ಭಾನುವಾರ, ಏಪ್ರಿಲ್ 18, 2021
33 °C

ಯುವಕರೇ.. ಒಂದು ಮಾತು..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯೌವ್ವನ ಸತ್ವ-ಚೈತನ್ಯ ಕೆಚ್ಚು, ಮತ್ತು ಸಾಹಸಗಳ ಸಂಗಮ.  ಇಲ್ಲಿ ದೃಢ ನಿರ್ಧಾರ, ಅವಿರತ ಶೋಧ ಮತ್ತು ಹೋರಾಟಗಳು ಲವಲವಿಕೆಯಿಂದ ಸಮ್ಮಿಲನವಾಗಿರುತ್ತದೆ. ‘ಎಲ್ಲಿಯವರೆಗೆ ನಿಮ್ಮ ಹೃದಯಗಳು ಸೌಂದರ್ಯದ ಭರವಸೆ, ಉಲ್ಲಾಸ, ಧೈರ್ಯ  ಮತ್ತು ಸಾಮರ್ಥ್ಯದ ಸಂದೇಶವನ್ನು ಅನ್ಯರಿಂದ ಹಾಗೂ ಅನಂತತೆಯಿಂದ ಸ್ವೀಕರಿಸುತ್ತದೆಯೋ ಅಲ್ಲಿಯವರೆಗೆ ನೀವು ಹರೆಯದವರಾಗಿರುತ್ತೀರಿ’ ಎಂಬ ಈ ಸಾಲುಗಳು ಸ್ಯಾಮುಯೆಲ್ ಉಲ್‌ಮನ್ ಅವರದ್ದು.ಒಂದು ದೇಶದ ಉತ್ಸಾಹ, ಶಕ್ತಿ ಮತ್ತು ಆಕಾಂಕ್ಷೆಗಳ ಪ್ರತೀಕವೇ ಅದರ ಯುವಜನಾಂಗ.ದೇಶವು ಯುವ ಪೀಳಿಗೆಯ ಮೇಲೆ ಭರವಸೆ ಹಾಗೂ ನಿರೀಕ್ಷೆಯನ್ನಿಟ್ಟಿರುತ್ತದೆ. ಯುವಕರು ಇಂದು ಸಮಾಜದ ರಚನಾತ್ಮಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಪ್ರತಿಭೆ, ಕೌಶಲ್ಯಗಳ ಬೆಳಕನ್ನು ಚೆಲ್ಲಬೇಕಾಗಿದೆ.  ಆಧುನಿಕತೆಯಲ್ಲಿ ಇಂದುಕಾಡುತ್ತಿರುವ ಕ್ರೌರ್ಯ, ಹಿಂಸೆ, ಉಗ್ರಗಾಮಿತ್ವ, ಮದ್ಯ, ಮಾದಕವಸ್ತುಗಳ ಸೇವನೆಯನ್ನು ಯುವಜನತೆ ದೂರವಾಗಿಸಬೇಕು.  ಯುವಕರು ಇಂದು ಮಾನಸಿಕ ಒತ್ತಡದಿಂದ ದೇಹದ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ.ರಕ್ತದ ಒತ್ತಡ, ತಲೆನೋವು ಮತ್ತು ಅಲರ್ಜಿ, ಹೃದಯಘಾತ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಮಾನಸಿಕವಾಗಿ ದುರ್ಬಲರಾದವರು ಒತ್ತಡಕ್ಕೆ ಅತಿಹೆಚ್ಚು ಪ್ರತಿಕ್ರಿಯಿಸುತ್ತಿದ್ದಾರೆ.ಇದರಿಂದಾಗಿ ಅವರು ಖಿನ್ನರಾಗುತ್ತಾರೆ. ಒತ್ತಡಗಳು ಅತಿಯಾಗಿದ್ದು, ವ್ಯಕ್ತಿ ದುರ್ಬಲನಾಗಿದ್ದರೆ ಆತ ಒತ್ತಡಕ್ಕೆ ಬೇಗ ಬಲಿಯಾಗುತ್ತಾನೆ.ಯುವಕರ ವಿಚಾರದಲ್ಲಿ ಇಂದು ಆಗುತ್ತಿರುವುದೂ ಅದೇ.  ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ  ರ್ಯಾಗಿಂಗ್, ಕ್ರೌರ್ಯ, ನಿರುದ್ಯೋಗದ ಚಿಂತೆ, ರಾಜಕೀಯ ಜೀವನ ಯುವಜನರ ಮಾನಸಿಕ ಒತ್ತಡದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದೆ. 


 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.