ನವದೆಹಲಿ (ಪಿಟಿಐ): `ಎಂಟು ವರ್ಷಗಳ ನಂತರ ಒಲಿಂಪಿಕ್ಸ್ನಲ್ಲಿ ಆಡುವ ಅವಕಾಶ ಸಿಕ್ಕಿದೆ. ಇದರಿಂದ ಸಹಜವಾಗಿ ಒತ್ತಡವಿದೆ. ಆದ್ದರಿಂದ ಉತ್ತಮ ಪ್ರದರ್ಶನ ನೀಡುವ ಉದ್ದೇಶದಿಂದ ಯೋಗ ಹಾಗೂ ಧ್ಯಾನ ಮಾಡುತ್ತಿದ್ದೇವೆ. ಕಠಿಣ ಶ್ರಮ ಪಡುತ್ತಿದ್ದೇವೆ~ ಎಂದು ಭಾರತ ಹಾಕಿ ತಂಡದ ನಾಯಕ ಭರತ್ ಚೆಟ್ರಿ ತಿಳಿಸಿದ್ದಾರೆ.

`ಹಲವು ಕ್ರೀಡಾಕೂಟಗಳಿಗೆ ಹೋಲಿಸಿದರೆ, ಒಲಿಂಪಿಕ್ಸ್ಗೆ ಇರುವ ಪ್ರಾಧಾನ್ಯತೆಯೇ ಬೇರೆ. ಮಾನಸಿಕ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳಲು ದಿನಕ್ಕೆ 40 ನಿಮಿಷ ಯೋಗ ಮಾಡುತ್ತಿದ್ದೇವೆ. ಇದರಿಂದ ಸಾಕಷ್ಟು ಬದಲಾವಣೆಗಳು ನಮ್ಮಲ್ಲಿ ಕಂಡು ಬರುತ್ತಿವೆ~ ಎಂದು ಸ್ಪೇನ್ನಿಂದ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಚೆಟ್ರಿ ಹೇಳಿದ್ದಾರೆ. ಮೂರು ರಾಷ್ಟ್ರಗಳ ನಡುವಣ ಹಾಕಿ ಅಭ್ಯಾಸ ಪಂದ್ಯವನ್ನಾಡಲು ಭಾರತ ತಂಡ ಸ್ಪೇನ್ ಪ್ರವಾಸದಲ್ಲಿದೆ.

`ಅಭ್ಯಾಸ ನಡೆಸುವಾಗ ಬಿಡುವಿನ ವೇಳೆಯಲ್ಲಿ ನಮ್ಮ ಕೋಚ್ ಮೈಕಲ್ ನಾಬ್ಸ್ ಜೊತೆ ಚರ್ಚೆ ನಡೆಸುತ್ತೇವೆ. ನಾಬ್ಸ್ ಹಾಗೂ ಟ್ರೈನರ್ ಡೇವಿಡ್ ಜಾನ್ ತಮ್ಮ ಅನುಭವಗಳನ್ನು ನಮ್ಮ ಜೊತೆ ಹಂಚಿಕೊಳ್ಳುತ್ತಾರೆ. ಧ್ಯಾನದ ಬಗ್ಗೆ ಡೇವಿಡ್ ಅವರಿಂದ ಸಾಕಷ್ಟು ಕಲಿತಿದ್ದೇವೆ. ಒಂದು ತಿಂಗಳಿಂದ ಧ್ಯಾನ ಮಾಡುತ್ತಿದ್ದೇವೆ ಎಂದ ಅವರು, ಪ್ರತಿ ಪಂದ್ಯ ಆಡುವುದಕ್ಕಿಂತ ಮುಂಚಿತವಾಗಿ ಮಾನಸಿಕ ಸಾಮರ್ಥ್ಯದ ಪರಿಶೀಲನೆ ನಡೆಸುತ್ತೇವೆ~ ಎಂದು ನುಡಿದಿದ್ದಾರೆ.

