ಬುಧವಾರ, ಮೇ 18, 2022
27 °C

ರಂಗಶಂಕರದಲ್ಲಿ ಹ್ಯಾಮ್ಲೆಟ್, ಕತ್ಯಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗಶಂಕರ: ಶನಿವಾರ ಸಂಜೆ 7.30ಕ್ಕೆ ಸಿನಿಮ್ಯಾಟೋಗ್ರಾಫ್ ತಂಡದಿಂದ `ಹ್ಯಾಮ್ಲೆಟ್- ದಿ ಕ್ರೌನ್ ಪ್ರಿನ್ಸ್~ ನಾಟಕ. (ಮೂಲ: ವಿಲಿಯಂ ಶೇಕ್ಸ್‌ಪಿಯರ್. ನಿರ್ದೇಶನ: ರಜತ್ ಕಪೂರ್).ಭಾನುವಾರ ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ ಮುಂಬೈನ ಭಾರತ ನಾಟ್ಯ ಮಂದಿರದಿಂದ ಮರಾಠಿಯ ಹೆಸರಾಂತ ಸಂಗೀತ ನಾಟಕ `ಕತ್ಯಾರ ಕಾಳಜ್ಯಾತ ಘುಸಲಿ (ರಷನೆ: ಪುರುಷೋತ್ತಮ ದಾರ್ವೇಕರ್. ಸಂಗೀತ ಸಂಯೋಜನೆ: ದೇಶದ ಹೆಸರಾಂತ ಸಂಗೀತಗಾರ ಪಂಡಿತ್ ಜಿತೇಂದ್ರ ಅಭಿಷೇಕಿ. ನಿರ್ದೇಶನ: ರವೀಂದ್ರ ಖಾರೆ).ಎರಡು ಸಂಗೀತ ಘರಾಣಗಳ, ಅಂದರೆ ಎರಡು ಕುಟುಂಬಗಳ ದಾಯಾದಿ ಮತ್ಸರವನ್ನು ರೋಚಕವಾಗಿ ರಂಗದ ಮೇಲೆ ತಂದಿರುವ ಈ ನಾಟಕದಲ್ಲಿ ಸಂಗೀತದ ರಸದೌತಣವೇ ಇದೆ.ಒಂದು ಕಡೆ ಇದೇನು ಸಂಗೀತ ಕಚೇರಿಯೋ, ನಾಟಕವೋ ಎಂಬ ಭ್ರಮೆ ಮೂಡಿಸುವಂತಿದ್ದರೆ; ಮತ್ತೊಂದೆಡೆ ರಸವತ್ತಾದ ಸಂಭಾಷಣೆ, ವೀರಾವೇಶ, ಭಾವುಕ ದೃಶ್ಯಗಳಿಂದ ಕೊನೆಯವರೆಗೂ ಕುತೂಹಲವನ್ನು ಕಾಯ್ದುಕೊಂಡಿದೆ.

 ಟಿಕೆಟ್‌ಗಳಿಗೆ: 98806 95659.

 ಸ್ಥಳ: ರಂಗಶಂಕರ, ಜೆ.ಪಿ.ನಗರ, 2ನೇ ಹಂತ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.