ಮಂಗಳವಾರ, ಮೇ 11, 2021
25 °C

ಯೋಜನಾಶೀಲವಾದ ಎಂಜಿನಿಯರುಗಳ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ದೇಶ ಕಟ್ಟುವಿಕೆಯಲ್ಲಿ ರೈತರಂತೆ ಎಂಜಿನಿಯರುಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಸ್ತುತ ಯೋಜನಾ ಶೀಲ ಎಂಜಿನಿಯರುಗಳ ಕೊರತೆಯಿದ್ದು, ತಾಂತ್ರಿಕ ವಿಶ್ವವಿದ್ಯಾಲಯಗಳು ಇದನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿ ಸಬೇಕು~ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ. ಜೆ. ಪುಟ್ಟಸ್ವಾಮಿ ಅವರು ಹೇಳಿದರು.  ಕನ್ನಡ ಅಭಿವೃದ್ಧಿ ಬಳಗವು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿ ನೋತ್ಸವ ಕಾರ್ಯಕ್ರಮವನ್ನು ಉದ್ಘಾ ಟಿಸಿ ಅವರು ಮಾತನಾಡಿದರು.`ತಾಂತ್ರಿಕ ಜ್ಞಾನ ಮತ್ತು ದೂರ ದರ್ಶಿತ್ವಕ್ಕೆ ಹೆಸರಾಗಿರುವ ವಿಶ್ವೇಶ್ವರಯ್ಯ ಅವರು ದಿವಾನರಾಗಿ ನೀಡಿದ ದಕ್ಷ ಆಡಳಿತ ಪ್ರಸ್ತುತ ರಾಜಕೀಯಕ್ಕೆ ಸ್ಫೂರ್ತಿಯಾಗಬೇಕು. ರಾಜ್ಯಕ್ಕೆ ಅವರ ಕೊಡುಗೆ ಅಪಾರ~ ಎಂದು ಶ್ಲಾಘಿಸಿದರು.ಕೊಳದ ಮಠದ ಶಾಂತವೀರ ಸ್ವಾಮೀಜಿ, `ಬಸವಣ್ಣ ಅವರ ಕಾಯಕವೇ ಕೈಲಾಸ ತತ್ವವನ್ನು ಅಕ್ಷರಶ: ಆಳವಡಿಸಿಕೊಂಡಿದ್ದ ವಿಶ್ವೇಶ್ವರಯ್ಯ ಅವರು ಜೀವನವು ವಿದ್ಯಾರ್ಥಿಗಳಿಗೆ ಆದರ್ಶನೀಯ~ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅಂಧ ಕಲಾವಿದರನ್ನು ಸನ್ಮಾನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.