ಆಟಗಾರರನ್ನು ಯೋಗ ಹಾಗೂ ಧ್ಯಾನದಲ್ಲಿ ತೊಡಗಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಚೆಟ್ರಿ, `ಬೇರೆ ಜಗತ್ತನ್ನು ಮರೆತು ನಮ್ಮ ಜಗತ್ತಿನತ್ತ ಮಾತ್ರ ಚಿತ್ತ ಹರಿಸಿದ್ದೇವೆ. ಇದರಿಂದ ಕಠಿಣ ಪರಿಸ್ಥಿತಿಯಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಗೊತ್ತಾಗುತ್ತಿದೆ. ಅಷ್ಟೇ ಅಲ್ಲ, ಒಲಿಂಪಿಕ್ಸ್ನಲ್ಲಿ ನಮ್ಮ ತಂಡಕ್ಕೆ ಕಠಿಣ ಸವಾಲಿದೆ~ ಎಂದು ಸಂದರ್ಶನದಲ್ಲಿ ಚೆಟ್ರಿ ಹೇಳಿದ್ದಾರೆ.

ಆದ್ದರಿಂದ ಸವಾಲಿಗೆ ಎದೆಗುಂದದೆ, `ದೌರ್ಬಲ್ಯಗಳನ್ನೆಲ್ಲಾ ಪ್ರಬಲ ಶಕ್ತಿಯನ್ನಾಗಿ ಪರಿವರ್ತಿಸಬೇಕು~ ಎನ್ನುವ ಮಂತ್ರದ ಮೊರೆ ಹೋಗಿದ್ದಾಗಿ ಹೇಳಿಕೊಂಡಿದ್ದಾರೆ.`ಲಂಡನ್ನಲ್ಲಿ ಸಾಕಷ್ಟು ಪೈಪೋಟಿ ಇರುತ್ತದೆ. `ದೌರ್ಬಲ್ಯಗಳನ್ನೇ ಶಕ್ತಿಯನ್ನಾಗಿ ಪರಿವರ್ತಿಸಿ~ ಎಂದು 1948ರ ಲಂಡನ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಜಯಿಸಿದ್ದಾಗ ಹಾಕಿ ತಂಡದಲ್ಲಿದ್ದ ಲೆಸ್ಲಿ ಕ್ಲಾಡಿಯಸ್ ಮತ್ತು ಕೇಶವ್ ದತ್ ಅವರು ಯುರೋಪ್ ಪ್ರವಾಸದ ವೇಳೆ ನನಗೆ ಹೇಳಿದ್ದರು. ಆದ್ದರಿಂದ ನಾನು ಈ ಮಂತ್ರದ ಮೊರೆ ಹೋಗಿದ್ದೇನೆ~ ಎಂದು ಭಾರತ ತಂಡದ ನಾಯಕ ತಿಳಿಸಿದ್ದಾರೆ.

`ಯುರೋಪ್ ಪ್ರವಾಸದ ವೇಳೆ ಆಡಿದ ಅಭ್ಯಾಸ ಪಂದ್ಯಗಳು ನಮಗೆ ನೆರವಾದವು. ಚೆಂಡನ್ನು ಪಾಸ್ ನೀಡುವುದರಲ್ಲಿ ಸಾಕಷ್ಟು ಸುಧಾರಿಸಿದ್ದೇವೆ. ಎಲ್ಲಾ ಆಟಗಾರರ ನಡುವೆ ಉತ್ತಮ ಹೊಂದಾಣಿಕೆ ಮನೋಭಾವವಿದೆ. ಇದು ನಮ್ಮ ತಂಡದ ಸಕಾರಾತ್ಮಕ ಅಂಶ~ ಎಂದರು. ಭಾರತ ತಂಡ ಲಂಡನ್ ಒಲಿಂಪಿಕ್ಸ್ನಲ್ಲಿ ಜುಲೈ 30ರಂದು ಹಾಲೆಂಡ್ ಎದುರು ಮೊದಲ ಪಂದ್ಯವನ್ನಾಡಲಿದೆ.

`ಮೊದಲ ಪಂದ್ಯದಲ್ಲಿ ಕಠಿಣ ಸವಾಲಿದೆ. ಆದರೆ, ನಾವು ಉತ್ತಮ ಆರಂಭ ಪಡೆಯಬೇಕು ಎನ್ನುವ ಕಾತರದಲ್ಲಿದ್ದೇವೆ. ಪೆನಾಲ್ಟಿ ಕಾರ್ನರ್ ಪರಿಣಿತ ಸಂದೀಪ್ ಸಿಂಗ್ ಮತ್ತು ವಿ.ಆರ್. ರಘುನಾಥ್ ನಮ್ಮ ತಂಡದ ಬಲ~ ಎಂದು ಸುನಿಲ್ ಚೆಟ್ರಿ ಸಂದರ್ಶನದಲ್ಲಿ ಮನದ ಮಾತನ್ನು ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.