ಕೊಳ್ಳಬೇಕಾ­ಗಿದೆ. ಆದ್ದರಿಂದ ಅವನನ್ನು ಪೊಲೀಸ್‌ ವಶಕ್ಕೆ ಒಪ್ಪಿಸಬೇಕು’ ಎಂದು ಹೇಳಿದ್ದರು.‘17ಜನರು ಸಾವನ್ನಪ್ಪಿ, 64 ಜನರು ಗಾಯಗೊಂಡಿದ್ದ ಜರ್ಮನ್‌ ಬೇಕರಿ ಬಾಂಬ್‌ಸ್ಫೋಟ ಪ್ರಕರಣದಲ್ಲಿ ಬಾಂಬ್‌ ಇರಿಸಿದ್ದು ಯಾಸೀನ್‌ ಎಂಬುದು ತನಿಖೆ­ಯಿಂದ ಬಹಿರಂಗ­ಗೊಂಡಿದೆ. ಆದರೆ ಈ ಸ್ಫೋಟದಲ್ಲಿ ಬಳಸಿದ್ದ ಸ್ಫೋಟಕಗಳನ್ನು ಈತ ಎಲ್ಲಿಂದ ಪಡೆದಿದ್ದ ಎಂಬುದರ ತನಿಖೆಗಾಗಿ ಪೊಲೀಸರು ಯಾಸೀನ್‌­ನನ್ನು ವಿಚಾರಣೆಗೆ ಒಳಪಡಿಸ­ಬೇಕಾಗಿದೆ’ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.