ಗುರುವಾರ , ಫೆಬ್ರವರಿ 25, 2021
31 °C

ರಕ್ಷಾ ಬಂಧನಕ್ಕೆ ಬಗೆಬಗೆ ರಾಖಿಗಳು

ಕವಿತಾ ಆರ್‌. Updated:

ಅಕ್ಷರ ಗಾತ್ರ : | |

ರಕ್ಷಾ ಬಂಧನಕ್ಕೆ ಬಗೆಬಗೆ ರಾಖಿಗಳು

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಹಿನ್ನೆಲೆ ಇವೆ. ಆಷಾಢ ಮುಗಿದ ನಂತರ ಹಬ್ಬಗಳು ಸಾಲುಸಾಲಾಗಿ ಎದುರಾಗುತ್ತವೆ.



ಶ್ರಾವಣ ಮಾಸದ ಹುಣ್ಣಿಮೆಗೆ ರಕ್ಷಾ ಬಂಧನದ ಮೆರುಗು ಇದೆ. ಈ ಮೊದಲು ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತವಿದ್ದ ‘ರಕ್ಷಾಬಂಧನ’ ಅಥವಾ ‘ರಾಖಿ’ ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ದೇಶದೆಲ್ಲೆಡೆ ಆಚರಿಸಲಾಗುತ್ತಿದೆ.



ಸೋದರಿಯು ತನ್ನ ಸಹೋದರನಿಗೆ ಯಾವ ದುಷ್ಟಶಕ್ತಿಗಳು ತಾಕದ ಹಾಗೆ ರಕ್ಷಿಸಲು ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಈ ರಾಖಿ ಹಬ್ಬಕ್ಕೆ ಪ್ರೀತಿಯೊಂದಿಗೆ ವೈಭವದ ಲುಕ್‌ ನೀಡುವ ಸಲುವಾಗಿ ವೈವಿಧ್ಯಮಯ ವಿನ್ಯಾಸ, ಆಕಾರಗಳನ್ನು ಹೊತ್ತು ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.



ಹೈಟೆಕ್ ರಾಖಿಗಳ ಅಬ್ಬರ

ಅಂಗಡಿಗಳಲ್ಲಿ ಒಂದು ಸುತ್ತು ಹಾಕಿದರೆ ಥರಾವರಿ ರಾಖಿಗಳು ಕಣ್ಣಿಗೆ ಬೀಳುತ್ತವೆ. ಸಾವಿರ ರೂಪಾಯಿ ಮೌಲ್ಯ ರಾಖಿಗಳೂ ಇವೆ. ಕೇವಲ ನೂಲು ಅಥವಾ ಉಣ್ಣೆ ಗುಚ್ಛದಂತೆ ಇರುತ್ತಿದ್ದ ಸಾದಾ ರಾಖಿಗಳು ಕಣ್ಣಿಗೆ ಬೀಳುತ್ತಿಲ್ಲ. ಇವುಗಳ ಸ್ಥಾನದಲ್ಲಿ ಕಸೂತಿ, ಮಣಿ, ಥರ್ಮಾಕೋಲ್‌ಗಳಿಂದ ಅಲಂಕರಿಸಿರುವ ರಾಖಿಗಳು ಗೋಚರಿಸುತ್ತಿವೆ.



ದಾರದ ಎಳೆಯ ಬದಲು ಬಂಗಾರದ ಹಾಗೂ ಬೆಳ್ಳಿಯ ಎಳೆಯು ರಾಖಿಗಳಲ್ಲಿ ಕಾಣಸಿಗುತ್ತವೆ. ಇಂದು ಹೈಟೆಕ್ ಮೆರುಗಿನಲ್ಲಿ ರಾಖಿಗಳು ಮೆರೆಯುತ್ತಿವುದು ವಿಶೇಷ.ಅಣ್ಣ ತಂಗಿಯರ ಬಾಂಧವ್ಯವನ್ನು ಬೆಸೆಯುವ ಥರಾವರಿ ರಾಖಿಗಳು ಮಹಾತ್ಮ ಗಾಂಧಿ ರಸ್ತೆಯ ಬಾರ್ಟನ್‌ ಸೆಂಟರ್‌ನಲ್ಲಿ  ಪ್ರದರ್ಶನಕ್ಕಿವೆ. ಬೆಳ್ಳಿಯ ರಾಖಿಗಳು ಇಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತವೆ.



ರಾಖಿಗಳ ಜತೆಯಲ್ಲಿಯೇ ತಂಗಿಗೆ ಅಣ್ಣ  ನೀಡಲು ಬೇಕಿರುವ ಬೆಳ್ಳಿಯ ಅನೇಕ ಉಡುಗೊರೆಗಳು ಸಿಗುತ್ತವೆ. ಗಣೇಶ ಚತುರ್ಥಿಯ ಅಂಗವಾಗಿ ಸುಂದರವಾದ ಗಣೇಶ ವಿಗ್ರಹಗಳನ್ನು ಸಹ ಇಲ್ಲಿ ಮಾರಾಟ ಮಾಡಲಾಗುತ್ತಿದೆ.



ಆಗಸ್ಟ್‌ 18 ವರೆಗೂ ರಾಖಿಗಳ ಮಾರಾಟ ಹಾಗೂ ಆಗಸ್ಟ್‌ 19 ರಿಂದ ಸೆಪ್ಟೆಂಬರ್‌ 5 ರವರೆಗೂ ಬೆಳ್ಳಿಯ ಗಣೇಶಗಳ ಮಾರಾಟ ನಡೆಯಲಿದೆ. ಆನ್‌ಲೈನ್ ಖರೀದಿಗೆ episodesilver.com ನೋಡಬಹುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.