ಶನಿವಾರ, ಮೇ 21, 2022
25 °C

ರಫ್ತು: ಶೇ 20 ಪ್ರಗತಿ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ (2012-13) ರೂ 19.80 ಲಕ್ಷ ಕೋಟಿ  ರಫ್ತು ವಹಿವಾಟು ಗುರಿಯನ್ನು ಸರ್ಕಾರ ನಿಗದಿಪಡಿಸಿದೆ. ಕಳೆದ ಹಣಕಾಸು ವರ್ಷಕ್ಕೆ (2011-12) ಹೋಲಿಸಿದರೆ (ರೂ16. 6 ಲಕ್ಷ ಕೋಟಿ) ಈ ಬಾರಿ ಶೇ 20ರಷ್ಟು ಪ್ರಗತಿ ನಿರೀಕ್ಷಿಸಲಾಗಿದೆ ಎಂದು ಕೈಗಾರಿಕಾ ಸಚಿವ ಆನಂದ ಶರ್ಮಾ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಶೇ 20ರಷ್ಟು ಪ್ರಗತಿ ದಾಖಲಿಸಲು ಶೇ 2ರಷ್ಟು ಬಡ್ಡಿ ಸಬ್ಸಿಡಿ ಯೋಜನೆಯನ್ನು ಮುಂದಿನ ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ. ಸರ್ಕಾರದ 7 ಅಂಶಗಳ ರಫ್ತು ಉತ್ತೇಜನ ಕೊಡುಗೆ ಅಂಗವಾಗಿ ಹಾಗೂ `ಐದು ವರ್ಷಗಳ ವಿದೇಶಿ ವ್ಯಾಪಾರ ನೀತಿ~ಗೆ ಪೂರಕವಾಗಿ ಈ ಕ್ರಮಗಳು ಜಾರಿಗೆ ಬರಲಿವೆ ಎಂದು ಅವರು ಹೇಳಿದರು.`ಸದ್ಯದ ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಈ ಕ್ರಮಗಳು ರಫ್ತುದಾರರ ವಿಶ್ವಾಸ ವೃದ್ಧಿಸಲಿದೆ. ಇದರ ಜತೆಗೆ ಶೀಘ್ರದಲ್ಲಿಯೇ ವಿಶೇಷ ಆರ್ಥಿಕ ವಲಯ  ಮತ್ತು ರಫ್ತು ಆಧಾರಿತ ಘಟಕ ಯೋಜನೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು. 2011ರಲ್ಲಿ ರಫ್ತು ವಹಿವಾಟು ಶೇ 11ರಷ್ಟು ಪ್ರಗತಿ ಕಂಡಿತ್ತು. ಈ ಬಾರಿ ಶೇ 20ರಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ ಎಂದರು.

ವಿತ್ತೀಯ ಕೊರತೆ ಹೆಚ್ಚಳ

ನವದೆಹಲಿ (ಪಿಟಿಐ):ಕಳೆದ ಹಣಕಾಸು ವರ್ಷದಲ್ಲಿ (2011-12) ದೇಶದ ವಿತ್ತೀಯ ಕೊರತೆ ಅಂತರವು ಒಟ್ಟು `ಜಿಡಿಪಿ~ಯ ಶೇ 5.7ರಷ್ಟಾಗಿದೆ. ಇತ್ತೀಚೆಗೆ `ಸಿಎಜಿ~ ಬಿಡುಗಡೆ ಮಾಡಿರುವ ಅಂಕಿ ಅಂಶದಂತೆ ಸರ್ಕಾರದ ಒಟ್ಟು ವರಮಾನ ಸಂಗ್ರಹ ಮತ್ತು ಒಟ್ಟು ವೆಚ್ಚದ ನಡುವಿನ ಅಂತರವು ್ಙ5,09,731 ಕೋಟಿಗಳಿಗೆ ಏರಿಕೆ ಕಂಡಿದೆ.ಪ್ರಸಕ್ತ ಹಣಕಾಸು ವರ್ಷದಲ್ಲಿ (2012-13) ಆಹಾರ, ರಸಗೊಬ್ಬರ ಮತ್ತು ತೈಲ ಸಬ್ಸಿಡಿಗಾಗಿ ಕ್ರಮವಾಗಿ ರೂ 75, ರೂ 61  ಮತ್ತು ರೂ 43 ಸಾವಿರ ಕೋಟಿ ಮೀಸಲಿಡಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.