ಗುರುವಾರ , ಜೂನ್ 17, 2021
27 °C

ಯುಗಾದಿಗೆ ಸಂಸಾರದಲ್ಲಿ ಸರಿಗಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂದನ ಸಂವತ್ಸರವನನ್ನು ನಗುನಗುತ್ತ ಸ್ವಾಗತಿಸಲು ಯಶಸ್ವಿ ಕಲಾವಿದರ ತಂಡ ಸಜ್ಜಾಗಿದೆ. ಶುಕ್ರವಾರ `ಸಂಸಾರದಲ್ಲಿ ಸರಿಗಮ~ ಹಾಸ್ಯ ನಾಟಕ. ನಟ ನಿರ್ದೇಶಕ, ಸರಿಗಮ ವಿಜಿ ಹಾಗೂ ಉಮಾಶ್ರೀ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ.ಈಗಾಗಲೇ 1290 ಪ್ರದರ್ಶನಗಳನ್ನು ಕಂಡಿರುವ ಈ ನಾಟಕದಿಂದಲೇ ವಿಜಿ ಅವರ ಹೆಸರಿಗೆ ಸರಿಗಮ ಸೇರ್ಪಡೆಯಾಯಿತು.ನಾಟಕದ 291ನೇ ಪ್ರದರ್ಶನಕ್ಕೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

 

ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಹಾಗೂ ಗಾಯತ್ರಿ ರೆಡ್ಡಿ ಬೇವು ಬೆಲ್ಲ ವಿತರಿಸುವರು. ವಿನಾಯಕ ಕನ್ಸ್‌ಟ್ರಕ್ಷನ್ಸ್ನ್ ರಾಮಲಿಂಗಪ್ಪ, ಭಾವನಾ ಎಂಟರ್‌ಪ್ರೈಸಸ್‌ನ ಯು.ಆರ್.ಎನ್.ಮೂರ್ತಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ದರ್ಶನ್, ನೀತು, ಪ್ರಣೀತ ಹಾಗೂ ರೂಪಶ್ರೀ ಈ ಕಾರ್ಯಕ್ರಮಕ್ಕೆ ತಾರಾ ಮೆರುಗು ನೀಡಲಿದ್ದಾರೆ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 6.15.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.