ನಮಗೆ ಯುಗಾದಿ ಹಬ್ಬ ಹೊಸ ವರ್ಷ. ಮನೆ ಮುಂಬಾಗಿಲಿಗೆ ಮಾವು ಬೇವಿನ ತೋರಣದ ಸಂಭ್ರಮವಾದರೆ ಅಡುಗೆಯ ಮನೆಯಲ್ಲಿ ಮತ್ತೊಂದು ವಿಶೇಷ. ಅಂದು ಒಲೆಯ ಸುತ್ತಲೂ ಸಾರಿಸಿ, ರಂಗೋಲಿ ಹಾಕಿ, ಮಾವು ಬೇವಿನಿಂದ ಅಲಂಕರಿಸಿ, ಪೂಜಿಸಿ, ಹಾಲು ಉಕ್ಕಿಸಿ, ಆ ಹಾಲಿನಿಂದಲೇ ಭಕ್ಷ್ಯಗಳನ್ನು ತಯಾರಿಸಿ, ಹೊಸ ವರುಷ ಹರುಷ ತರಲಿ ಎಂದು ಪ್ರಾರ್ಥಿಸಿ, ಬೇವು ಬೆಲ್ಲ ಸ್ವೀಕರಿಸುತ್ತೇವೆ. ಇಲ್ಲಿವೆ ಹಾಲಿನ ವಿಶೇಷ ರುಚಿಗಳು...

ಹಾರ್ಲಿಕ್ಸ್ ಬರ್ಫಿ
ಬೇಕಾಗುವ ಪದಾರ್ಥಗಳು: ಗಟ್ಟಿ ಹಾಲು 1 ಗ್ಲಾಸು, ಹಾರ್ಲಿಕ್ಸ್ ಪುಡಿ ಅರ್ಧ ಗ್ಲಾಸ್, ಸಕ್ಕರೆ 1 ಗ್ಲಾಸು, ಮೈದಾಹಿಟ್ಟು ಅರ್ಧ ಗ್ಲಾಸು, ಬೆಣ್ಣೆ 1 ಕಪ್ಪು, ಕಾಯಿಹಾಲು 1 ಕಪ್ಪು.

ಮಾಡುವ ವಿಧಾನ: ಸ್ವಲ್ಪ ಹಾಲಿಗೆ, ಹಾರ್ಲಿಕ್ಸ್ ಪುಡಿ ಹಾಕಿ ಗಂಟಿಲ್ಲದಂತೆ, ಕಲಸಿ, ಬೇಕೆನಿಸಿದರೆ ಮತ್ತಷ್ಟು ಹಾಲು ಸೇರಿಸಿ, ದಪ್ಪತಳದ ಪಾತ್ರೆಗೆ ಕಾಯಿಹಾಲು, ಹಾರ್ಲಿಕ್ಸ್ ಸೇರಿಸಿದ ಹಾಲು, ಸಕ್ಕರೆ, ಬೆಣ್ಣೆ ಸೇರಿಸಿ, ಮಂದ ಉರಿಯಲ್ಲಿಡಿ, ಕೈಬಿಡದೆ ಗುಟಾಯಿಸುತ್ತಿರಿ. ಈ ಮಿಶ್ರಣ ಪಾತ್ರೆ ತಳ ಬಿಡುತ್ತಾ ಬಂದಾಗ, ತುಪ್ಪ ಸವರಿದ ತಟ್ಟೆಗೆ ಹಾಕಿ, ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಡಿ.

ಹಾಲು ಪಾಯಸ
ಬೇಕಾಗುವ ಪದಾರ್ಥಗಳು: ಹಾಲು 1 ಗ್ಲಾಸು, ಕಾಯಿಹಾಲು 1 ಗ್ಲಾಸು, ಘಂಸಾಲೆ ಅಕ್ಕಿ ಕಾಲು ಪಾಲು, ಬೆಲ್ಲ 1 ದೊಡ್ಡ ಅಚ್ಚು, ಏಲಕ್ಕಿ, ಗೋಡಂಬಿ, ದ್ರಾಕ್ಷಿ ಸ್ವಲ್ಪ, ತುಪ್ಪ 2 ಚಮಚ.

