ಲಂಡನ್ (ರಾಯಿಟರ್ಸ್/ ಎಎಫ್ಪಿ): ಎರಡು ಬಾರಿಯ ಚಾಂಪಿಯನ್ ಹಾಗೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರೆನಿಸಿದ್ದ ಸ್ಪೇನ್ನ ರಫೆಲ್ ನಡಾನ್ ವಿಂಬಲ್ಡನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದರು.

ಆಲ್ ಇಂಗ್ಲೆಂಡ್ ಕ್ಲಬ್ನ ಒಂದನೇ ಕೋರ್ಟ್ನಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಬೆಲ್ಜಿಯಂನ ಸ್ಟೀವ್ ಡಾರ್ಸಿಸ್ 7-6, 7-6, 6-4 ರಲ್ಲಿ ನಡಾಲ್ ಅವರನ್ನು ಮಣಿಸಿ ಅತಿದೊಡ್ಡ ಅಚ್ಚರಿಗೆ ಕಾರಣರಾದರು.

ಇತ್ತೀಚೆಗೆ ನಡೆದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದ ನಡಾಲ್ ಎಂದಿನ ಲಯದಲ್ಲಿ ಆಡಲು ವಿಫಲರಾದರು. ಸ್ಪೇನ್ನ ಆಟಗಾರ ಗ್ರ್ಯಾನ್ಸ್ಲಾಮ್ ಟೂರ್ನಿಯೊಂದರ ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿದ್ದು ಇದೇ ಮೊದಲು. 12 ಗ್ರ್ಯಾನ್ಸ್ಲಾಮ್ ಪ್ರಶಸ್ತಿ ವಿಜೇತ ನಡಾಲ್ ಹೋದ ವರ್ಷ ಇಲ್ಲಿ ಎರಡನೇ ಸುತ್ತಿನಲ್ಲೇ ಮುಗ್ಗರಿಸಿದ್ದರು.

ಫೆಡರರ್ ಶುಭಾರಂಭ: ಹಾಲಿ ಚಾಂಪಿಯನ್ ರೋಜರ್ ಫೆಡರರ್ ಶುಭಾರಂಭ ಮಾಡಿದರು. ಸೆಂಟರ್ ಕೋರ್ಟ್ನಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ನ ಫೆಡರರ್ 6-3, 6-2, 6-0 ರಲ್ಲಿ ರೊಮೇನಿಯದ ವಿಕ್ಟರ್ ಹನೆಸ್ಕು ವಿರುದ್ಧ ಸುಲಭ ಗೆಲುವು ಪಡೆದರು.

ಇಲ್ಲಿ ಮೂರನೇ ಶ್ರೇಯಾಂಕ ಪಡೆದಿರುವ ಫೆಡರರ್ 32 ವಿನ್ನರ್ಗಳನ್ನು ಸಿಡಿಸಿ ಒಂದು ಗಂಟೆ ಒಂಬತ್ತು ನಿಮಿಷಗಳಲ್ಲಿ ಪಂದ್ಯ ತಮ್ಮದಾಗಿಸಿಕೊಂಡರು. ಸ್ವಿಸ್ ಆಟಗಾರ ಆರು ಅನಗತ್ಯ ತಪ್ಪುಗಳನ್ನು ಮಾತ್ರ ಎಸಗಿದರು.

`ಆಲ್ ಇಂಗ್ಲೆಂಡ್ನ ಕ್ಲಬ್ನ ಸೆಂಟರ್ ಕೋರ್ಟ್ನಲ್ಲಿ ಆಡುವುದು ವಿಶೇಷ ಅನುಭವ. ಮೊದಲ ಸುತ್ತಿನ ಪಂದ್ಯ ಇದೇ ಕೋರ್ಟ್ನಲ್ಲಿ ಲಭಿಸಿದ್ದು ಸಂತಸ ನೀಡಿದೆ' ಎಂದು ದಾಖಲೆಯ ಎಂಟನೇ ವಿಂಬಲ್ಡನ್ ಪ್ರಶಸ್ತಿಯತ್ತ ಕಣ್ಣಿಟ್ಟಿರುವ ಫೆಡರರ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.

10ನೇ ಶ್ರೇಯಾಂಕದ ಆಟಗಾರ ಕ್ರೊಯೇಷ್ಯದ ಮರಿನ್ ಸಿಲಿಕಿ 6-3, 6-4, 6-4 ರಲ್ಲಿ ಸೈಪ್ರಸ್ನ ಮಾರ್ಕೊಸ್ ಬಗ್ದಾಟಿಸ್ ವಿರುದ್ಧ ಗೆದ್ದರೆ, ಆರನೇ ಶ್ರೇಯಾಂಕದ ಆಟಗಾರ ಫ್ರಾನ್ಸ್ನ ಜೋ ವಿಲ್ಫ್ರೆಡ್ ಸೋಂಗಾ 7-6, 6-4, 6-3 ರಲ್ಲಿ ಬೆಲ್ಜಿಯಂನ ಡೇವಿಡ್ ಗೊಫಿನ್ ಅವರನ್ನು ಮಣಿಸಿದರು.

