ಗುರುವಾರ , ಮೇ 13, 2021
35 °C

`ರಜಿನಿಕಾಂತ್ ಜೊತೆ ಹೋಲಿಸುವುದು ಬೇಡ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧನುಶ್ ತಮ್ಮ ಚೊಚ್ಚಲ ಬಾಲಿವುಡ್ ಚಿತ್ರದ ಬಿಡುಗಡೆಯ ಬಿಸಿಯಲ್ಲಿದ್ದಾರೆ. ರಜಿನಿಕಾಂತ್ ಅವರ ನಟನಾ ಕೌಶಲ್ಯವನ್ನು ಧನುಶ್ ಅವರಲ್ಲಿ ಕಾಣುವ ನಿರೀಕ್ಷೆಯಲ್ಲಿ ಬಾಲಿವುಡ್ ಚಿತ್ರದ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಚಿತ್ರವನ್ನು ಕಾತರದಿಂದ ಕಾಯುತ್ತಿದ್ದಾರಂತೆ.ರಜಿನಿಕಾಂತ್ ಅವರು ತಮ್ಮ ಮೇಲೆ ಪ್ರಭಾವ ಬೀರಿರುವುದು ನಿಜ ಆದರೆ ನನ್ನನ್ನು ಅವರೊಂದಿಗೆ ಹೋಲಿಸುವುದನ್ನು ನಾನು ಇಷ್ಟಪಡಲಾರೆ. ಏಕೆಂದರೆ ಅವರೊಬ್ಬ ಮೇರು ನಟ ಎಂದು ಧನುಶ್ ತಮ್ಮ ಮಾವ ರಜಿನಿಕಾಂತ್ ಕುರಿತು ಹೇಳಿದ್ದಾರೆ.`ರಜಿನಿ ಅವರ ಚಿತ್ರಗಳನ್ನು ನೋಡಿ ನಾನು ಬೆಳೆದವನು. ಹೀಗಾಗಿ ನನ್ನ ಮೇಲೆ ಅವರ ಪ್ರಭಾವ ತುಸು ಹೆಚ್ಚೇ ಇದೆ. ಆದರೆ ನನ್ನನ್ನು ಅವರೊಂದಿಗೆ ಹೋಲಿಸುವುದು ತಪ್ಪು. ನಾನು ನಟಿಸಿರುವುದು ಕೇವಲ 26 ಸಿನಿಮಾಗಳು ಮಾತ್ರ. ಹೀಗಿರುವಾಗಿ ನಾನು ಅವರ ಸಮಕ್ಕೆ ಬರಲು ಹೇಗೆ ಸಾಧ್ಯ?' ಎಂಬ ಮರುಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.`ರಾಂಝನಾ' ಚಿತ್ರದಲ್ಲಿ ಬನಾರಸ್‌ನ ಹಳ್ಳಿ ಹುಡುಗನಾಗಿ ನಟಿಸಿರುವ ದಕ್ಷಿಣದ ನಟನ ಪಾತ್ರವು ಕೊಂಚ ಬೇರೆ ರೀತಿಯೇ ಇದ್ದರೂ, ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದ ಅದೇ ಯುವಕನ ಪಾತ್ರವನ್ನು ಅದು ಹೋಲುತ್ತದೆ. `ನನ್ನ ನಟನಾ ಜೀವನದಲ್ಲಿ ಇದು ಮತ್ತೊಂದು ಚಿತ್ರವಷ್ಟೇ. ಈ ಚಿತ್ರದ ಚಿತ್ರಕಥೆ ಕೇಳಿದ ನಂತರ ನಾನು ತಮಿಳಿನಲ್ಲಿ ನಟಿಸಿದ ಚಿತ್ರಗಳ ಪಾತ್ರಗಳಂತೆಯೇ ಹೋಲುತ್ತಿದ್ದುದರಿಂದ ಒಪ್ಪಿಕೊಳ್ಳಲು ಸುಲಭವಾಯಿತು. ಪಾತ್ರದ ಆಯ್ಕೆಯಲ್ಲಿ ಏಕತಾನತೆ ಆಯಿತು ಎಂಬುದು ತಿಳಿದಿದೆ. ಆದರೆ ಭಾಷೆ ಹಾಗೂ ಸ್ಥಳ ಎರಡೂ ಬೇರೆಯದ್ದೇ ಆಗ್ದ್ದಿದರಿಂದ ಅಭಿನಯಿಸಲು ಒಪ್ಪಿಕೊಂಡೆ' ಎಂದಿದ್ದಾರೆ.ರಮ್ಯತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನನ್ನನ್ನು ತಮಿಳುನಾಡಿನ ಅಭಿಮಾನಿಗಳು ಹೇಗೆ ಸ್ವೀಕರಿಸುವರೋ ತಿಳಿಯದು. ರಾಂಝನಾ ಚಿತ್ರವನ್ನು ತಮಿಳಿಗೂ ಡಬ್ ಮಾಡಲಾಗಿದೆ. ಅದು ಅವರಿಗೆ ಇಷ್ಟವಾಗಲಿದೆ ಎನ್ನುವುದು ಧನುಶ್ ವಿಶ್ವಾಸ.ಭಾಷೆ ತನ್ನ ಬಹುದೊಡ್ಡ ತೊಡಕು ಎಂದಿರುವ ಧನುಶ್‌ಗೆ ಹಿಂದಿ ಕಲಿಯುವುದು ಪ್ರಯಾಸದ ಕೆಲಸವಾಗಿದ್ದರಿಂದ ಚಿತ್ರದ ಡಬ್ಬಿಂಗ್ ಕಾರ್ಯವನ್ನು ಬೇರೆಯವರಿಗೆ ಬಿಟ್ಟುಕೊಟ್ಟಿದ್ದಾರಂತೆ. ಇಷ್ಟು ಮಾತ್ರವಲ್ಲದೇ ಅವರಿಗೆ ಈ ಪರಿಯ ಚಿತ್ರ ಪ್ರಚಾರವೂ ಹೊಸತಂತೆ.`ದಕ್ಷಿಣದಲ್ಲಿ ಚಿತ್ರದ ಕುರಿತು ಒಂದಿಷ್ಟು ಸಂದರ್ಶನ ನೀಡಿ ಮುಗಿಸಿಬಿಡುತ್ತೇವೆ. ಆದರೆ ಬಾಲಿವುಡ್‌ನಲ್ಲಿ ಹಾಗಲ್ಲ. ಚಿತ್ರ ನಟನೆಗಿಂತ ಪ್ರಚಾರವೇ ಹೆಚ್ಚು ಸುಸ್ತು ಮಾಡಿಸುತ್ತದೆ. ಈಗಾಗಲೇ `ರಾಂಝನಾ' ಚಿತ್ರದ ಪ್ರಚಾರಕ್ಕಾಗಿ 15 ನಗರಗಳನ್ನು ನಾವು ಸುತ್ತಿದ್ದೇವೆ ಎನ್ನುತ್ತಾರೆ ಅವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.