ಮಾಡುವ ವಿಧಾನ: ಅಕ್ಕಿಯನ್ನು ಸ್ವಲ್ಪ ತುಪ್ಪದೊಂದಿಗೆ ಹುರಿದು, 1 ಗಂಟೆ ನೆನಸಿ ಸ್ವಲ್ಪ ಕಾಯಿಹಾಲಿನೊಂದಿಗೆ ನುಣ್ಣಗೆ ರುಬ್ಬಿ, ನಂತರ ಹಾಲು ಮತ್ತು ಕಾಯಿಹಾಲು ಬೆಲ್ಲದೊಂದಿಗೆ ದಪ್ಪ ತಳದ ಪಾತ್ರೆಗೆ ಹಾಕಿ, ಮಂದ ಉರಿಯಲ್ಲಿ ಕೂಡಿಸುತ್ತಿರಿ, ಗಟ್ಟಿಯಾಗುವ ಮುನ್ನ ತಕ್ಷಣ ಕೆಳಗಿಳಿಸಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಸೇರಿಸಿ, ಸವಿಯಲು ನೀಡಿ.

ಮನೋಹರ ಲಡ್ಡು
ಬೇಕಾಗುವ ಪದಾರ್ಥಗಳು: ಮೈದಾ ಹಿಟ್ಟು ಅರ್ಧ ಕೆ.ಜಿ. ತುಪ್ಪ ಕರಿಯಲು ಬೇಕಾಗುವಷ್ಟು, ಸಕ್ಕರೆ ಅರ್ಧ ಕೆ.ಜಿ. ಏಲಕ್ಕಿ ಪುಡಿ, ಲವಂಗದ ಪುಡಿ ತಲಾ 1 ಚಮಚ, ದ್ರಾಕ್ಷಿ, ಗೋಡಂಬಿ ಯತಾಶಕ್ತಿ, ಕೊಬ್ಬರಿ ತುರಿ 1 ಕಪ್ಪು, ಹಾಲು ಕಾಲು ಕಪ್ಪು.

ಮಾಡುವ ವಿಧಾನ: ಸಕ್ಕರೆ ಜೊತೆ ಏಲಕ್ಕಿ, ಲವಂಗ ಸೇರಿಸಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ, ಇದಕ್ಕೆ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಕೊಬ್ಬರಿ ತುರಿ ಸೇರಿಸಿಡಿ. ಮೈದಾ ಹಿಟ್ಟಿಗೆ ತುಪ್ಪ ಹಾಕಿ (ಸ್ವಲ್ಪ) ಗಟ್ಟಿಯಾಗಿ ಕಲಿಸಿ 1 ಗಂಟೆ ಮುಚ್ಚಿಡಿ. ನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು, ಪೂರಿ ಹಾಗೆ ಲಟ್ಟಿಸಿ (ಹಾಳೆ ತೆಳ್ಳಗಿರಲಿ) ಗರಿ ಗರಿಯಾಗಿ ಕರಿದು ತೆಗೆಯಿರಿ. ಆರಿದ ನಂತರ ಆ ಪೂರಿಗಳನ್ನು ಪುಡಿ ಪುಡಿ ಮಾಡಿ, ಮೊದಲೇ ತಯಾರಿಸಿಟ್ಟಿದ್ದ ಮಿಶ್ರಣದೊಂದಿಗೆ ಸೇರಿಸಿ ಚೆನ್ನಾಗಿ ಕೂಡಿಸಿ, ಹಾಲನ್ನ ಚಿಮುಕಿಸಿ ಉಂಡೆಕಟ್ಟಿಡಿ. ಈಗ ಮನೋಹರವಾದ ಲಡ್ಡು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.