ಗುರುವಾರ , ಜೂನ್ 24, 2021
23 °C

ಯುವ ಆಟಗಾರರಿಗೆ ಫ್ಲೆಚರ್ ಮಾರ್ಗದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಅಭ್ಯಾಸ ನಡೆಸುತ್ತಿರುವ 19 ವರ್ಷದೊಳಗಿನ ಭಾರತ ಕ್ರಿಕೆಟ್ ತಂಡದ ಆಟಗಾರರ ಮೊಗದಲ್ಲಿ ಸಂತಸ ನಲಿದಾಡುತ್ತಿತ್ತು. ಇದಕ್ಕೆ ಕಾರಣ ಭಾರತ ರಾಷ್ಟ್ರೀಯ ತಂಡದ ಕೋಚ್ ಡಂಕನ್ ಫ್ಲೆಚರ್!ಫ್ಲೆಚರ್ ಹಾಗೂ 16 ಸದಸ್ಯರನ್ನೊಳಗೊಂಡ ತಂಡ ಉದ್ಯಾನನಗರಿಯಲ್ಲಿ ಬೀಡು ಬಿಟ್ಟಿದೆ. ಫ್ಲೆಚರ್ ಜೊತೆ ಆಟಗಾರರು ಸೋಮವಾರ ಸಾಕಷ್ಟು ಹೊತ್ತು ಸಂವಾದ ನಡೆಸಿದರು. ಇದರಿಂದ ಆಟಗಾರರಿಗೆ ಖುಷಿಯಾಯಿತು. ಇದರ ಜೊತೆಗೆ ಹೊಸ ವಿಷಯಗಳ ಬಗ್ಗೆಯೂ ತಿಳಿದುಕೊಂಡರು ಎಂದು 19 ವರ್ಷದೊಳಗಿನ ಭಾರತ ತಂಡದ ಕೋಚ್ ಭರತ್ ಅರುಣ್ ತಿಳಿಸಿದರು.30 ಸದಸ್ಯರನ್ನು ಒಳಗೊಂಡ ಭಾರತ ಕಿರಿಯರ ತಂಡ ಇಲ್ಲಿ ಅಭ್ಯಾಸ ನಡೆಸುತ್ತಿದೆ. ನಾಲ್ಕು ರಾಷ್ಟ್ರಗಳನ್ನೊಳಗೊಂಡ ಕ್ರಿಕೆಟ್ ಸರಣಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ತಂಡಕ್ಕೆ ಮರಳುವ ವಿಶ್ವಾಸ: ಗಾಯಗೊಂಡಿರುವ ವೇಗಿ ವರುಣ್ ಆ್ಯರನ್ ಏಪ್ರಿಲ್ 4ರಿಂದ ಆರಂಭವಾಗುವ ಐಪಿಎಲ್ ಐದನೇ ಆವೃತ್ತಿಗೆ ಹಿಂತಿರುಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಡಿಸೆಂಬರ್ 2ರಂದು ವಿಶಾಖ ಪಟ್ಟಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವೇ ಜಾರ್ಖಂಡ್‌ನ ಈ ವೇಗಿ ಆಡಿದ್ದು ಕೊನೆಯ ಪಂದ್ಯ. ಇದೇ ಕಾರಣದಿಂದ ಆಸ್ಟ್ರೇಲಿಯಾ ಪ್ರವಾಸವನ್ನು ತಪ್ಪಿಸಿಕೊಂಡಿದ್ದರು. ಎನ್‌ಸಿಎನಲ್ಲಿ ಅಭ್ಯಾಸದಲ್ಲಿ ತೊಡಗಿರುವ ಆ್ಯರನ್ ದೆಹಲಿ ಡೇರ್‌ಡೆವಿಲ್ಸ್ ತಂಡದಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.