ಪುರುಷರ ಸಿಂಗಲ್ಸ್ ವಿಭಾಗದ ಇತರ ಪ್ರಮುಖ ಪಂದ್ಯಗಳಲ್ಲಿ ಸರ್ಬಿಯದ ವಿಕ್ಟರ್ ಟ್ರಾಯ್ಕಿ 6-3, 6-4, 7-6 ರಲ್ಲಿ ತಮ್ಮದೇ ದೇಶದ ಜಾಂಕೊ ತಿಪ್ಸರೆವಿಕ್ಗೆ ಆಘಾತ ನೀಡಿದರೆ, ರಷ್ಯಾದ ಮಿಖಾಯಿಲ್ ಯೂಜ್ನಿ 6-4, 7-5, 7-5 ರಲ್ಲಿ ಹಾಲೆಂಡ್ನ ರಾಬಿನ್ ಹಾಸ್ ವಿರುದ್ಧ ಜಯ ಸಾಧಿಸಿದರು.

ಶರ್ಪೋವಾಗೆ ಜಯ: ಮೂರನೇ ಶ್ರೇಯಾಂಕದ ಆಟಗಾರ್ತಿ ಶರ್ಪೋವಾ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ 7-6, 6-3 ರಲ್ಲಿ ಫ್ರಾನ್ಸ್ನ ಕ್ರಿಸ್ಟಿನಾ ಮಡೆನೋವಿಕ್ ಅವರನ್ನು ಸೋಲಿಸಿದರು. ಪ್ರಬಲ ಪೈಪೋಟಿ ಕಂಡುಬಂದ ಮೊದಲ ಸೆಟ್ಅನ್ನು ಟೈಬ್ರೇಕರ್ನಲ್ಲಿ ಗೆದ್ದುಕೊಂಡ ಶರ್ಪೋವಾ ಎರಡನೇ ಸೆಟ್ಅನ್ನು ಸುಲಭವಾಗಿ ತಮ್ಮದಾಗಿಸಿಕೊಂಡರು.

ಎರಡನೇ ಶ್ರೇಯಾಂಕದ ಆಟಗಾರ್ತಿ ಬೆಲಾರಸ್ನ ವಿಕ್ಟೋರಿಯಾ ಅಜರೆಂಕಾ 6-1, 6-2 ರಲ್ಲಿ ಪೋರ್ಚುಗಲ್ನ ಮರಿಯಾ ಜಾವೊ ಕೊಹ್ಲೆರ್ ವಿರುದ್ಧ ಗೆದ್ದರು. ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಅಜರೆಂಕಾ ಎರಡನೇ ಸೆಟ್ನ ಎರಡನೇ ಗೇಮ್ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದು ಬಲ ಮೊಣಕಾಲಿಗೆ ಗಾಯಮಾಡಿಕೊಂಡರು. ಆ ಬಳಿಕ ನೋವನ್ನು ಸಹಿಸಿಕೊಂಡೇ ಆಡಿ ಮುಂದಿನ ಸುತ್ತು ಪ್ರವೇಶಿಸಿದರು.

ಫ್ರಾನ್ಸ್ನ ಅಲೈಜ್ ಕಾರ್ನೆಟ್ 4-6, 6-3, 6-1 ರಲ್ಲಿ ಅಮೆರಿಕದ ವಾನಿಯಾ ಕಿಂಗ್ ಮೇಲೆ ಪ್ರಯಾಸದ ಗೆಲುವು ಪಡೆದರೆ, ಪೋರ್ಟೊರಿಕೊದ ಮೋನಿಕಾ ಪ್ಯುಗ್ 6-3, 6-2 ರಲ್ಲಿ ಇಟಲಿಯ ಸಾರಾ ಎರಾನಿಗೆ ಆಘಾತ ನೀಡಿದರು. ಐದನೇ ಶ್ರೇಯಾಂಕ ಹೊಂದಿದ್ದ ಎರಾನಿ ಎದುರಾಳಿಗೆ ತಕ್ಕ ಪೈಪೋಟಿ ನೀಡದೆಯೇ ಸೋಲು ಅನುಭವಿಸಿದರು.

ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ಸರ್ಬಿಯದ ಅನಾ ಇವನೋವಿಚ್ 7-6, 6-0 ರಲ್ಲಿ ಫ್ರಾನ್ಸ್ನ ವರ್ಜೀನಿಯಾ ರಜಾನೊ ವಿರುದ್ಧವೂ, ಸರ್ಬಿಯದ ಎಲೆನಾ ಜಾಂಕೋವಿಚ್ 6-2, 7-5 ರಲ್ಲಿ ಜೊಹಾನಾ ಕೊಂಟಾ ಎದುರೂ ಗೆಲುವು ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.