ನವದೆಹಲಿ(ಪಿಟಿಐ): ಪ್ರಸಕ್ತ ಹಣ ಕಾಸು ವರ್ಷದ ಮೊದಲ ಎಂಟು ತಿಂಗಳಲ್ಲಿ ಭಾರತ ಒಟ್ಟು 57.50 ಲಕ್ಷ ಟನ್ ಯೂರಿಯಾ ರಸಗೊಬ್ಬರವನ್ನು ಆಮದು ಮಾಡಿಕೊಂಡಿದೆ. ಈ ಬಾರಿಯ ಯೂರಿಯಾ ಆಮದು ವೆಚ್ಚ ಒಟ್ಟು 164 ಕೋಟಿ ಡಾಲರ್ಗಳಷ್ಟಾಗಿದೆ(₨10,168 ಕೋಟಿ). ಹಿಂದಿನ ಹಣಕಾಸು ವರ್ಷದ ಏಪ್ರಿಲ್ ನವೆಂಬರ್ ಅವಧಿಯಲ್ಲಿ 54.10 ಟನ್ ಆಮದಾಗಿತ್ತು.

ಅಲ್ಲದೆ, 294 ಕೋಟಿ ಡಾಲರ್ (₨18,228 ಕೋಟಿ) ಮೌಲ್ಯದ 80.40 ಲಕ್ಷ ಟನ್ ನೈಟ್ರೊಜನ್ ರಸಗೊಬ್ಬರಗಳನ್ನೂ ಆಮದು ಮಾಡಿಕೊಳ್ಳಲಾಗಿತ್ತು ಎಂದು ಕೇಂದ್ರ ರಸಗೊಬ್ಬರ ಸಚಿ ವಾಲಯ ಅಂಕಿ ಅಂಶ ನೀಡಿದೆ. ಈ ಬಾರಿ ಆಮದು ಮಾಡಿಕೊಳ್ಳ ಲಾದ ಪ್ರತಿ ಟನ್ ಯೂರಿಯಾ ದರ ಸರಾಸರಿ 50 ಡಾಲರ್ಗಳಷ್ಟು (₨ 3100) ಕಡಿಮೆ ಆಗಿದೆ ಎಂದು ಇಂಡಿ ಯನ್ ಪೊಟ್ಯಾಷ್ ಲಿ., ಅಧ್ಯಕ್ಷ ಪಿ.ಎಸ್.ಗೆಹ್ಲೋಟ್ ಗುರುವಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ದೇಶದ ಕೃಷಿ ವಲಯದಿಂದ ಸರಾಸರಿ ವಾರ್ಷಿಕ 3 ಕೋಟಿ ಟನ್ ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆ ಇರುತ್ತದೆ. ಈ ಬಾರಿ ಉತ್ತಮ ಮುಂಗಾರು ಕಾರಣ ಕೃಷಿ ಚಟುವಟಿಕೆ ಚುರುಕಾಗಿ ಸಾಗಿದೆ. ಯೂರಿಯಾಕ್ಕೂ ಬೇಡಿಕೆ ಹೆಚ್ಚಲಿದೆ. ಸದ್ಯ ದೇಶದಲ್ಲಿನ ರಸಗೊಬ್ಬರ ಕಂಪೆನಿಗಳಿಂದ ಈ ಬಾರಿ 2.20 ಕೋಟಿ ಟನ್ ಯೂರಿಯಾ ತಯಾರಿಕೆಯಾಗುವ ಅಂದಾಜಿದೆ. ಮುಂದಿನ ತಿಂಗಳುಗಳಲ್ಲಿ ಯೂರಿಯಾ ಆಮದು ಪ್ರಮಾಣ ಹೆಚ್ಚುವ ನಿರೀಕ್ಷೆ ಇದೆ ಎಂದು ರಸಗೊಬ್ಬರ ಸಚಿವಾಲ ಯದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿ ಏಪ್ರಿಲ್ ನವೆಂಬರ್ ಅವಧಿಯಲ್ಲಿ ಡೈ ಅಮೋನಿಯಂ ಫಾಸ್ಫೇಟ್(ಡಿಎಪಿ) ಮತ್ತು ಮ್ಯೂರಿಯೇಟ್ ಆಫ್ ಪೊಟ್ಯಾಷ್(ಎಂಒಪಿ) ಒಟ್ಟು 40.10 ಲಕ್ಷ ಟನ್ ಆಮದಾ ಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಭಾರತ ಒಟ್ಟು 81.40 ಲಕ್ಷ ಟನ್ ಫಾಸ್ಫೇಟ್, ಪೊಟ್ಯಾಷ್ ರಸಗೊಬ್ಬರಗಳನ್ನು ಆಮದು ಮಾಡಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.