ಗುರುವಾರ , ಆಗಸ್ಟ್ 6, 2020
24 °C

ರಮ್ಯಾ ರಂಗಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಮ್ಯಾ ರಂಗಪ್ರವೇಶ

ನಾಟ್ಯ ನಿವೇದನಂ: ಶುಕ್ರವಾರ ರಮ್ಯಾ ಕಡಾಂಬಿ ಅವರ ಭರತನಾಟ್ಯ ರಂಗಪ್ರವೇಶ.

ರಮ್ಯಾ, ಕಲಾಭೂಮಿಗೆ ನಾಗಭೂಷಣ್ ಅವರ ಶಿಷ್ಯೆಯಾಗಿ ಆರಾಧನಾ ಸಂಸ್ಥೆ ಮೂಲಕ ಬಂದವರು.ಹತ್ತನೇ ವಯಸ್ಸಿನಲ್ಲಿ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ನಾಟ್ಯದೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಗುರು ಗಾನಶ್ರೀ ಶ್ರೀನಿವಾಸುಲು ಅವರ ಮಾರ್ಗದರ್ಶನದಲ್ಲಿ ಕಲಿಯುತ್ತ್ದ್ದಿದು ಅಲ್ಲೂ ಜೂನಿಯರ್ ಮುಗಿಸಿದ್ದಾರೆ.ಪ್ರಸ್ತುತ ಸಂತ ಜೋಸೆಫ್ ಕಾಲೇಜಿನಲ್ಲಿ ವಿಜ್ಞಾನದ ಪ್ರಥಮ ವರ್ಷದ ಪದವಿ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಈಕೆಯ ಎಲ್ಲಾ ಸಾಧನೆಗಳ ಹಿಂದೆ ತಂದೆ ರಾಜ್‌ಗೋಪಾಲ್ ಹಾಗೂ ತಾಯಿ ಸೌಮ್ಯ ಅವರ ಪ್ರೋತ್ಸಾಹವೂ ಸಾಕಷ್ಟಿದೆ.ಅತಿಥಿಗಳು: ಕೃಷ್ಣ ಕಲಾಕ್ಷೇತ್ರದ ನಿರ್ದೇಶಕ ತಿರುಸ್ವಾಮಿ, ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಅಧೀನ ಕಾರ್ಯದರ್ಶಿ ರಾಮಚಂದ್ರ ರಾವ್, ನಿಬಂಧಕ ಎಸ್.ಐ. ಭಾವಿಕಟ್ಟಿ, ವಿಮರ್ಶಕ ಸೂರ್ಯಪ್ರಸಾದ್. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 6.30.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.