ಬುಧವಾರ, ಜನವರಿ 22, 2020
16 °C

ರಕ್ತದಾನ- ಜಾಗೃತಿ ಅಗತ್ಯ: ಡಾ. ನವೀನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರತ್ಕಲ್: ರಕ್ತದಾನದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಜತೆಗೆ ಇನ್ನೊಂದು ಜೀವ ಉಳಿಸಿದ ಕೀರ್ತಿಯೂ ಲಭಿಸುತ್ತದೆ ಎಂದು ಮಂಗಳೂರು ವಿ.ವಿಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ನವೀನ್ ಹೇಳಿದರು.ಮಂಗಳೂರು ವಿವಿ ಆರೋಗ್ಯ ಕೇಂದ್ರ, ವೆನ್ಲಾಕ್ ಆಸ್ಪತ್ರೆ, ಕುಳಾಯಿ ಪೊಲೀಸ್ ಯೂತ್‌ಕ್ಲಬ್ ಕುಳಾಯಿ ವೆಂಕಟರಮಣ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ರಕ್ತದಾನ ಮಾಡಿಶಿಬಿರ ಉದ್ಘಾಟಿಸಿದ ಸುರತ್ಕಲ್ ಪೊಲೀಸ್ ಉಪನಿರೀಕ್ಷಕ ಎಚ್.ರಮೇಶ್ ಮಾತನಾಡಿ, ರಕ್ತದಾನದಿಂದ ದೇಹಕ್ಕೆ ಪುನಶ್ಚೇತನ ಲಭಿಸುತ್ತದೆ ಎಂದರು.ಉದ್ಯಮಿ ವಾಸುದೇವ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಸುಮಾರು 30 ಮಂದಿ ರಕ್ತದಾನ ಮಾಡಿದರು.

ಬದ್ರಿಯಾ ಜುಮಾ ಮಸೀದಿಅಧ್ಯಕ್ಷ ಕುಳಾಯಿ ಅಬ್ದುಲ್ ರಝಾಕ್, ಫಾತಿಮಾ ಮಂದಿರದ ಕಾರ್ಯದರ್ಶಿ ಸ್ಟ್ಯಾನಿ ಇದ್ದರು.

ಪ್ರತಿಕ್ರಿಯಿಸಿ (+)