ಶುಕ್ರವಾರ, ಜೂನ್ 18, 2021
24 °C

ರಕ್ತದಾನ: ತಪ್ಪು ಕಲ್ಪನೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಪ್ರತಿಯೊಬ್ಬ ಆರೋಗ್ಯವಂತ ಮನುಷ್ಯನ ದೇಹದಲ್ಲಿಯೂ ಸುಮಾರು 5.5 ಲೀಟರ್‌ನಷ್ಟು ರಕ್ತ ಚಲನೆಯಲ್ಲಿರುತ್ತದೆ. ಒಮ್ಮೆ 300ಮಿ.ಲೀ ನಷ್ಟು ರಕ್ತವನ್ನು ದಾನ ಮಾಡಬಹುದು ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಸಿ. ಸುರೇಶ್ ತಿಳಿಸಿದರು.ಇಲ್ಲಿನ ರೋಟರಿ ಶಾಲಾ ಆವರಣದಲ್ಲಿ ಶನಿವಾರ ರೋಟರಿ ಸಂಸ್ಥೆ, ಇನ್ನರ್ ವೀಲ್ ಕ್ಲಬ್ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.ರಕ್ತದಾನದಿಂದ ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಯಾವುದೇ ತಪ್ಪು ಕಲ್ಪನೆಗಳೂ ಬೇಡ ಎಂದರು. ಅಪಘಾತಕ್ಕೆ ತುತ್ತಾದವರಿಗೆ, ರಕ್ತ ಹೀನತೆಯಿಂದ ಬಳಲುತ್ತಿರುವ ರೋಗಿಗಳ ಪ್ರಾಣ ರಕ್ಷಣೆಗೆ ಶಿಬಿರದಲ್ಲಿ ದಾನವಾಗಿ ಬಂದ ರಕ್ತವನ್ನು ಬಳಸಲಾಗುತ್ತದೆ. ರಕ್ತವನ್ನು ಬೆಂಗಳೂರಿನ ರೋಟರಿ ಟಿ.ಟಿ.ಕೆ. ರಕ್ತ ಕೇಂದ್ರದಲ್ಲಿ  ಶೇಖರಿಸಲಾಗುವುದು ಎಂದರು.ಶಿಬಿರದಲ್ಲಿ ಸುಮಾರು 41 ಯುನಿಟ್ ರಕ್ತವನ್ನು ಶೇಖರಿಸಲಾಗಿದೆ ಎಂದು ರೋಟರಿ  ಕಾರ್ಯದರ್ಶಿ ವಿ.ಎನ್. ಸೂರ್ಯಪ್ರಕಾಶ್ ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.