ರಂಗಶಂಕರದಲ್ಲಿ ನಗೆ ಜುಗಲ್

7

ರಂಗಶಂಕರದಲ್ಲಿ ನಗೆ ಜುಗಲ್

Published:
Updated:
ರಂಗಶಂಕರದಲ್ಲಿ ನಗೆ ಜುಗಲ್ರಂಗಶಂಕರ: ಗುರುವಾರ ಸಂಜೆ 7.30ಕ್ಕೆ ಮೈಸೂರಿನ ನಟನ ತಂಡದಿಂದ ಚೋರ ಚರಣದಾಸ (ರಚನೆ: ಹಬೀಬ್ ತನ್ವಿರ್. ನಿರ್ದೇಶನ: ಮಂಡ್ಯ ರಮೇಶ್). ವಚನ ಭ್ರಷ್ಟತೆ, ಧರ್ಮ ದುರಂತ, ಅಧಿಕಾರ ದಾಹ, ಸತ್ಯ ಸುಳ್ಳುಗಳ ಸಂಘರ್ಷದ ಹಿನ್ನೆಲೆಯಲ್ಲಿ ಸಮಕಾಲೀನ ವಿದ್ಯಮಾನಗಳನ್ನು ಇದು ವಿಡಂಬನಾತ್ಮಕವಾಗಿ ಪ್ರೇಕ್ಷಕರ ಮುಂದಿಡುತ್ತದೆ. ಟಿಕೆಟ್ ದರ 100 ರೂ.ಶುಕ್ರವಾರ ಮಧ್ಯಾಹ್ನ 3.30ಕ್ಕೆ ಇದೇ ತಂಡದಿಂದ ‘ಸತ್ರು ಅಂದ್ರೆ ಸತ್ರಾ’ (ಹಿಂದಿ ಮೂಲ: ಭರತೇಂದ್ರು ಹರಿಶ್ಚಂದ್ರ. ಕನ್ನಡಕ್ಕೆ: ವೈದೇಹಿ) ನಾಟಕ. ಮಕ್ಕಳ ಇಷ್ಟದ ಹಾಡು, ನೃತ್ಯ ಮತ್ತು ತಮಾಷೆಯ ಸುತ್ತ ನಾಟಕ ಸಾಗುತ್ತದೆ. ಟಿಕೆಟ್ ದರ 50 ರೂ. ಮಾಹಿತಿಗೆ: 98452 70492.

ಸಂಜೆ 7.30ಕ್ಕೆ ಕ್ರಿಯೇಟಿವ್ ಥಿಯೇಟರ್ ತಂಡದಿಂದ ‘ರತ್ನನ್ ಪ್ರಪಂಚ’ (ರಂಗ ರೂಪ: ಲಕ್ಷ್ಮಿ ಚಂದ್ರಶೇಖರ್. ನಿರ್ದೇಶನ: ಜೊಸೆಫ್). ನಾಟಕ.ಇದು ಸಾಹಿತಿ ಜಿ.ಪಿ. ರಾಜರತ್ನಂ ಅವರ ಜೀವನ ಮತ್ತು ಸಾಧನೆಯನ್ನು ಆಧರಿಸಿ ಬರೆದ ನಾಟಕ. ರಾಜರತ್ನಂ ಅವರ ಪ್ರಸಿದ್ಧ ಗೀತೆಗಳು, ಉಕ್ತಿಗಳು, ‘ಕಂಬ್ಳಿಸೇವೆ’ ಹಾಸ್ಯ ಚಟಾಕಿಯನ್ನು ಒಳಗೊಂಡಿದೆ.     

ಪಾತ್ರವರ್ಗ: ಲಕ್ಷ್ಮಿ ಚಂದ್ರಶೇಖರ್, ಸುಂದರ್, ರಾಮಕೃಷ್ಣ ಕನ್ನರ್ಪಾಡಿ, ಗಜಾನನ ಟಿ. ನಾಯ್ಕ, ಸಂಧ್ಯಾ ಮತ್ತು ಚಂದ್ರಕೀರ್ತಿ. ಟಿಕೆಟ್ ದರ 70 ರೂ. ಟಿಕೆಟ್‌ಗೆ: www.indiastage.in, 96206 04479.

ಸ್ಥಳ: ರಂಗಶಂಕರ, ಜೆ.ಪಿ. ನಗರ 7ನೇ ಹಂತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry